ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಒಂದುಗೂಡಿದ ಆರು ಪಕ್ಷಗಳು
Photo Courtesy: NewsFirst kannada

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಮುಖ್ಯವಾಹಿನಿಯ ಪಕ್ಷಗಳು ಒಗ್ಗೂಡಿದ್ದು ಅಲ್ಲಿನ ವಿಶೇಷ ಸ್ಥಾನಮಾನದ ಪುನಸ್ಥಾಪನೆಗಾಗಿ ಹೋರಾಡುವ ಸಂಕಲ್ಪ ತೊಟ್ಟಿವೆ. ಇದು ಕೇಂದ್ರ ಸರ್ಕಾರಕ್ಕೆ ಪ್ರಮುಖ ರಾಜಕೀಯ ಸವಾಲಾಗಿ ಪರಿಣಮಿಸಿದೆ.

ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ರಾಜಕೀಯ ಮುಖಂಡರನ್ನು ದೊಡ್ಡ ಪ್ರಮಾಣದಲ್ಲಿ ಬಂಧಿಸಿ ಬಿಡುಗಡೆಗೊಳಿಸಿದ ನಂತರ ಮುಖ್ಯವಾಹಿನಿಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಕಾಂಗ್ರೆಸ್, ಪೀಪಲ್ಸ್ ಕಾನ್ಫರೆನ್ಸ್, ಸಿಪಿಎಂ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಒಂದುಗೂಡಿ ಆಗಸ್ಟ್ 4, 2019ರಂದು ಅಸ್ತಿತ್ವದಲ್ಲಿದ್ದಂತೆ ವಿಶೇಷ ಮರುಸ್ಥಾಪನೆಗೆ ಮುಂದಾಗಿವೆ.

ʼನಾವಿಲ್ಲದೆ ನಮ್ಮಿಂದ ಇರಲು ಸಾಧ್ಯವಿಲ್ಲ, ನಾವು ಸರ್ವಾನುಮತದಿಂದ ಪುನರುಚ್ಚರಿಸುತ್ತೇವೆʼ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪಿಡಿಪಿ ಮುಖ್ಯಸ್ಥೆಎ ಮೆಹಬೂಬ ಮುಫ್ತಿ, ಪೀಪಲ್ಸ್ ಕಾನ್ಫೆರೆನ್ಸ್ ಮುಖ್ಯಸ್ಥ ಸಜ್ಜಾದ್ ಲೋನ್, ಕಾಂಗ್ರೆಸ್ ಅಧ್ಯಕ್ಷ ಜಜಿ.ಎ.ಮಿರ್, ಸಿಪಿಎಂ ಎಂ.ವೈ.ತರಿಗಾಮಿ, ಅವಾಮಿ ರಾಷ್ಟ್ರೀಯ ಕಾನ್ಫರೆನ್ಸ್ ನ ಮುಜಾಫರ್ ಷಾ ಘೋಷಿಸಿದ್ದಾರೆ.

ಇದು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಭವಿಷ್ಯದ ರಾಜಕೀಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ಮುಖ್ಯವಾಹಿನಿಯಲ್ಲಿರುವ ಈ ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ಅದರ ವಿಶೇಷ ಸ್ಥಾನಮಾನಕ್ಕೆ ಹಿಂದಿರುಗಿಸುವ ಗುರಿಯನ್ನು ಹೊಂದಿವೆ.

ಜಮ್ಮು ಮತ್ತು ಕಾಶ್ಮೀರದ ಬಹುಪಾಲು ಜನರು 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಅವಮಾನ ಎಂದು ಪರಿಗಣಿಸಿದ್ದಾರೆ.


ಇದನ್ನೂ ಓದಿ: ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ : ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲ

LEAVE A REPLY

Please enter your comment!
Please enter your name here