ತನ್ನ ಪುಸ್ತಕದಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರಪಕ್ಷ ಶಿವಸೇನೆ ಕಿಡಿಕಾರಿದೆ. ’ವಿದೇಶಿ ರಾಜಕಾರಣಿಗಳು ಭಾರತೀಯ ನಾಯಕರ ಬಗ್ಗೆ ಅಭಿಪ್ರಾಯಗಳನ್ನು ನೀಡಬಾರದು. ನಾವು ಟ್ರಂಪ್ ಅವರನ್ನು ಹುಚ್ಚ ಎಂದು ಹೇಳುವುಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ, “ರಾಹುಲ್ ಗಾಂಧಿ ಅಸ್ಥಿರ ಮತ್ತು ಅಪಕ್ವ ಗುಣ ಹೊಂದಿದ್ದು, ಶಿಕ್ಷಕನನ್ನು ಮೆಚ್ಚಿಸಲು ಉತ್ಸುಕನಾಗಿರುವ ಆದರೆ ಯಾವುದೇ ವಿಷಯದಲ್ಲಿ ಕರಗತ ಹೊಂದದ ಹಾಗೂ ಉತ್ಸಾಹವಿಲ್ಲದ ವಿದ್ಯಾರ್ಥಿಯಂತೆ ಕಾಣುತ್ತಾರೆ” ಎಂದು, ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆಂದು ನಿನ್ನೆ ವರದಿಯಾಗಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿಯದ್ದು ಅಸ್ಥಿರ ಮತ್ತು ಅಪಕ್ವ ಗುಣ: ಆತ್ಮಚರಿತ್ರೆಯಲ್ಲಿ ಒಬಾಮ
ಒಬಾಮ ಅವರ ಬರಹಕ್ಕೆ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್, “ವಿದೇಶಿ ರಾಜಕಾರಣಿಗಳು ಭಾರತೀಯ ರಾಜಕೀಯ ನಾಯಕರ ಬಗ್ಗೆ ಇಂತಹ ಅಭಿಪ್ರಾಯಗಳನ್ನು ನೀಡಬಾರದು, ಇದರ ನಂತರ ಆಂತರಿಕ ರಾಜಕೀಯ ಚಚೆಗಳು ತುಂಬಾ ಅಸಹ್ಯಕರವಾಗುತ್ತದೆ. ನಾವು ಟ್ರಂಪ್ ಹುಚ್ಚ ಎಂದು ಹೇಳುವುದಿಲ್ಲ. ಈ ರಾಷ್ಟ್ರದ ಬಗ್ಗೆ ಒಬಾಮಾಗೆ ಎಷ್ಟು ಗೊತ್ತು” ಎಂದು ಹೇಳಿದ್ದಾರೆ.
A foreign politician can't give such opinions on Indian political leaders; subsequent domestic political discourse on it is distasteful. We won't say 'Trump is mad'. How much does Obama know about this nation?: S Raut, Shiv Sena, on remarks on Rahul Gandhi in Barak Obama's memoir pic.twitter.com/ZaCJL4RNnF
— ANI (@ANI) November 14, 2020
ಬರಾಕ್ ಒಬಾಮ ಅವರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಕುರಿತು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಮಾಡಿದ ವಿಮರ್ಶೆಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಪುಸ್ತಕದಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವಾರು ಅಮೆರಿಕ ಮತ್ತು ವಿಶ್ವ ನಾಯಕರ ಕುರಿತು ಅನಿಸಿಕೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ: ಟ್ರಂಪ್ ನಿರ್ಗಮನದ ದಿನ ಎಣಿಸಲೆಂದೇ ಒಂದು ವೆಬ್‌ಸೈಟ್!