Homeಮುಖಪುಟಯುಪಿ ಚುನಾವಣೆ-2022: ಯುವಜನರಿಗೆ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ!

ಯುಪಿ ಚುನಾವಣೆ-2022: ಯುವಜನರಿಗೆ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ!

- Advertisement -
- Advertisement -

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಯುವ ಪ್ರಣಾಳಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಕ್ಕಾಗಿ ತನ್ನ ವಿಷನ್ ಡಾಕ್ಯುಮೆಂಟ್‌ನಲ್ಲಿ ನಿರುದ್ಯೋಗ ಸೇರಿದಂತೆ ಯುವಕರಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದೆ.

“ಭಾರತಕ್ಕೆ ಹೊಸ ದೃಷ್ಟಿಕೋನ ಬೇಕು ಎಂಬುವುದು ನಮ್ಮ ತಿಳುವಳಿಕೆ ಮತ್ತು ನಂಬಿಕೆ. ಭಾರತದ ಹೊಸ ದೃಷ್ಟಿಕೋನಕ್ಕಾಗಿ, ನೀವು ಉತ್ತರ ಪ್ರದೇಶದಿಂದ ಪ್ರಾರಂಭಿಸಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ:ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

“ಉದ್ಯೋಗ ಸೃಷ್ಟಿ ಮಾಡುವುದನ್ನು ಮರೆತುಬಿಡಿ, ಇರುವ ಉದ್ಯೋಗವನ್ನೇ ಯುವಕರು ಇಂದು ಕಳೆದುಕೊಂಡಿದ್ದಾರೆ. ಯಾಕೆಂದರೆ ಎಲ್ಲಾ ಕೆಲಸಗಳನ್ನು 2-3 ಕೈಗಾರಿಕೋದ್ಯಮಿಗಳಿಗೆ ನೀಡಲಾಗುತ್ತಿದೆ. ಆದ್ದರಿಂದ, ಕಾಂಗ್ರೆಸ್ ಯುಪಿಯ ಯುವಕರನ್ನು ಮಾತನಾಡಿ ನಾವು ನಿಮಗೆ ಹೇಗೆ ಉದ್ಯೋಗ ಸೃಷ್ಟಿಸಬಹುದು ಎಂದು ನಿರ್ಧರಿಸಿದೆ” ಎಂದು ದೆಹಲಿಯ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ವಿಷನ್ ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡುತ್ತಾ ರಾಹುಲ್ ಗಾಂಧಿ ಹೇಳಿದ್ದಾರೆ.

ವಿಷನ್‌ ಡಾಕ್ಯುಮಂಟ್‌ ಅನ್ನು ಯುಪಿಯ ಯುವಕರೊಂದಿಗೆ ಮಾತನಾಡಿ ಮತ್ತು ಸಂವಾದ ನಡೆಸಿದ ನಂತರ ಯುವಜನರಿಗಾಗಿ ಮಾಡಲಾಗಿದೆ ಎಂದು ಕಾಂಗ್ರೆಸ್‌‌ ಹೇಳಿದೆ.

“ಅವರು ಎದುರಿಸುತ್ತಿರುವ ಕಷ್ಟಗಳು ಮತ್ತು ಅವರ ಸಮಸ್ಯೆಗಳೇನು ಎಂಬುದನ್ನು ನಾವು ನೋಡಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳು ಬಂದು 25 ಲಕ್ಷ ಉದ್ಯೋಗಗಳು, 30 ಲಕ್ಷ ಉದ್ಯೋಗಗಳು ಎಂದು ಭರವಸೆ ನೀಡುತ್ತವೆ. ಆದರೆ ಅವರು ಅದನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಯಾರೂ ವಿವರವಾಗಿ ವಿವರಿಸುವುದಿಲ್ಲ. ಕಾಂಗ್ರೆಸ್ ತನ್ನ ಯುವ ಪ್ರಣಾಳಿಕೆಯಲ್ಲಿ ಇದನ್ನು ಮಾಡಿದೆ” ಎಂದು ಪಕ್ಷದ ಉತ್ತರ ಪ್ರದೇಶದ ಉಸ್ತುವಾರಿ, ಪಕ್ಷದ ಪ್ರಧಾನ ಕಾರ್ಯದರ್ಶಿಯು ಆಗಿರುವ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ:ಯುಪಿ ಚುನಾವಣೆ: ಬಿಜೆಪಿ ಬಿಟ್ಟು ಏಕಾಂಗಿ ಸ್ಪರ್ಧೆ ಘೋಷಿಸಿದ ಜೆಡಿಯು

“ಇಂದು ಯುಪಿಯಲ್ಲಿ ಯುವಕರು ಉದ್ಯೋಗ ಪಡೆಯುವಲ್ಲಿ ಅಪಾರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಅರ್ಹರಾಗಿದ್ದರೂ ನಿರುದ್ಯೋಗಿಗಳಾಗಿದ್ದಾರೆ. ಅವರು ಬಯಸಿದ ಮತ್ತು ಅಗತ್ಯವಿರುವ ಉದ್ಯೋಗವನ್ನು ಪಡೆಯಲು ನಾವು ಅವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಅಷ್ಟೇ ಅಲ್ಲದೆ, ಪರೀಕ್ಷೆಯ ಸಮಯದಲ್ಲಿ ಯುವಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತಿದ್ದೇವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿದ್ದೇವೆ. ಪರೀಕ್ಷೆಗಳು ಮತ್ತು ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗ ಕ್ಯಾಲೆಂಡರ್ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಪ್ರಮುಖ ವಿಷಯವಾಗಿದ್ದು, ಹೆಚ್ಚಿನ ಅಗತ್ಯವಿದೆ. ನಾವು ಉತ್ತರ ಪ್ರದೇಶದಲ್ಲಿ ವಾರ್ಷಿಕವಾಗಿ ಯುವ ಉತ್ಸವವನ್ನು ಆಯೋಜಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

2014 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬಿಜೆಪಿ ಪ್ರಸ್ತಾಪಿಸಿದ ಪ್ರಣಾಳಿಕೆಯಾದ ‘ದೃಷ್ಟಿ’ಯು ಸಂಪೂರ್ಣವಾಗಿ ದುರಂತವಾಗಿದೆ ಎಂದು ಉಭಯ ನಾಯಕರು ಹೇಳಿದ್ದಾರೆ.

ಇದನ್ನೂ ಓದಿ:ಯುಪಿ: ಹಿಂದುತ್ವದ ಐಕಾನ್‌ ಆಗಿದ್ದ ಯೋಗಿ ತಮ್ಮ ಚರಿಷ್ಮಾ ಕಳೆದುಕೊಂಡಿದ್ದಾರಾ?

“ಭಾರತ ಹೊಂದಿರುವ ಜನಸಂಖ್ಯಾ ಲಾಭಾಂಶವನ್ನು ಅವರು ಜನಸಂಖ್ಯಾ ವಿಪತ್ತಾಗಿ ಪರಿವರ್ತಿಸುತ್ತಿದ್ದಾರೆ. ಬಿಜೆಪಿಯ ಕೆಲವು ನಾಯಕರು ಕೂಡಾ ಏನೋ ಒಂದು ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇಬ್ಬರೂ ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಪರೂಪದ ಸಂದರ್ಭಗಳಲ್ಲಿ ಇದೂ ಒಂದಾಗಿದೆ.

ಉತ್ತರ ಪ್ರದೇಶದಲ್ಲಿ ಸಂಪೂರ್ಣವಾಗಿ ಕುಸಿದಿರುವ ಕಾಂಗ್ರೆಸ್, ಯುವಕರು ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ 40% ದಷ್ಟು ಟಿಕೆಟ್‌ಗಳನ್ನು ಮೀಸಲಿಡುವುದಾಗಿ ಪಕ್ಷ ಘೋಷಿಸಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ:ಯುಪಿ ಚುನಾವಣೆ-2022: ಏಕಾಂಗಿ ಸ್ಪರ್ಧೆ ಎಂದ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...