Homeದಲಿತ್ ಫೈಲ್ಸ್ಉತ್ತರ ಪ್ರದೇಶ| 15 ವರ್ಷದ ದಲಿತ ಬಾಲಕಿ ಅಪಹರಿಸಿ ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ

ಉತ್ತರ ಪ್ರದೇಶ| 15 ವರ್ಷದ ದಲಿತ ಬಾಲಕಿ ಅಪಹರಿಸಿ ಕಾನ್‌ಸ್ಟೆಬಲ್‌ನಿಂದ ಅತ್ಯಾಚಾರ

- Advertisement -
- Advertisement -

ಕಳೆದ ಬುಧವಾರ ಉತ್ತರ ಪ್ರದೇಶದ ಫಾರೂಖಾಬಾದ್‌ನಲ್ಲಿ 11 ನೇ ತರಗತಿಯ 15 ವರ್ಷದ ದಲಿತ ಬಾಲಕಿಯನ್ನು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

35 ವರ್ಷದ ಕಾನ್‌ಸ್ಟೆಬಲ್ ಕಾರಿನಲ್ಲಿ ಬಂದು ತನ್ನ ಮಗಳನ್ನು ವಾಹನಕ್ಕೆ ಎಳೆದುಕೊಂಡು ಹೋಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಂದೆ ತಮ್ಮ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಮಧ್ಯಾಹ್ನವಾದರೂ ಆಕೆ ಮನೆಗೆ ಹಿಂತಿರುಗದಿದ್ದಾಗ, ಕುಟುಂಬವು ಆಕೆಗಾಗಿ ಹುಡುಕಾಟ ಆರಂಭಿಸಿತು.

ಸುಮಾರು ಐದು ಗಂಟೆಗಳ ನಂತರ, ಆರೋಪಿಯು ಮನೆಯ ಬಳಿ ಅದೇ ಕಾರಿನಿಂದ ಆಕೆಯನ್ನು ಹೊರಗೆ ತಳ್ಳಿದ್ದಾನೆ. ನೆರೆಹೊರೆಯವರು ಆರೋಪಿಯನ್ನು ನೋಡಿದಾಗ, ಅವರು ಕುಂಟುಂಬಕ್ಕೆ ತಿಳಿಸಿದ್ದಾರೆ. ಪೋಷಕರು ಬೂಕ್‌ ಮೂಲಕ ಕಾರನ್ನು ಸುಮಾರು 200 ಮೀಟರ್ ದೂರ ಬೆನ್ನಟ್ಟಿ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. “ಚಾಲಕ ಪರಾರಿಯಾಗಲು ಯತ್ನಿಸಿದ. ಆದರೆ, ನಾವು ಆರೋಪಿಯನ್ನು ಹಿಡಿದು ಸಂಜೆ ಪೊಲೀಸರಿಗೆ ಒಪ್ಪಿಸಿದೆವು” ಎಂದು ಬಾಲಕಿಯ ತಂದೆ ಹೇಳಿದರು.

ಅತ್ಯಾಚಾರ, ಅಪಹರಣ ಮತ್ತು ಪೋಕ್ಸೋ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹೆಚ್ಚುವರಿ ಎಸ್‌ಪಿ ಸಂಜಯ್ ಕುಮಾರ್ ಮಾತನಾಡಿ, “ಆರೋಪಿ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದ್ದು, ಗುರುವಾರ ಆತನನ್ನು ಅಮಾನತುಗೊಳಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಡಿಎಸ್‌ಪಿ ಮಟ್ಟದ ಅಧಿಕಾರಿಯೊಬ್ಬರು ತನಿಖೆಯ ನೇತೃತ್ವ ವಹಿಸಿದ್ದಾರೆ” ಎಂದರು. ಹುಡುಗಿಯ ಹೇಳಿಕೆಯನ್ನು ಇನ್ನೂ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರ| ದೇವಸ್ಥಾನದ ಹೊರಗೆ ದಲಿತ ವ್ಯಕ್ತಿಗೆ ಜಾತಿ ನಿಂದನೆ; ಮೂವರ ವಿರುದ್ಧ ಪ್ರಕರಣ ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -