ಅಮೆರಿಕದ ಹೊಸ ಚುನಾಯಿತ ಅಧ್ಯಕ್ಷ ಜೋ ಬೈಡೆನ್‌ಗೆ ಆಡಳಿತ ಹಸ್ತಾಂತರಿಸಲು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಒಪ್ಪಿಕೊಂಡಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಸೋತಿದ್ದಾರೆ ಎಂದು ಔಪಚಾರಿಕವಾಗಿ ಇನ್ನೂ ಒಪ್ಪಿಕೊಂಡಿಲ್ಲ.
ಚುನಾವಣಾ ಫಲಿತಾಂಶಗಳ ಬಗ್ಗೆ ವಿರೋಧ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದರೂ, ಜೋ ಬೈಡೆನ್ ಅಧಿಕಾರಕ್ಕೇರಲು ಏನು ಮಾಡಬೇಕೋ ಅದನ್ನು ಮಾಡಲು ಸರ್ಕಾರಿ ಸಂಸ್ಥೆಯಾದ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ (ಜಿಎಸ್ಎ) ಗೆ ಟ್ರಂಪ್ ಶಿಫಾರಸು ಮಾಡಿದ್ದಾರೆ. ಇದಾಗ್ಯೂ ಅವರ ತಂಡವು ಚುನಾವಣಾ ಫಲಿತಾಂಶಗಳ ವಿರುದ್ಧ ಕಾನೂನು ಹೋರಟದಲ್ಲಿ ತೊಡಗಿದೆ.
ಇದನ್ನೂ ಓದಿ: ಟ್ರಂಪ್ ನಿರ್ಗಮನದ ದಿನ ಎಣಿಸಲೆಂದೇ ಒಂದು ವೆಬ್‌ಸೈಟ್!
ಅಧಿಕಾರ ವರ್ಗಾವಣೆ ಮಾಡಲಿರುವ ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ ಜೋ ಬಿಡೆನ್ ಚುನಾವಣೆಯಲ್ಲಿ ಗೆದ್ದಂತೆ ಕಾಣುತ್ತದೆ ಎಂದು ಹೇಳಿದ್ದಾರಾದರೂ, ಟ್ರಂಪ್ ಅವರಿಂದ ನೇಮಕಗೊಂಡಿರುವ ಅದರ ಕಾರ್ಯನಿರ್ವಾಹಕರು ಜೋ ಬಿಡನ್ ಅವರನ್ನು ಚುನಾವಣಾ ವಿಜೇತರೆಂದು ಇನ್ನೂ ದೃಡಪಡಿಸಿಲ್ಲ.
ಜನರಲ್ ಸರ್ವೀಸಸ್ ಅಡ್ಮಿನಿಸ್ಟ್ರೇಷನ್ ಅಧ್ಯಕ್ಷರು ಅಧಿಕಾರ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ ಮತ್ತು ಸಂಸ್ಥೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂದು ಟ್ರಂಪ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
I want to thank Emily Murphy at GSA for her steadfast dedication and loyalty to our Country. She has been harassed, threatened, and abused – and I do not want to see this happen to her, her family, or employees of GSA. Our case STRONGLY continues, we will keep up the good…
— Donald J. Trump (@realDonaldTrump) November 23, 2020
ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು: ಟ್ರಂಪ್‌ಗೆ ವಿಚ್ಛೇಧನ ನೀಡಲಿರುವ ಮೆಲೆನಿಯಾ?
ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡೆನ್‌ಗೆ 6.3 ಮಿಲಿಯನ್ ಹಂಚಿಕೆ ಮಾಡಲಾಗಿದೆ ಎಂದು ಜಿಎಸ್ಎ ಕಾರ್ಯನಿರ್ವಾಹಕ ಎಮಿಲಿ ಮರ್ಫಿ ಹೇಳಿದ್ದಾರೆ. ಇತ್ತೀಚೆಗೆ ಮಿಷಿಗನ್ ರಾಜ್ಯದಲ್ಲಿ ಜೋ ಬಿಡೆನ್ ಗೆದ್ದಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. ಇದು ಟ್ರಂಪ್‌ಗೆ ದೊಡ್ಡ ಹೊಡೆತವಾಗಿತ್ತು.
ಈ ತಿಂಗಳ ಆರಂಭದಲ್ಲಿ ಪ್ರಾರಂಭವಾದ ಚುನಾವಣಾ ಎಣಿಕೆಯಲ್ಲಿ ಟ್ರಂಪ್ 232 ಸ್ಥಾನಗಳನ್ನು ಗಳಿಸಿದ್ದು, ಬೈಡೆನ್ ಒಟ್ಟು 306 ಸ್ಥಾನಗಳನ್ನು ಹೊಂದುವ ನಿರೀಕ್ಷೆಯಿದೆ. ಅಧ್ಯಕ್ಷ ಸ್ಥಾನವನ್ನು ಗೆಲ್ಲಲು 270 ಸ್ಥಾನಗಳು ಸಾಕಾಗುತ್ತದೆ. ರಾಷ್ಟ್ರವ್ಯಾಪಿ ಮತಗಳಲ್ಲಿ ಬೈಡೆನ್ ಟ್ರಂಪ್‌ಗಿಂತ 59 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ನಾವು ಟ್ರಂಪ್ ಹುಚ್ಚ ಎನ್ನುವುದಿಲ್ಲ; ರಾಹುಲ್ ಗಾಂಧಿ ಬಗ್ಗೆ ಮಾತನಾಡಲು ಒಬಾಮ ಯಾರು?- ಶಿವಸೇನೆ ಪ್ರಶ್ನೆ


