ಉತ್ತರ ಪ್ರದೇಶದ ಉಪಚುನಾವಣೆ ಮತದಾನದ ದಿನದಂದೆ ಮೈನ್‌ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ 23 ವರ್ಷದ ದಲಿತ ಯುವತಿಯ ನಗ್ನ ಶವ ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕೊಲೆಯಾದ ಯುವತಿಯನ್ನು ದುರ್ಗಾ ಎಂದು ಗುರುತಿಸಲಾಗಿದ್ದು, ಅವರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯುಪಿ
ಮೃತ ಯುವತಿಯ ಶವ ಬುಧವಾರ ಕರ್ಹಾಲ್ ಪ್ರದೇಶದಲ್ಲಿ ಗೋಣಿಚೀಲದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ರಾಜಕೀಯ ಕಾರಣಕ್ಕೆ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ ಎಂದು ಮೈನ್‌ಪುರಿ ಪೊಲೀಸ್ ಅಧೀಕ್ಷಕ (ಎಸ್‌ಪಿ), ವಿನೋದ್ ಕುಮಾರ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಂದು ಬೆಳಗ್ಗೆ ಕರ್ಹಾಲ್‌ನ 23 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಆಕೆಯ ತಂದೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಒಬ್ಬರು ಪ್ರಶಾಂತ್ ಯಾದವ್ ಮತ್ತು ಇನ್ನೊಬ್ಬರು ಮೋಹನ್ ಕಥೇರಿಯಾ, ಇಬ್ಬರನ್ನೂ ಬಂಧಿಸಲಾಗಿದೆ. ಬಿಜೆಪಿಗೆ ಮತ ಹಾಕುವುದನ್ನು ತಡೆಯುವ ಸಲುವಾಗಿ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಹೇಳಿಕೆ ನೀಡಿದ್ದಾರೆ” ಎಂದು ಮೈನ್‌ಪುರಿ ಎಸ್‌ಪಿ ತಿಳಿಸಿದ್ದಾರೆ.
ಈ ನಡುವೆ, ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಸ್ಥಾನಗಳಾದ ಕತೇಹಾರಿ (ಅಂಬೇಡ್ಕರ್ ನಗರ), ಕರ್ಹಾಲ್ (ಮೈನ್‌ಪುರಿ), ಮೀರಾಪುರ್ (ಮುಜಾಫರ್‌ನಗರ), ಘಾಜಿಯಾಬಾದ್, ಮಜವಾನ್ (ಮಿರ್ಜಾಪುರ), ಸಿಸಮಾವು (ಕಾನ್ಪುರ್ ನಗರ), ಖೈರ್ (ಅಲಿಗಢ), ಫುಲ್ಪುರ್ (ಪ್ರಯಾಗ್ರಾಜ್) ಮತ್ತು ಕುಂದರ್ಕಿ (ಮೊರಾದಾಬಾದ್) ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯುತ್ತಿದೆ. ಯುಪಿ
ಈ ಎಲ್ಲಾ 9 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮಾತ್ರ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ಇಂಡಿಯಾ ಒಕ್ಕೂಟದ ಪಕ್ಷವಾದ ಕಾಂಗ್ರೆಸ್ ಅವರನ್ನು ಬೆಂಬಲಿಸುತ್ತಿದೆ. ಆದರೆ ಬಿಎಸ್‌ಪಿ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ಚುನಾವಣೆ ಬಗ್ಗೆ ಸೋಮವಾರ ಮಾತನಾಡಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ವಿಧಾನಸಭಾ ಉಪಚುನಾವಣೆಯು ”ಬಾಬಾಸಾಹೇಬ್ ಭೀಮ್ ರಾವ್ ಅಂಬೇಡ್ಕರ್” ಮತ್ತು “ಬಾಬಾ”ನನ್ನು ನಂಬುವವರ ನಡುವಿನ ಹೋರಾಟವಾಗಿದೆ ಎಂದು ಹೇಳಿದ್ದರು.
“ಇದು ಬಾಬಾ ಸಾಹೇಬರನ್ನು ನಂಬುವವರು ಮತ್ತು ‘ಬಾಬಾ’ರನ್ನು ನಂಬುವವರ ನಡುವಿನ ಹೋರಾಟವಾಗಿದೆ. ಒಂದು ಕಡೆ ಸಂವಿಧಾನವನ್ನು ರಚಿಸಿದವರು ಮತ್ತು ರಕ್ಷಿಸುವವರು ಮತ್ತೊಂದು ಕಡೆ, ಅದನ್ನು ನಾಶಪಡಿಸುವವರು” ಎಂದು ಅಖಿಲೇಶ್ ಯಾದವ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಇಲ್ಲಿಯವರೆಗೆ, ಸಂವಿಧಾನವು ‘ಹಿಂದುಳಿದ ವರ್ಗ, ದಲಿತ, ಮತ್ತು ಅಲ್ಪಸಂಖ್ಯಾತ(ಪಿಡಿಎ)’ರನ್ನು ರಕ್ಷಿಸಿದೆ; ಈಗ ಪಿಡಿಎ ಸಂವಿಧಾನವನ್ನು ರಕ್ಷಿಸುತ್ತದೆ! ಏಕತೆಯನ್ನು ಘೋಷಿಸಿ. ಜೈ ಸಂವಿಧಾನ, ಜೈ ಪಿಡಿಎ!,” ಎಂದು ಅವರು ಹೇಳಿದ್ದಾರೆ. ಅಖಿಲೇಶ್ ಅವರು ಲೋಕಸಭೆ ಚುನಾವಣೆಗೂ ಮುನ್ನ, ಪಿಡಿಎ ಅಂದರೆ ಪಿಚ್‌ಡೆ, ದಲಿತ, ಅಲ್ಪಸಂಖ್ಯಾಕ್ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ) ಎಂಬ ಘೋಷಣೆಯನ್ನು ರೂಪಿಸಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ | ಚುನಾವಣೆ ನಡುವೆ ಬಿಟ್ ಕಾಯಿನ್ ಸದ್ದು : ಎಂವಿಎ-ಬಿಜೆಪಿ ನಾಯಕರ ನಡುವೆ ವಾಗ್ಯುದ್ಧ
ಮಹಾರಾಷ್ಟ್ರ | ಚುನಾವಣೆ ನಡುವೆ ಬಿಟ್ ಕಾಯಿನ್ ಸದ್ದು : ಎಂವಿಎ-ಬಿಜೆಪಿ ನಾಯಕರ ನಡುವೆ ವಾಗ್ಯುದ್ಧ


