ತಮ್ಮ ತೋಟದಿಂದ ಹಣ್ಣುಗಳನ್ನು ಕಿತ್ತಿದ್ದಾರೆ ಎಂಬ ಆರೋಪದ ಮೇಲೆ ಮಹಿಳೆಯರ ಗುಂಪಿನಿಂದ ಹಲ್ಲೆಗೊಳಗಾಗಿ ಗಾಯಗೊಂಡಿದ್ದ 30 ವರ್ಷದ ವಿಶೇಷ ಚೇತನ ಮಹಿಳೆಯೊಬ್ಬರು ಒಂದು ದಿನದ ನಂತರ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಪ್ರಕರಣವನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಉತ್ತರ ಪ್ರದೇಶ
ನವೆಂಬರ್ 9 ರಂದು ಸುನೀತಾ ದೇವಿ ಮತ್ತು ಅವರ ಪತಿ ಓಂಕಾರ್ ಅವರು ಪಾಪ್ರಿ ಗ್ರಾಮದ ಕೆರೆಯಿಂದ ಚೆಸ್ಟ್‌ನಟ್ ಹಣ್ಣುಗಳನ್ನು ಸಂಗ್ರಹಿಸಿ ಮನೆಗೆ ಮರಳುತ್ತಿದ್ದರು. ದಾರಿ ಮಧ್ಯೆ ಸುನೀತಾ ಮತ್ತು ಗ್ರಾಮದ ಸ್ಥಳೀಯ ಮಹಿಳೆಯರ ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಮಹಿಳೆಯರು ಸುನೀತಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಿಕಾರ್ಪುರ ಸರ್ಕಲ್ ಅಧಿಕಾರಿ ವಿಕಾಸ್ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹಲ್ಲೆ ನಡೆಸುವ ವೇಳೆ ಅವರ ಪತಿ ಓಂಕಾರ್ ಮಧ್ಯಪ್ರವೇಶಿಸಿ ತನ್ನ ಹೆಂಡತಿಯನ್ನು ಸ್ಥಳದಿಂದ ದೂರ ಕರೆದೊಯ್ದಿದ್ದರು. ಆದರೆ ಮರುದಿನ ಅವರು ಹಲ್ಲೆಯ ವೇಳೆ ಆಗಿದ್ದ ಗಾಯಗಳ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ
ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಇಬ್ಬರು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಚೌಹಾಣ್ ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯ ಕುಟುಂಬವು ನವೆಂಬರ್ 9 ರಂದು ಅಹಮದ್‌ಗಢ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲ್ಲ ಎಂದು ಆರೋಪಿಸಲಾಗಿದೆ.
“ಮಹಿಳೆಗೆ ಥಳಿಸಿದ ಮಂಜು ದೇವಿ (40) ಮತ್ತು ಆಕೆಯ ಸೊಸೆ ಕೀರ್ತಿ ಕುಮಾರ್ (21) ವಿರುದ್ಧ BNS ಸೆಕ್ಷನ್ 103 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಮೂರನೇ ಆರೋಪಿ ಮಂಜು ಅವರ ಸೋದರಳಿಯ ಅಪ್ರಾಪ್ತ” ಎಂದು ಶಿಕಾರ್ಪುರ ಸರ್ಕಲ್ ಅಧಿಕಾರಿ ವಿಕಾಸ್ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದ್ದಾರೆ.
“ಮಹಿಳೆಯರ ಗುಂಪು ಸುನಿತಾ ಅವರ ಮೇಲೆ ದೊಣ್ಣೆಯಿಂದ ಥಳಿಸಿದೆ. ಹಾಗಾಗಿ ಅವರು ತಲೆಗೆ ಗಂಭೀರ ಗಾಯಗಳಾಗಿತ್ತು. ಗಾಯಗೊಂಡಿದ್ದ ಪತ್ನಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಾಗ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸಿದ್ದಾರೆ” ಎಂದು ಮಹಿಳೆಯ ಪತಿ ಓಂಕಾರ್ ಹೇಳಿದ್ದಾರೆ.
ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೌರವ್ ಕುಮಾರ್ ಮತ್ತು ಕಾನ್ ಸ್ಟೇಬಲ್ ಅಶು ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಚೌಹಾಣ್ ಹೇಳಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೃತಿಗೆ 150 ವರ್ಷ; ನ.14 ರಂದು ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ
ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೃತಿಗೆ 150 ವರ್ಷ; ನ.14 ರಂದು ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ


