ಸಂಸತ್‌ನ ಅನುಮತಿಯಿಲ್ಲದೆ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಗಳಿಗೆ ಫೆಡರಲ್ ನಿಧಿಗಳನ್ನು ಬಳಸುವ ಟ್ರಂಪ್ ಅಧಿಕಾರ ತಡೆಯುವ ಮಸೂದೆಯನ್ನು ಅಮೆರಿಕದ ಸೆನೆಟರ್ ಬರ್ನಿ ಸ್ಯಾಂಡರ್ಸ್ ಸೋಮವಾರ (ಜೂ.16) ಮಂಡಿಸಿದ್ದಾರೆ.
“ಇರಾನ್ ವಿರುದ್ಧ ಯುದ್ಧ ಬೇಡ ಮಸೂದೆಯು” ಯುದ್ಧ ಅಧಿಕಾರ ಕಾಯ್ದೆ ಮತ್ತು ಅನ್ವಯವಾಗುವ ಯುಎಸ್ ಕಾನೂನಿನಲ್ಲಿ ಪ್ರತಿಪಾದಿಸಲಾದ ಸ್ವರಕ್ಷಣೆಗಾಗಿ ಒಂದು ವಿನಾಯಿತಿಯನ್ನು ಒಳಗೊಂಡಿದೆ.
ಸೆನೆಟರ್ ಪೀಟರ್ ವೆಲ್ಚ್, ಎಲಿಜಬೆತ್ ವಾರೆನ್, ಜೆಫ್ ಮರ್ಕ್ಲಿ, ಕ್ರಿಸ್ ವ್ಯಾನ್ ಹೊಲೆನ್, ಎಡ್ ಮಾರ್ಕಿ, ಟ್ಯಾಮಿ ಬಾಲ್ಡ್ವಿನ್ ಮತ್ತು ಟೀನಾ ಸ್ಮಿತ್ ಅವರು ಸ್ಯಾಂಡರ್ಸ್ ಅವರ ಮಸೂದೆಯನ್ನು ಬೆಂಬಲಿಸಿದ್ಧಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ “ಅಜಾಗರೂಕ ಮತ್ತು ಕಾನೂನುಬಾಹಿರ ದಾಳಿಗಳು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತವೆ ಮತ್ತು ಪ್ರಾದೇಶಿಕ ಯುದ್ಧವನ್ನು ಹುಟ್ಟುಹಾಕುವ ಅಪಾಯವನ್ನುಂಟುಮಾಡುತ್ತವೆ” ಎಂದು ಸ್ಯಾಂಡರ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Tonight, I introduced legislation to stop Trump from from leading us into an illegal war with Iran.
Another war in the Middle East could cost countless lives, waste trillions more dollars, and lead to even more deaths, more conflict, and more displacement. pic.twitter.com/CchHlSnLZy
— Bernie Sanders (@SenSanders) June 17, 2025
“ನೆತನ್ಯಾಹು ಅವರ ಆಯ್ಕೆಯ ಯುದ್ಧಕ್ಕೆ ಅಮೆರಿಕವನ್ನು ಎಳೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಬೇಕು” ಎಂದು ಸ್ಯಾಂಡರ್ಸ್ ಹೇಳಿದ್ದಾರೆ. ಕಾಂಗ್ರೆಸ್‌ನ ಸ್ಪಷ್ಟ ಅನುಮತಿಯಿಲ್ಲದೆ ಮತ್ತೊಂದು “ದುಬಾರಿ ಯುದ್ಧ”ವನ್ನು ಕೈಗೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ “ಯಾವುದೇ ಅಧಿಕಾರ” ಇಲ್ಲ ಎಂದಿದ್ದಾರೆ.
“ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧವು ಲೆಕ್ಕವಿಲ್ಲದಷ್ಟು ಜೀವಗಳನ್ನು ಬಲಿ ಪಡೆಯಬಹುದು, ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ವ್ಯರ್ಥ ಮಾಡಬಹುದು ಮತ್ತು ಇನ್ನೂ ಹೆಚ್ಚಿನ ಸಾವುಗಳು, ಹೆಚ್ಚಿನ ಸಂಘರ್ಷ ಮತ್ತು ಹೆಚ್ಚಿನ ಸ್ಥಳಾಂತರಕ್ಕೆ ಕಾರಣವಾಗಬಹುದು” ಎಂದು ಸ್ಯಾಂಡರ್ಸ್ ಹೇಳಿದ್ದಾರೆ.
ಜೂನ್ 13ರಂದು ಇಸ್ರೇಲ್ ಇರಾನ್ ಮೇಲೆ ನಡೆಸಿದ ಅನೀರಿಕ್ಷಿತ ದಾಳಿಯಿಂದ ಪ್ರಾರಂಭಗೊಂಡ ಎರಡೂ ದೇಶಗಳ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ನೂರಾರು ಜನರು ಸಾವಿಗೀಡಾಗಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಇತರ ಸಂಘರ್ಷಗಳಂತೆ ಎರಡು ದೇಶಗಳ ಈ ಸಂಘರ್ಷದಲ್ಲಿ ಅಮೆರಿಕ ತಲೆ ಹಾಕಲು ಮುಂದಾಗಿದೆ. ಒಂದೆಡೆ ಶಾಂತಿಮಂತ್ರ ಜಪಿಸುವ ಯುಎಸ್ ಅಧ್ಯಕ್ಷ ಟ್ರಂಪ್, ಮತ್ತೊಂದೆಡೆ ಇರಾನ್‌ಗೆ ಎಚ್ಚರಿಕೆ ಕೊಡುವ ಮೂಲಕ ಪರೋಕ್ಷವಾಗಿ ಯುದ್ದಕ್ಕೆ ಬೆಂಬಲ ನೀಡುತ್ತಿದ್ದಾರೆ. ಗಾಝಾ, ಸಿರಿಯಾ ಇತರ ರಾಷ್ಟ್ರಗಳ ವಿಚಾರದಲ್ಲೂ ಅಮೆರಿಕ ವಿಶೇಷವಾಗಿ ಟ್ರಂಪ್ ಮಾಡಿರುವುದು ಇದನ್ನೇ ಆಗಿದೆ.
ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಅಧಿಕಾರಿಗಳು


