‘ಬಿದ್ರೂ ಮೀಸೆ ಮಣ್ಣಾಗಿಲ್ಲ ಅಂತಾರೆ’ ಅನ್ನೋದು ಹಳೆ ಗಾದೇ. ‘ಮಣ್ಣಲೇ ಹೂತು ಹಾಕಿದರೂ ಮೀಸೆ ಮಣ್ಣಾಗಲಿಲ್ಲ ಅಂತಾರೆ’ ಅನ್ನೋದು ಹೊಸ ಗಾದೆ. ಇದು ಬಿಜೆಪಿ ಮತ್ತು ಪೋಸ್ಟ್ ಕಾರ್ಡ್ ಕನ್ನಡಕ್ಕೆ ಯಥಾವತ್ ಅನ್ವಯಿಸುತ್ತದೆ. ಕೆಟ್ಟ ಆರ್ಥಿಕ ನೀತಿಗಳ ಕಾರಣದಿಂದಾಗಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ -23.9ರ ಋಣಾತ್ಮಕ ಬೆಳವಳಿಗೆಯೊಂದಿಗೆ ಪಾತಾಳಕ್ಕೆ ಕುಸಿದಿದ್ದರೂ ಈ ವಿಚಾರವಾಗಿ ಪೋಸ್ಟ್ ಕಾರ್ಡ್ ಸುಳ್ಳು ಹೇಳುವುದನ್ನು ಬಿಟ್ಟಿಲ್ಲ.
ಇಂದು ಪೋಸ್ಟ್ ಕಾರ್ಡ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎರಡು ಪೋಸ್ಟ್‌ಗಳನ್ನು ಹಂಚಿಕೊಂಡಿದೆ. ಆ ಪೋಸ್ಟರ್ ಪ್ರಕಾರ ಭಾರತಕ್ಕಿಂತಲೂ ಜಪಾನ್(-27.8), ಅಮೆರಿಕ(-32.9) ಮತ್ತು ಕೆನಡಾ(-38.7) ಜಿಡಿಪಿ ಹೆಚ್ಚು ಕುಸಿದಿದೆ. ಆದರೆ ಬ್ಯುಸಿನೆಸ್ ಟುಡೆ ಪತ್ರಿಕೆಯು ಅಮೆರಿಕ (-9.1), ಜಪಾನ್ (-9.9), ಕೆನಡಾ(-13) ಮತ್ತು ಭಾರತ (-23.9) ಎಂದು ತಪ್ಪು ಪ್ರಕಟಿಸಿದೆ. ನಂತರ ಆ ಪೋಸ್ಟರ್ ಅನ್ನು ಬ್ಯುಸಿನೆಸ್ ಟುಡೆ ಡಿಲೀಟ್ ಮಾಡಿದೆ ಎಂದು ಪೋಸ್ಟ್ ಕಾರ್ಡ್ ಹೇಳಿದೆ.
Posted by Postcard ಕನ್ನಡ on Tuesday, September 1, 2020
ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಫ್ಯಾಕ್ಟ್‌ಚೆಕ್:
ಮೊಟ್ಟ ಮೊದಲನೇಯದಾಗಿ ಬ್ಯುಸಿನೆಸ್ ಟುಡೆ ಪತ್ರಿಕೆಯು ತನ್ನ ಲೇಖನ ಮತ್ತು ಪೋಸ್ಟರ್ ಅನ್ನು ಡಿಲೀಟ್ ಮಾಡಿಲ್ಲ. ಹಾಗೆಂದು ಪೋಸ್ಟ್ ಕಾರ್ಡ್ ಸುಳ್ಳು ಹೇಳಿದೆ ಅಷ್ಟೇ. ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.

ಎರಡನೇದಾಗಿ ನೀವು ಯಾವ ಅಂಕಿ ಅಂಶ ಹುಡುಕಿದರೂ ಭಾರತಕ್ಕಿಂತ ಅಮೆರಿಕ, ಕೆನಡಾ ಮತ್ತು ಜಪಾನ್ ಜಿಡಿಪಿ ಕೆಳಮಟ್ಟದಲ್ಲಿಲ್ಲ ಎಂದು ತಿಳಿಯುತ್ತದೆ.
Census and Economic Information Center ಪ್ರಪಂಚದ ಜಿಡಿಪಿ ಲೆಕ್ಕ ಹಾಕುವ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಅದು ಅಮೆರಿಕ (-9.1), ಜಪಾನ್ (-9.9), ಕೆನಡಾ(-13) ಮತ್ತು ಭಾರತ (-23.9) ಎಂದೇ ಜೂನ್‌ನಲ್ಲಿ ವರದಿ ನೀಡಿದೆ.

ಐಎಂಎಫ್, ವರ್ಲ್ಡ್ ಎಕಾನಾಮಿಕ ಫೋರಂ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೇಗಳು ಜೂನ್‌ನಲ್ಲಿ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿಯೂ ಸಹ ಪೋಸ್ಟ್ ಕಾರ್ಡ್ ಹೇಳಿರುವುದು ಸುಳ್ಳು ಎಂದು ಸಾಬೀತಾಗುವಂತಹ ಅಂಕಿ ಅಂಶಗಳಿವೆ. ಹಾಗಾಗಿ ಪೋಸ್ಟ್ ಕಾರ್ಡ್ ಸುಳ್ಳು ಸುದ್‌ದಿ ಹರಡಿರುವುದು ಸ್ಪಷ್ಟ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ವಿಶ್ವದ ಪ್ರಮುಖ ಆರ್ಥಿಕತೆಗಳು ದೊಡ್ಡಮಟ್ಟದ ಹೊಡೆತವನ್ನು…
Posted by BJP Karnataka on Sunday, August 23, 2020
ಅದೇ ರೀತಿಯಾಗಿ ಆಗಸ್ಟ್ 23 ರಂದು ಬಿಜೆಪಿ ಪಕ್ಷವು ತನ್ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ವಿಶ್ವದ ಆರ್ಥಿಕತೆಗಳಲ್ಲಾ ಕುಸಿದಿದ್ದರೂ ಭಾರತವು ಅಭಿವೃದ್ದಿ ಸಾಧಿಸುತ್ತಿದೆ ಎಂದು ಸುಳ್ಳು ಪ್ರಕಟ ಮಾಡಿತ್ತು. ಅದನ್ನು ಸುಳ್ಳು ಎಂದು ನಾನುಗೌರಿ.ಕಾಂ ಬಯಲುಗೊಳಿಸಿತ್ತು. ವರದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ..


