ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಮನೆಯೊಂದರಲ್ಲಿ ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಐವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಖವಾಜ್‌ಪುರ ಪ್ರದೇಶದಲ್ಲಿ ಘಟನೆ ನಡೆದಿದೆ. ರಾಮ್ ಕುಮಾರ್ ಯಾದವ್ (55), ಅವರ ಪತ್ನಿ ಕುಸುಮ್ ದೇವಿ (52), ಮಗಳು ಮನೀಶಾ (25), ಸೊಸೆ ಸವಿತಾ (27) ಮತ್ತು ಮೊಮ್ಮಗಳು ಮೀನಾಕ್ಷಿ (2) ಕೊಲೆಯಾದವರು.
ಇನ್ನೋರ್ವ ಮೊಮ್ಮಗಳು ಸಾಕ್ಷಿ (5) ಬದುಕುಳಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾದವ್ ಅವರ ಮಗ ಸುನೀಲ್ (30) ಘಟನೆಯ ಸಮಯದಲ್ಲಿ ಮನೆಯಲ್ಲಿರಲಿಲ್ಲ, ಆದರೆ ತನಿಖೆಗೆ ಸಹಕರಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಲ್ಲಾ ಐವರ ತಲೆಗೂ ಹೊಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಭೀಕರ ಪ್ರಕರಣದ ತನಿಖೆಗಾಗಿ ಏಳು ತಂಡಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಂತಕರ ಸುಳಿವುಗಳನ್ನು ಸಂಗ್ರಹಿಸಲು ಶ್ವಾನದಳ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ವಿವರಣೆಗಳನ್ನು ಪಡೆದುಕೊಂಡಿದ್ದಾರೆ.
“ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರಿಗೆ ಪ್ರಾಥಮಿಕವಾಗಿ ಮಾಹಿತಿ ನೀಡಲಾಯಿತು. ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳು ತಕ್ಷಣ ಧಾವಿಸಿವು. ಯಾದವ್ ಮತ್ತು ಇತರರ ಶವಗಳು ಮನೆಯಲ್ಲಿ ಪತ್ತೆಯಾಗಿವೆ. ಚಿಕ್ಕ ಹುಡುಗಿ ಮತ್ತು ಆಕೆಯ ತಾಯಿಯ ಶವಗಳು ಬೆಂಕಿ ಹೊತ್ತಿಕೊಂಡ ಕೋಣೆಯ ಸಮೀಪದಲ್ಲಿವೆ. ಯಾದವ್ ಮತ್ತು ಅವರ ಪತ್ನಿ ಇನ್ನೂ ಉಸಿರಾಡುತ್ತಿದ್ದರು, ನಂತರ ಅವರ ಮಗಳ ಮೃತದೇಹ ಪತ್ತೆಯಾಗಿದೆ. ಯಾವುದೇ ದ್ವೇಷಕ್ಕಾಗಿ ಕೊಲೆ ಮಾಡಲಾಗಿದೆಯೇ ಎಂಬ ಮಾಹಿತಿ ದೊರೆತ್ತಿಲ್ಲ” ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಉಕ್ರೇನ್ ಸಂಘರ್ಷ & ದೆಹಲಿ ಗಲಭೆಗಳ ಪ್ರಸಾರದ ಕುರಿತು ಟಿವಿ ಚಾನೆಲ್‌ಗಳಿಗೆ ‘ಸಲಹೆ’ ನೀಡಿದ ಒಕ್ಕೂಟ ಸರ್ಕಾರ!
ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳೀಯ ನಿವಾಸಿಗಳ ಆಕ್ರೋಶವನ್ನು ಎದುರಿಸಬೇಕಾಯಿತು. ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು. ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಜಿಲ್ಲೆಯಲ್ಲಿ ಭೀಕರ ಅಪರಾಧ ಕೃತ್ಯ ನಡೆದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಏಪ್ರಿಲ್ 16 ರಂದು, ಖಗಲ್ಪುರ ಗ್ರಾಮದಲ್ಲಿ, 38 ವರ್ಷದ ಮಹಿಳೆ ಪ್ರೀತಿ ತಿವಾರಿ ಮತ್ತು ಅವರ ಮೂವರು ಪುತ್ರಿಯರಾದ ಮಹಿ (12), ಪಿಹು (8) ಮತ್ತು ಕುಹು (3) ಅವರ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪ್ರೀತಿ ತಿವಾರಿಯ ಪತಿ ರಾಹುಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳದಲ್ಲಿ ಡೆತ್‌ನೋಟ್ ಕೂಡ ಇತ್ತು. ರಾಹುಲ್ ಬರೆದಿದ್ದ ಈ ಪತ್ರದಲ್ಲಿ, ಅತ್ತೆಯ ಮಾನಸಿಕ ಕಿರುಕುಳದ ಕುರಿತು ಪ್ರಸ್ತಾಪಿಸಲಾಗಿತತು.


