ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ನಮ್ಮ ದೇಶದಲ್ಲಿ ಇನ್ನು ಮುಂದೆ ಗಂಡು-ಹೆಣ್ಣು ಎಂಬ ಎರಡು ಲಿಂಗಗಳು ಮಾತ್ರ ಇರಲಿವೆ” ಎಂದು ಘೋಷಿಸಿರುವುದರ ಮುಂದುವರಿದ ಭಾಗವಾಗಿ, ಅಮೆರಿಕ ಸೇನೆ ಟ್ರಾನ್ಸ್‌ಜೆಂಡರ್‌ಗಳ ನೇಮಕಾತಿಗೆ ನಿರ್ಬಂಧ ವಿಧಿಸಿದೆ.
ಈ ಕುರಿತು ‘ಎಕ್ಸ್’ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅಮೆರಿಕ ಸೇನೆ, “ಈ ನಿರ್ಧಾರವು ತಕ್ಷಣವೇ ಜಾರಿಗೆ ಬರುತ್ತದೆ. ಜೊತೆಗೆ, ಲಿಂಗ ಪರಿವರ್ತನೆಯನ್ನು ಸುಗಮಗೊಳಿಸುವ ಅಥವಾ ದೃಢೀಕರಿಸುವ ಎಲ್ಲಾ ವೈದ್ಯಕೀಯ ವಿಧಾನಗಳನ್ನು ತಕ್ಷಣವೇ ಸ್ಥಗಿತಗೊಳಿಸುತ್ತೇವೆ” ಎಂದು ತಿಳಿಸಿದೆ.
ಲಿಂಗತ್ವ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಸ್ವಯಂಪ್ರೇರಿತರಾಗಿದ್ದಾರೆ ಮತ್ತು ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದೂ ಸೇನೆ ತಿಳಿಸಿದೆ.
ಅಮೆರಿಕದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಷೇಧ ಹೇರುವುದು ಸೇರಿದಂತೆ ಸೇನೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಾಲ್ಕು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿರುವುದಾಗಿ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವು ದಿನಗಳ ನಂತರ ಸೇನೆಯಿಂದ ಆದೇಶ ಹೊರಬಿದ್ದಿದೆ.
ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಫೆ.5ರಂದು ಸಹಿ ಹಾಕಿದ್ದರು.
ಜನವರಿ 20, 2025ರಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಟ್ರಂಪ್ ಮಾಡಿದ್ದ ಉದ್ಘಾಟನಾ ಭಾಷಣದಲ್ಲಿ “ಅಮೆರಿಕ ಇನ್ನು ಮುಂದೆ ಗಂಡು, ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಿದೆ” ಎಂದಿದ್ದರು.
ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಆದೇಶಕ್ಕೆ ಟ್ರಂಪ್ ಸಹಿ


