ಉತ್ತರ ಪ್ರದೇಶದ ‘ದರೋಡೆಕೋರರು ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ’ಯು “ಕ್ರೂರ” ಎಂದು ತೋರುತ್ತಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠವು ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವಾಗ ಈ ಹೇಳಿಕೆ ನೀಡಿದೆ. ಯುಪಿ ದರೋಡೆಕೋರರ ಕಾಯಿದೆ
ಕಾಸ್‌ಗಂಜ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ತನ್ನ ವಿರುದ್ಧದ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದ ತನ್ನ ಅರ್ಜಿಯನ್ನು ವಜಾಗೊಳಿಸಿದ ಮೇ 2023 ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಕಾಯ್ದೆಯನ್ನು ಅವಲೋಕನ ಮಾಡಿದ ಪೀಠವು, “ಈ ಕಾಯಿದೆಯು ಕ್ರೂರವಾಗಿ ತೋರುತ್ತಿದೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮೇಲ್ಮನವಿಯನ್ನು ಪರಿಗಣಿಸುವುದಾಗಿ ಎಂದು ಪೀಠವು ಹೇಳಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭ, ಅರ್ಜಿಯ ಕುರಿತು ಉತ್ತರ ಪ್ರದೇಶ ಸರ್ಕಾರ ಮತ್ತು ಇತರರಿಂದ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್ ಕೇಳಿತ್ತು ಮತ್ತು ಮಧ್ಯಂತರ ಆದೇಶದ ಮೂಲಕ, ಅರ್ಜಿದಾರರ ವಿರುದ್ಧ ದರೋಡೆಕೋರರ ಕಾಯಿದೆಯ ಅಡಿಯಲ್ಲಿ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಆದೇಶಿಸಿತ್ತು. ಯುಪಿ ದರೋಡೆಕೋರರ ಕಾಯಿದೆ
ಬುಧವಾರ ಅರ್ಜಿದಾರರ ಪರ ವಕೀಲರು, ಗಂಗಾ ನದಿಯಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ 1986 ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದರು. ಈ ಹಿಂದೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು ಎಂದು ವಕೀಲರು ವಾದಿಸಿದ್ದಾರೆ.
“ಅವರು ಒಂದೇ ಆರೋಪಕ್ಕಾಗಿ ನನ್ನ ಮೇಲೆ ಎರಡು ಬಾರಿ ಪ್ರಕರಣ ದಾಖಲು ಮಾಡಿದ್ದಾರೆ” ಎಂದು ವಕೀಲರು ವಾದಿಸಿದ್ದಾರೆ. ದರೋಡೆಕೋರರ ಕಾಯಿದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಮತ್ತು
ಉತ್ತರ ಪ್ರದೇಶದ ಈ ಕಾಯಿದೆಯ ಕೆಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಪ್ರತ್ಯೇಕ ಮನವಿಯು ಸುಪ್ರಿಂಕೋರ್ಟ್ ಮುಂದೆ ಬಾಕಿಯಿದೆ. ನವೆಂಬರ್ 29 ರಂದು, ಕಾಯಿದೆಯ ಕೆಲವು ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸುವ ಪ್ರತ್ಯೇಕ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಮತ್ತು ಅರ್ಜಿಯ ಬಗ್ಗೆ ಪ್ರತಿಕ್ರಿಯೆಯನ್ನು ಕೋರಿ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಬಿಬಿಸಿ 2024ರ ಸ್ಪೂರ್ತಿದಾಯಕ ಮಹಿಳೆ ಪಟ್ಟಿ | ಭಾರತದ ವಿನೇಶ್ ಫೋಗಟ್ ಸೇರಿ ಮೂವರಿಗೆ ಸ್ಥಾನ
ಬಿಬಿಸಿ 2024ರ ಸ್ಪೂರ್ತಿದಾಯಕ ಮಹಿಳೆ ಪಟ್ಟಿ | ಭಾರತದ ವಿನೇಶ್ ಫೋಗಟ್ ಸೇರಿ ಮೂವರಿಗೆ ಸ್ಥಾನ


