59.7% ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಾರೆ: NSO
PC: Vijayakarnataka

ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆರ್ಗನೈಸೇಶನ್ (NSO)ನ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ 59.7% ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಾರೆ. ಇದರಲ್ಲಿ ಸರಾಸರಿ 62% ಹುಡುಗಿಯರಿದ್ದರೆ, ಹುಡುಗರ ಪ್ರಮಾಣ 57.9% ಇದೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳ ದತ್ತಾಂಶಗಳನ್ನು ಪ್ರತ್ಯೇಕವಾಗಿ ನೋಡಿದಾಗ, ಗ್ರಾಮೀಣ ಪ್ರದೇಶದಲ್ಲಿ 61.4% ನಷ್ಟು ಬಾಲಕರು ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದರೆ, ಬಾಲಕಿಯರ ಪ್ರಮಾಣ 66.5% ನಷ್ಟಿದೆ. ಇದು ನಗರ ಪ್ರದೇಶಗಳಲ್ಲಿ ಕ್ರಮವಾಗಿ 57.9% ಮತ್ತು 62% ನಷ್ಟಿದೆ.

ಎರಡನೆಯ ಮತ್ತು ಅತ್ಯಂತ ಆದ್ಯತೆಯ ಪ್ರಯಾಣದ ವಿಧಾನವೆಂದರೆ, ಸಾರ್ವಜನಿಕ ಸಾರಿಗೆ. ದೇಶದಲ್ಲಿ 12.4% ನಷ್ಟು ವಿದ್ಯಾರ್ಥಿಗಳು ಇದನ್ನು ಬಳಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, 11.3% ನಷ್ಟು ವಿದ್ಯಾರ್ಥಿಗಳು ಶಾಲೆಗೆ ಪ್ರಯಾಣಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, 15.3% ನಷ್ಟು ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲಿ ಬಳಸುತ್ತಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಮಕ್ಕಳ ಆನ್‌ಲೈನ್ ಶಿಕ್ಷಣಕ್ಕಾಗಿ ತಾಳಿ ಮಾರಿಕೊಂಡ ಘಟನೆ ನನ್ನ ಹೃದಯ ಹಿಂಡುತ್ತಿದೆ: ಎಚ್‌ಡಿಕೆ

ಸಾರ್ವಜನಿಕ ಸಾರಿಗೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಲು ಎಷ್ಟು ವಿದ್ಯಾರ್ಥಿಗಳು ರಿಯಾಯಿತಿ ದರವನ್ನು ಪಡೆದುಕೊಂಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ. ರಿಯಾಯಿತಿ ಪಡೆದ ಶೇಕಡಾ 48.3 ರಷ್ಟು ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆಯನ್ನು ಬಳಸಿದ್ದಾರೆ. ಈ ಸಂಖ್ಯೆ ನಗರ ಪ್ರದೇಶಗಳಿಗಿಂತ (42.7 ಶೇಕಡಾ) ಗ್ರಾಮೀಣ ಪ್ರದೇಶಗಳಲ್ಲಿ (ಶೇಕಡಾ 51.3) ಹೆಚ್ಚಾಗಿದೆ.

ಈ ಅಧ್ಯಯನದಲ್ಲಿ, ವಿದ್ಯಾರ್ಥಿಗಳ ಮನೆಗಳು ಮತ್ತು ಶಾಲೆಗಳ ನಡುವಿನ ಅಂತರವನ್ನು ಸಹ ಅಧ್ಯಯನ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 92.7 ರಷ್ಟು ಕುಟುಂಬಗಳು ಮನೆಯಿಂದ 1 ಕಿ.ಮೀ ಒಳಗೆ ಶಾಲೆಗಳನ್ನು ಹೊಂದಿದ್ದರೆ, ನಗರ ಪ್ರದೇಶಗಳಲ್ಲಿ ಶೇಕಡಾ 87.2 ರಷ್ಟಿದೆ ಎಂದು ತಿಳಿದುಬಂದಿದೆ.

ಸುಮಾರು 68 ಪ್ರತಿಶತದಷ್ಟು ಗ್ರಾಮೀಣ ಕುಟುಂಬಗಳು, ಮತ್ತು 80 ಪ್ರತಿಶತದಷ್ಟು ನಗರ ಕುಟುಂಬಗಳು ತಮ್ಮ ಮನೆಯಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಉನ್ನತ ಪ್ರಾಥಮಿಕ ಶಾಲೆಗಳಿವೆ ಎಂದು ಹೇಳಿವೆ.

ಒಂದು ಕಿ.ಮೀ ವ್ಯಾಪ್ತಿಯೊಳಗೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ ಕೇವಲ 38 ಪ್ರತಿಶತ, ಮತ್ತು ನಗರ ಪ್ರದೇಶದಲ್ಲಿ 70 ಪ್ರತಿಶತದಷ್ಟು ಎಂದು ಅಧ್ಯಯನದ ಫಲಿತಾಂಶಗಳು ತಿಳಿಸುತ್ತವೆ.


ಇದನ್ನೂ ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!

LEAVE A REPLY

Please enter your comment!
Please enter your name here