ರಾಹುಲ್ ಗಾಂಧಿ ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಎತ್ತಿಹಿಡಿಯುವ ಬಗ್ಗೆ ಮಾತನಾಡಿದ್ದು, ಆದರೆ ಅವರು ಈ ರೀತಿಯ ಚರ್ಚೆ ನಡೆಸಿದಾಗೆಲ್ಲಾ ಬಿಜೆಪಿಗೆ ಏಕೆ ಸಮಸ್ಯೆ ಆಗುತ್ತಿದೆ ಎಂದು ಪಕ್ಷವು ಪ್ರಶ್ನಿಸಿದೆ.
ಭಾರತಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ನಿಲುವುಗಳಿಗೆ ಹೆಸರುವಾಸಿಯಾದ ಡೆಮೋಕ್ರಾಟ್ ಪಕ್ಷದ ಇಲ್ಹಾನ್ ಒಮರ್ ಅವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ ಎಂಬ ಅರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಆಡಳಿತದಲ್ಲಿ ಬಿಜೆಪಿ ಇದೆ, ಅವರು ಅದನ್ನು ನಂಬುದುದಾದರೆ ಅಮೆರಿಕಾದ ರಾಯಭಾರಿಯನ್ನು ಕರೆಸಿ ಕ್ರಮ ಕೈಗೊಳ್ಳಿ ಎಂದು ಪಕ್ಷವು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಅವರು ಮೀಸಲಾತಿ ಕುರಿತು ಗಾಂಧಿಯವರ ಹೇಳಿಕೆಗೆ ತೀವ್ರವಾಗಿ ಟೀಕಿಸಿ, ಇದು ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ಮುಖವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ ಎಂದು ಹೇಳಿದ್ದರು.
Standing with forces that conspire to divide the country and making anti-national statements have become a habit for Rahul Gandhi and the Congress party. Whether it is supporting the JKNC's anti-national and anti-reservation agenda in J&K or making anti-India statements on…
— Amit Shah (@AmitShah) September 11, 2024
ಇದನ್ನೂಓದಿ: “ಪ್ರತಿಯೊಬ್ಬ ನಟಿಯರದ್ದೂ ಒಂದೊಂದು ಕಥೆಯಿದೆ, ಅದು ಎಲ್ಲಾ ನಟರಿಗೆ ಗೊತ್ತಿದೆ”: ರಾಧಿಕಾ ಶರತ್ ಕುಮಾರ್
ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, “ಅವರಿಗೆ ಕ್ರಮ ಕೈಗೊಳ್ಳಲು ಹೇಳಿ, ನಂತರ ನಾವು ಪ್ರಧಾನಿ ಮತ್ತು ಗೃಹ ಮಂತ್ರಿ ಇಬ್ಬರ ಕೃತ್ಯಗಳನ್ನೂ ಬಹಿರಂಗಪಡಿಸುತ್ತೇವೆ. ಪ್ರಧಾನಿ ವಿದೇಶಕ್ಕೆ ಹೋಗಿ ಭಾರತ ಮತ್ತು ಭಾರತೀಯರ ವಿರುದ್ಧ ಭಯಾನಕ ಹೇಳಿಕೆಗಳನ್ನು ಮಾಡುತ್ತಾರೆ. ಅದು ದೇಶವಿರೋಧಿ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ನಾವು ಭಾರತದ ಸಂವಿಧಾನವನ್ನು ಎತ್ತಿಹಿಡಿಯುವ ಬಗ್ಗೆ ಮಾತನಾಡುತ್ತಿದ್ದೇವೆ ಮತ್ತು ಅದು ಹೇಗೆ ರಾಷ್ಟ್ರವಿರೋಧಿ ಆಗಲು ಸಾಧ್ಯ? ನಾವು ಸಂವಿಧಾನವನ್ನು ಎತ್ತಿಹಿಡಿಯುವ ಬಗ್ಗೆ ಮಾತನಾಡುವಾಗ ಬಿಜೆಪಿಗೆ ಯಾಕೆ ಸಮಸ್ಯೆಯಾಗುತ್ತದೆ? ಅವರು ಯಾಕೆ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ?” ಎಂದು ಅವರು ಕೇಳಿದ್ದಾರೆ.
ವಿಡಿಯೊ ನೋಡಿ: ಗದ್ದರ್ ಎಂದರೇನೇ ಹೋರಾಟ


