ಕೊರೊನಾ ಕಾರಣದಿಂದ ಸ್ಥಗಿತಗೊಂಡಿರುವ ಎಲ್ಲಾ ಕ್ಷೇತ್ರಗಳೂ ಇಂದಿ ಸ್ವಲ್ಪಮಟ್ಟಿಗೆ ಪುನಃಶ್ಚೇತನಗೊಳ್ಳುವತ್ತ ಸಾಗುತ್ತಿವೆ. ರಂಗಭೂಮಿಯೂ ಇದರಿಂದ ಹೊರತಾಗಿಲ್ಲ. ಆನ್‌ಲೈನ್ ಅಭಿನಯ ತರಗತಿಗಳಿಂದ ಹಿಡಿದು, ಆನ್‌ಲೈನ್ ಮೂಲಕವೇ ನಾಟಕಗಳ ಪ್ರದರ್ಶನ ನೀಡುವ ಹಂತಕ್ಕೆ ಬಂದಿದೆ. ಇದಕ್ಕೆ ಸಾಕ್ಷಿಯಾಗಿ ವಿಕಸಂ ಎಂಬ ತಂಡವು ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕದ ಆನ್‌ಲೈನ್ ಪ್ರದರ್ಶನವನ್ನು ಇಂದು ಮತ್ತು ನಾಳೆ ಪ್ರದರ್ಶಿಸುತ್ತದೆ.
ವಿಶ್ವದಾದ್ಯಂತ ಕೊರೊನಾ ವೈರಸ್ ತನ್ನ ಕಬಂದ ಬಾಹುಗಳನ್ನು ಚಾಚಿದ್ದು, ಸೋಂಕಿನ ಜೊತೆಗೆ ಜನ ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟದಿಂದ ಪಡಬಾರದ ಪಾಡು ಪಡುತ್ತಿದ್ದಾರೆ. ಇದರ ಜೊತೆಗೆ ಕೆಲಸ ಗೊತ್ತಿದ್ದರೂ ಸಹ ಕೆಲಸ ಇಲ್ಲದ ಸ್ಥಿತಿಯಲ್ಲಿ ಅನೇಕರಿದ್ದಾರೆ.
ಕಳೆದ ಆರೇಳು ತಿಂಗಳುಗಳಿಂದ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳು ಸ್ಥಬ್ಧಗೊಂಡಿವೆ. ಇದಕ್ಕೆ ರಂಗಭೂಮಿಯೂ ಹೊರತಾಗಿಲ್ಲ. ಕೊರೊನಾ ನಿವಾರಣೆಯ ನಂತರ ರಂಗಮಂದಿರಗಳು ತೆರೆದರೂ, ಮೊದಲಿನಂತೆ ಪ್ರೇಕ್ಷಕರು ಬರುವುದು ಸಧ್ಯದ ಪರಿಸ್ಥಿತಿಯಲ್ಲಿ ಕೊಂಚ ಕಷ್ಟವೇ.
ಕಲಾವಿದರು, ರಂಗಕರ್ಮಿಗಳು ತಮ್ಮ ಕಲೆಯನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ ಕಲಾಕ್ಷೇತ್ರಗಳನ್ನು ಮುಚ್ಚಿರುವುದರಿಂದ ಹೊಸ ಹೊಸ ಪ್ರಯತ್ನಗಳನ್ನು ಮಾಡುವ ತಯಾರಿಯಲ್ಲಿದ್ದಾರೆ. ಇದೆ ದಾರಿಯಲ್ಲಿ ಇನ್ನೊಂದು ತಂಡ ಸಿದ್ಧವಾಗಿದ್ದು, ಪ್ರೇಕ್ಷಕರಿರುವಲ್ಲೇ ನಾಟಕ ತೋರಿಸುವ ಪಣ ತೊಟ್ಟಿದೆ.
ಇದನ್ನೂ ಓದಿ: ಹಿಂದಿ ಹೇರಿಕೆ ಬಗ್ಗೆ ನಿರ್ದೇಶಕ ಪವನ್ ಕುಮಾರ್ ’ಯೂ ಟರ್ನ್’!
ಹೀಗಾಗಿ ಆನ್‌ಲೈನ್ ಮುಖೇನ ನಾಟಕ ಪ್ರಸ್ತುತ ಪಡಿಸುವ ಕೆಲಸ ವಿಕಸಂ ಎನ್ನುವ ತಂಡವೊಂದು ಮಾಡುತ್ತಿದೆ. ಭಾಸ್ಕರ್ ನೀನಾಸಂ ನಿರ್ದೇಶನದ, ಹನುಮಂತ ಹಾಲಿಗೇರಿಯವರ “ಊರು ಸುಟ್ಟರೂ ಹನುಮಪ್ಪ ಹೊರಗ” ನಾಟಕವನ್ನು ಮೊಬೈಲ್/ಲ್ಯಾಪ್ ಟಾಪ್/ಕಂಪ್ಯೂಟರ್/ಆಂಡ್ರಾಯ್ಡ್ ಟಿವಿಯಲ್ಲಿ ವೀಕ್ಷಿಸಬಹುದು.

ಪೋಸ್ಟರ್‌ನಲ್ಲಿ ಕಾಣುವ ಬಾರ್‌ಕೋಡ್ ಅನ್ನು ಸ್ಕಾನ್ ಮಾಡಿ, ಅರ್ಜಿ ತುಂಬಿಸಿ, ಆನ್ಲೈನ್ ಮೂಲಕ ಹಣ ಪಾವತಿಸಿದರೆ, ಶನಿವಾರ ಸಂಜೆ 6 ರಿಂದ ಭಾನುವಾರ ರಾತ್ರಿ 10ರ ತನಕ ನಾಟಕ ವೀಕ್ಷಿಸಬಹುದು.
ನಾಟಕಗಳನ್ನು ಮಿಸ್ ಮಾಡಿಕೊಳ್ಳುತ್ತಿರುವವರಿಗಾಗಿಯೇ ಇಂತಹದೊಂದು ಪ್ರಯತ್ನ ನಡೆಯುತ್ತಿದೆ. ಮೊಬೈಲ್/ಲ್ಯಾಪ್ ಟಾಪ್/ಕಂಪ್ಯೂಟರ್/ಆಂಡ್ರಾಯ್ಡ್ ಟಿವಿಯಲ್ಲಿ ಮನೆಯಲ್ಲಿಯೇ ಕುಳಿತು ನಾಟಕ ವೀಕ್ಷಿಸಬಹುದು.


