- Advertisement -
- Advertisement -
ಮುಜಾಫರ್‌ನಗರ ಜಿಲ್ಲೆಯ ಭೆನ್ಸಿ ಗ್ರಾಮದಲ್ಲಿ ದಲಿತರೊಬ್ಬರ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಹಾಗೂ ಜಾತಿವಾದದ ಹೇಳಿಕೆ ನೀಡಿದ ಆರೋಪದ ಮೇಲೆ ಗ್ರಾಮದ ಮುಖಂಡ ಹಾಗೂ ಇತರ ಮೂವರ ವಿರುದ್ಧ ಖತೋಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
“ಈ ಬಗ್ಗೆ ಸೋನಿಯಾ ಎಂಬ ದಲಿತ ದಮುದಾಯದವರು ದೂರು ನೀಡಿದ್ದು, ಶವವನ್ನು ಗ್ರಾಮದ ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದಾಗ, ಗ್ರಾಮದ ಮುಖ್ಯಸ್ಥ ಅಮಿತ್ ಅಹ್ಲಾವತ್ ನೇತೃತ್ವದ ಗುಂಪು ಅಡ್ಡಿಪಡಿಸಿತು. ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರು” ಎಂದು ಸರ್ಕಲ್ ಆಫೀಸರ್ ರಮಾಶಿಶ್ ಯಾದವ್ ಹೇಳಿದರು.
ಪೊಲೀಸರು ಮಧ್ಯಪ್ರವೇಶಿಸಿ ನವೆಂಬರ್ 9 ರಂದು ಅಂತ್ಯಸಂಸ್ಕಾರಕ್ಕೆ ಅನುಕೂಲ ಮಾಡಿಕೊಟ್ಟರು. ಜಾತಿ ಆಧಾರಿತ ತಾರತಮ್ಯ ಮತ್ತು ದೌರ್ಜನ್ಯಗಳಿಗೆ ಸಂಬಂಧಿಸಿದ ಸೇರಿದಂತೆ ಬಿಎನ್‌ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಇದನ್ನೂ ಓದಿ; ಮಧ್ಯಪ್ರದೇಶ: ಚುನಾವಣೋತ್ತರ ಹಿಂಸಾಚಾರದಲ್ಲಿ ದಲಿತರ ಗ್ರಾಮಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು


