ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಮತ್ತು ಮೀಸಲಾತಿಯಿಂದಲೇ ಇಂದು ಜಾತಿಪದ್ದತಿ ಅಸ್ತಿತ್ವದಲ್ಲಿದೆ ಎಂದು ಉತ್ತರ ಪ್ರದೇಶದ ಬಲ್ಲಿಯ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಜಾತಿಪದ್ದತಿಯು ದಲಿತರಿಂದಲೇ ಇದೆ. ಅವರ ರಕ್ಷಣೆಗೆ ನೀಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ನು ಕಿತ್ತುಹಾಕಿದರೆ ಅಸ್ಪೃಶ್ಯತೆ ತಾನಾಗಿಯೇ ನಾಶವಾಗುತ್ತದೆ ಎಂದಿದ್ದಾರೆ. ಹಾಗೆಯೇ ಮೀಸಲಾತಿಯನ್ನು ರದ್ದು ಮಾಡಿದರೆ ಜಾತಿ ಪದ್ಧತಿ ಇಲ್ಲವಾಗುತ್ತದೆ ಎಂದಿದ್ದಾರೆ ಎಂದು ಎ.ಎನ್.ಐ ವರದಿ ಮಾಡಿದೆ.
BJP MLA from Ballia, Surendra Singh: Casteism is alive today only because of the SC/ST Act, if this Act is repealed there will be no untouchability. SC/ST Act and reservations have kept casteism alive. (11.8.19) pic.twitter.com/dMlIP8iwbh
— ANI UP (@ANINewsUP) August 12, 2019
ಇದಕ್ಕೆ ಉತ್ತರ ಪ್ರದೇಶ ಮಾಧವ ಎಂಬುವವರು ತಿರುಗೇಟು ನೀಡಿದ್ದಾರೆ. “ನಿಮ್ಮ ಪ್ರಕಾರ ಕ್ರಿಮಿನಲ್ ಕಾನೂನುಗಳಿರುವುದರಿಂದಲೇ ಅಪರಾಧಗಳು ನಡೆಯುತ್ತಿವೆ. ಹಾಗಾಗಿ ದೇಶದ ಎಲ್ಲಾ ಕಾನೂನುಗಳನ್ನು ಕಿತ್ತುಹಾಕೋಣವೇ” ಎಂದು ಪ್ರಶ್ನಿಸಿದ್ದಾರೆ.
“ಎಸ್ಸಿ ಎಸ್ಟಿ ಆಕ್ಟ್ 1989 ರಲ್ಲಿ ರೂಪುಗೊಂಡಿತು
ಭಾರತದಲ್ಲಿ ಜಾತಿಯು ವೇದಕಾಲದಿಂದಲೇ ಇದೆ. (ವರ್ಣ ವ್ಯವಸ್ಥೆ)
ಯಾರಾದರೂ ಆ ಶಾಸಕನನ್ನು ಮತ್ತೆ ಶಾಲೆಗೆ ಕಳುಹಿಸಿ” ಎಂದು ಮಿಸ್ಟರ್ ಬೀನ್ ಎಂಬುವವರು ರಿಪ್ಲೈ ನೀಡಿದ್ದಾರೆ.
ಮೊದಲು ಆತ ಮತ್ತು ಮೇಲ್ಜಾತಿಯವರು ತಮ್ಮ ಮಕ್ಕಳನ್ನು ತಳಸಮುದಾಯದವರೊಂದಿಗೆ ಮದುವೆ ಮಾಡಿಸಲಿ. ನಂತರ ಮಾತಾಡಲಿ ಎಂದು ಕುಲವೀರ್ ಸಿಂಗ್ ಹೇಳಿದ್ದಾರೆ.
ಮ್ಯಾನ್ ಹೋಲ್ ನಲ್ಲಿ ಸ್ವಚ್ಛಮಾಡುವ ಕೆಲಸಕ್ಕೆ ಮೇಲ್ಜಾತಿಗಳು ಬರಲಿ. ನಂತರ ಮೀಸಲಾತಿ ಬಗ್ಗೆ ಮಾತಾಡಲಿ ಎಂದು ಅಲ್ಲಾಮ್ಯಾಕ್ಸ್ ಎಂಬುವವರು ತಿರುಗೇಟು ನೀಡಿದ್ದಾರೆ.
ಈ ಬಿಜೆಪಿ ಶಾಸಕ ಈ ಹಿಂದೆಯೂ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಹಲವು ಟೀಕೆಗಳನ್ನು ಎದುರಿಸಿದ್ದಾರೆ. ಜುಲೈ 30 ರಂದು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಾಹುಳ್ಯ ಪ್ರದೇಶಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೀತಿಗಳು ದಮನಕ್ಕೊಳಗಾಗುತ್ತಿವೆ ಎಂಬ ಹೇಳಿಕೆ ನೀಡಿದ್ದರು.
ಜುಲೈ 23ರಂದು ಹಿಂದೂಗಳು ಸಂಪರ್ಕ ಕಡಿದುಕೊಳ್ಳುವ ತೀರ್ಮಾನ ಮಾಡಿದರೆ ಮುಸ್ಲಿಂ ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ಇವರು ಹೇಳಿಕೆ ನೀಡಿದ್ದರು.
ಕಳೆದ ವರ್ಷ ಇವರು ಮುಸ್ಲಿಮರು ಪ್ರಾಣಿಗಳ ರೀತಿ ಒಬ್ಬರಿಗಿಂತ ಹೆಚ್ಚು ಹೆಂಡತಿಯರನ್ನು ಹೊಂದಿ ಹೆಚ್ಚು ಮಕ್ಕಳು ಮಾಡುತ್ತಿದ್ದಾರೆ, ಹಾಗಾಗಿ ಹಿಂದೂಗಳು ಕನಿಷ್ಟ 5 ಮಕ್ಕಳನ್ನು ಹೆರಬೇಕೆಂದು ಕರೆ ನೀಡಿದ್ದರು.



ಇವನೆಷ್ಟು ಮಕ್ಕಳನ್ನು ಹುಟ್ಟಿಸಿ ಸಾಕುತ್ತಿದ್ದಾನೆ?