Homeಕರೋನಾ ತಲ್ಲಣಕೋವಿಡ್ ಕೆಲಸಗಳಿಗೆ ನನ್ನ ಎಂಪಿ ನಿಧಿ ಬಳಸಿಕೊಳ್ಳಿ: ರಾಯ್‌ಬರೇಲಿ ಜಿಲ್ಲಾಧಿಕಾರಿಗೆ ಸೋನಿಯಾಗಾಂಧಿ ಸೂಚನೆ

ಕೋವಿಡ್ ಕೆಲಸಗಳಿಗೆ ನನ್ನ ಎಂಪಿ ನಿಧಿ ಬಳಸಿಕೊಳ್ಳಿ: ರಾಯ್‌ಬರೇಲಿ ಜಿಲ್ಲಾಧಿಕಾರಿಗೆ ಸೋನಿಯಾಗಾಂಧಿ ಸೂಚನೆ

- Advertisement -
- Advertisement -

ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಮತ್ತು ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದ ಸಂಸದೆ ಸೋನಿಯಾ ಗಾಂಧಿ ತಮ್ಮ ಪಾಲಿನ ಸಂಸತ್ ಸದಸ್ಯರ ನಿಧಿಯನ್ನು ಕೋವಿಡ್‌ ಕಾರ್ಯಾಚರಣೆಗಳಿಗೆ ಬಳಿಸಿಕೊಳ್ಳುವಂತೆ ರಾಯ್‌ಬರೇಲಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಅವರು, ತಮಗಾಗಿ ಮೀಸಲಿಟ್ಟ ಸಂಸತ್ ಸದಸ್ಯರ ಸ್ಥಳೀಯ ಅನುದಾನವನ್ನು ಕೋವಿಡ್ ವಿರುದ್ಧ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಿ ಎಂದು ತಿಳಿಸಿದ್ದಾರೆ. “ನನ್ನ ಸಂಸತ್ ಸದಸ್ಯರ ನಿಧಿಯಲ್ಲಿ 1.17 ಕೋಟಿ ಹಣವಿದ್ದು ಅದನ್ನು ಪ್ರಸ್ತುತ ಕೋವಿಡ್ ಬಿಕ್ಕಟ್ಟು ಇರುವುದರಿಂದ ಅದರು ವಿರುದ್ಧದ ಹೋರಾಟಕ್ಕೆ ನಿಯಮಾಣುಸಾರ ಬಳಸಿಕೊಳ್ಳಿ” ಎಂದು ಪತ್ರದಲ್ಲಿ ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಪ್ರಧಾನಿಗೆ ಪತ್ರ ಬರೆದಿದ್ದ ಅವರು, “ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ರಾಜಕೀಯಕ್ಕಿಂತ ದೊಡ್ಡ ರಾಷ್ಟ್ರೀಯ ಸವಾಲು, ಕೊರೊನಾ ಸೋಂಕಿತರಿಗೆ ಆಮ್ಲಜನಕ, ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆ ಬಗ್ಗೆ ಪದೇ ಪದೇ ರಾಜ್ಯಗಳು ಮನವಿ ಸಲ್ಲಿಸುತ್ತಿದ್ದರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ” ಎಂದು ಆರೋಪಿಸಿದ್ದರು.

ಕೊರೊನಾ 2ನೇ ಅಲೆ ದೇಶಕ್ಕೆ ಅಘಾತಕಾರಿಯಾಗಿ ಅಪ್ಪಳಿಸಿದೆ. ಆದರೆ, ನಮಗೆ ಒಂದು ವರ್ಷ ತಯಾರಿ ನಡೆಸಲು ಅವಕಾಶವಿದ್ದರೂ ದೇಶ ಈ ಪರಿಸ್ಥಿತಿ ತಲುಪಿರುವುದು ವಿಷಾದನೀಯ ಎಂದು ಸೋನಿಯಾ ಗಾಂಧಿ ಹೇಳಿದ್ದರು.


ಇದನ್ನೂ ಓದಿ: ಕೊರೊನಾ ನಿರ್ವಹಣೆ: ಕೇಂದ್ರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Really appreciated even Pak pm also came forward to help in this regard. It is great failure of the administration allowed many types of gathering now it is impossible to control the situation.

LEAVE A REPLY

Please enter your comment!
Please enter your name here

- Advertisment -

ರಾಮ ಮಂದಿರವನ್ನು ಎಂದಿಗೂ ವಿರೋಧಿಸಿಲ್ಲ; ಅದಕ್ಕಾಗಿ ದೇಣಿಗೆ ನೀಡಿದ್ದೇನೆ: ದಿಗ್ವಿಜಯ ಸಿಂಗ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗುರುವಾರ ಅಯೋಧ್ಯೆಗೆ ತೆರಳಿ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. "ನಾನು ರಾಮಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಿಲ್ಲ, ದೇವಾಲಯ ಟ್ರಸ್ಟ್‌ಗೆ ದೇಣಿಗೆ...

ಮೀಸಲಾತಿ ವಿರೋಧಿ ಹೇಳಿಕೆ: ಖಾಸಗಿ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿ ಚಿಕಿತ್ಸೆ ಬಗ್ಗೆ ಪ್ರಶ್ನಿಸಿದ ಬಿಜೆಪಿ ಸಂಸದನಿಗೆ ಕಾಂಗ್ರೆಸ್ ತಿರುಗೇಟು

ಗುರುವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಪ್ರಶ್ನಿಸುವ ಮೂಲಕ ತಮ್ಮ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಅವರ...

ಪಶ್ಚಿಮ ಬಂಗಾಳ ಎಸ್‌ಐಆರ್ : ಬಿಎಲ್‌ಒ ಸೇರಿದಂತೆ ಒಂದೇ ಬೂತ್‌ನ 340 ಮುಸ್ಲಿಂ ಮತದಾರರ ಹೆಸರು ಡಿಲೀಟ್!

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಬಳಿಕ ಪ್ರಕಟಗೊಂಡ ಮತದಾರರ ಪೂರಕ ಪಟ್ಟಿಯಲ್ಲಿ, ಒಂದೇ ಬೂತ್‌ನ 340 ಜನರ ಹೆಸರುಗಳನ್ನು ತೆಗೆದು ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಸಿರ್ಹತ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬೆಳವಣಿಗೆ...

ಹಾರ್ಮುಜ್ ಮಾರ್ಗದ ಅನುಮತಿ: ಭಾರತ ನಮ್ಮ ‘ಸ್ನೇಹಪರ ರಾಷ್ಟ್ರ’ಗಳ ಸಾಲಿನಲ್ಲಿ ಸೇರಿದೆ: ಇರಾನ್ ವಿದೇಶಾಂಗ ಸಚಿವ 

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಇತರರಿಗೆ ನಿರ್ಬಂಧಗಳು ಮುಂದುವರಿದಿದ್ದರೂ, ಭಾರತ ಸೇರಿದಂತೆ ಆಯ್ದ "ಸ್ನೇಹಪರ ರಾಷ್ಟ್ರಗಳ" ಹಡಗುಗಳಿಗೆ ಆಯಕಟ್ಟಿನ ನಿರ್ಣಾಯಕ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡುತ್ತಿರುವುದಾಗಿ ಇರಾನ್ ಹೇಳಿದೆ. ಚೀನಾ, ರಷ್ಯಾ,...

ʼಜಾತಿ ಗೋಡೆʼ ವಿರುದ್ಧ ಕ್ರಮ ಕೈಗೊಳ್ಳದ ಆಡಳಿತ : ಚುನಾವಣೆ ಬಹಿಷ್ಕರಿಸಿದ ತಮಿಳುನಾಡಿನ ಶಂಕರಲಿಂಗಪುರಂನ ದಲಿತರು

ಗೋಡೆ ನಿರ್ಮಿಸಿ ಚರ್ಚ್‌ಗೆ ಹೋಗುವ ದಾರಿಯನ್ನು ತಡೆದಿರುವ ಭೂ ವಿವಾದದ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ತಮಿಳುನಾಡಿನ ಶಂಕರಲಿಂಗಪುರಂ ಗ್ರಾಮದ ಪರಿಶಿಷ್ಟ ಜಾತಿಯ ನಿವಾಸಿಗಳು, ಮುಂಬರುವ ವಿಧಾನಸಭಾ ಚುನಾವಣೆಯನ್ನು...

ಬಂಗಾಳ ಚುನಾವಣೆ : ಆರ್‌ಜಿ ಕರ್ ಸಂತ್ರಸ್ತೆಯ ತಾಯಿಯನ್ನು ಕಣಕ್ಕಿಳಿಸಿದ ಬಿಜೆಪಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿಯನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಬುಧವಾರ (ಮಾ.25) ಬಿಜೆಪಿ...

ಆಂಧ್ರ ಪ್ರದೇಶ | ಟಿಪ್ಪರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್ : 14 ಮಂದಿ ಸಜೀವ ದಹನ

ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ 14 ಜನರು ಸಜೀವ ದಹನವಾದ ಘಟನೆ ಆಂಧ್ರ ಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ (ಮಾ.26) ಸಂಭವಿಸಿದೆ ಎಂದು...

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...