ಟಿಕ್ ಟಾಕ್ ಅನ್ನು ನಿಷೇಧಿಸಿರುವ ಅಮೇರಿಕಾ ಸರ್ಕಾರದ ನಿರ್ಧಾರ ಮತ್ತು ಅದನ್ನು ರಾಷ್ಟ್ರೀಯ ಭದ್ರತಾ ಬೆದರಿಕೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಸವಾಲು ಹಾಕುವುದಾಗಿ ವಿಡಿಯೋ ಅಪ್ಲಿಕೇಶನ್ ಟಿಕ್ಟಾಕ್ ಕಂಪನಿ ಹೇಳಿದೆ ಎಂದು ಎಎಫ್‌ಪಿ ಭಾನುವಾರ ವರದಿ ಮಾಡಿದೆ.
ಆಗಸ್ಟ್ 6 ರಂದು, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು. ಅಮೆರಿಕನ್ನರಿಗೆ ಟಿಕ್‌ಟಾಕ್‌ನ ಚೀನಾದ ಮೂಲ ಕಂಪನಿ ಬೈಟ್‌ಡ್ಯಾನ್ಸ್‌ನೊಂದಿಗೆ ವ್ಯವಹಾರ ಮಾಡುವುದನ್ನು ನಿಲ್ಲಿಸಲು 45 ದಿನಗಳ ಕಾಲಾವಕಾಶ ನೀಡಲಾಗಿತ್ತು.
ಆಗಸ್ಟ್ 15 ರಂದು ಅಮೆರಿಕದಲ್ಲಿ ತನ್ನ ಆಸ್ತಿಯನ್ನು ಮಾರಾಟ ಮಾಡಲು ಬೈಟ್‌ಡ್ಯಾನ್ಸ್‌ಗೆ 90 ದಿನಗಳ ಕಾಲಾವಕಾಶ ನೀಡಿದ್ದರು.
ಆಗಸ್ಟ್ 6 ರ ಆದೇಶವನ್ನು ಪ್ರಶ್ನಿಸುವುದಾಗಿ ಟಿಕ್ ಟಾಕ್ ಹೇಳಿದೆ. “ಕಾನೂನಿನ ನಿಯಮವನ್ನು ತ್ಯಜಿಸಲಾಗಿಲ್ಲ. ನಮ್ಮ ಕಂಪನಿ ಮತ್ತು ಬಳಕೆದಾರರನ್ನು ನ್ಯಾಯಯುತವಾಗಿ ಪರಿಗಣಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು, ನ್ಯಾಯಾಂಗ ವ್ಯವಸ್ಥೆಯ ಮೂಲಕ ಕಾರ್ಯನಿರ್ವಾಹಕ ಆದೇಶವನ್ನು ಪ್ರಶ್ನಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ” ಎಂದು ಟಿಕ್ ಟಾಕ್ ಕಂಪನಿ ತಿಳಿಸಿದೆ.
ಇದು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಟಿಕ್‌ಟಾಕ್ ಪದೇ ಪದೇ ಉಚ್ಚರಿಸುತ್ತಿದೆ.
ಆಗಸ್ಟ್ 5 ರಂದು, ಬೈಟ್‌ಡ್ಯಾನ್ಸ್ ಲಿಮಿಟೆಡ್‌ನ ಸಂಸ್ಥಾಪಕ ಜಾಂಗ್ ಯಿಮಿಂಗ್, ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡುವುದರಿಂದ, ಅಮೇರಿಕಾದಲ್ಲಿ ಟಿಕ್‌ಟಾಕ್ ನ ನಿಷೇಧವನ್ನು ತಡೆಯುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದ್ದರು.
ಮೈಕ್ರೋಸಾಫ್ಟ್ ಆಗಸ್ಟ್ 3 ರಂದು ಟಿಕ್‌ಟಾಕ್‌ನ ಕೆಲವು ಭಾಗಗಳನ್ನು ಖರೀದಿಸಲು ಬೈಟ್‌ಡ್ಯಾನ್ಸ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿತ್ತು.
ಜೂನ್ 15 ರಂದು ಗಾಲ್ವಾನ್ ವ್ಯಾಲಿ ಘರ್ಷಣೆಯ ನಂತರ ಭಾರತದಲ್ಲಿ ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿತ್ತು.
ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಭಾರತೀಯ ಸೈನಿಕರ ಸಾವುಗಳಿಗೆ ಪ್ರತಿಯಾಗಿ ಚೀನಾದ ಸರಕು ಮತ್ತು ವ್ಯಾಪಾರವನ್ನು ಬಹಿಷ್ಕರಿಸುವ ಕೂಗನ್ನು ಹುಟ್ಟುಹಾಕಿದ್ದವು.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆಗಳನ್ನು ಉಲ್ಲೇಖಿಸಿ ಜೂನ್‌ನಲ್ಲಿ ಕೇಂದ್ರ ಸರ್ಕಾರವು ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.
ನಿಷೇಧಿತ ಅಪ್ಲಿಕೇಶನ್‌ಗಳ ತದ್ರೂಪಗಳಾಗಿದ್ದ 47 ಅಪ್ಲಿಕೇಶನ್‌ಗಳನ್ನು ಸಹ ನಿರ್ಬಂಧಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ಈ ಕ್ರಮವನ್ನು ಚೀನಾವು, ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂದು ಕರೆದಿದೆ.
ಇದನ್ನೂ ಓದಿ: ಅಮೇರಿಕಾದ ಹೂಡಿಕೆದಾರರಿಗೆ ತನ್ನ ಪಾಲನ್ನು ಮಾರಾಟ ಮಾಡಲಿದೆಯೆ ಟಿಕ್ಟಾಕ್?


