ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ಗೌರವಿಸಿದೆ. ಹಿಂದೂ ಮಹಾಸಭಾದೊಂದಿಗೆ ಸಂಬಂಧ ಹೊಂದಿದ್ದಾನೆಂದು ಹೇಳಲಾಗುವ ಗೋಡ್ಸೆ, 1948 ರಲ್ಲಿ ಈ ದಿನದಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದ. 1949 ರಲ್ಲಿ ಗೋಡ್ಸೆಯನ್ನು ಅಂಬಾಲಾ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಉತ್ತರ ಪ್ರದೇಶ
ಹಿಂದೂ ಮಹಾಸಭಾ ಸದಸ್ಯರು ಬಲಪಂಥೀಯ ಸಂಘಟನೆಗೆ ಸಂಬಂಧಿಸಿದ ‘ಅಮರ್ ಹುತಾತ್ಮ ನಾಥುರಾಮ್ ಗೋಡ್ಸೆ ನಾನಾ ಆಪ್ಟೆ ಧಾಮ್’ ನಲ್ಲಿ ಒಟ್ಟುಗೂಡಿ, ಅಲ್ಲಿ ಅವರು ಗಾಂಧಿ ಅವರನ್ನು ಹತ್ಯೆ ಮಾಡಿದ ಗೋಡ್ಸೆಯನ್ನು ಶ್ಲಾಘಿಸಿದ್ದಾರೆ ಎಂದು TNIE ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಹಾಸಭಾದ ನಾಯಕ ಮತ್ತು ನಾನಾ ಆಪ್ಟೆ ಧಾಮ್‌ನ ಸ್ಥಾಪಕ ಪಂಡಿತ್ ಅಶೋಕ್ ಶರ್ಮಾ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ವೇಳೆ ಹವನ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣ ನಡೆಸಲಾಗಿದೆ ಎಂದು ವರದಿಯಾಗಿದೆ.
“ಕರಮಚಂದ್ ಗಾಂಧಿಯವರ ಆತ್ಮವನ್ನು ತೆಗೆದುಹಾಕುವುದು” ಮತ್ತು ಭಾರತದಿಂದ “ಗಾಂಧಿಸಂ” ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಸಮಾರಂಭ ಹೊಂದಿತ್ತು ಎಂದು ವರದಿ ಉಲ್ಲೇಖಿಸಿದೆ. ಭಾರತ ಸರ್ಕಾರವು ಮಹಾತ್ಮ ಗಾಂಧಿಯ “ರಾಷ್ಟ್ರಪಿತ” ಎಂಬ ಬಿರುದನ್ನು ರದ್ದುಗೊಳಿಸಬೇಕೆಂದು ಶರ್ಮಾ ಈ ವೇಳೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶ
ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾಗಿದ್ದ ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ್ ನಾನಾ ಆಪ್ಟೆ ಅವರ ಕುಟುಂಬಗಳನ್ನು ಗೌರವಿಸುವ ಯೋಜನೆಯನ್ನು ಮಹಾಸಭಾ ಪ್ರಕಟಿಸಿದೆ. ಬೆಂಬಲಿಗರಿಗೆ ಸಿಹಿತಿಂಡಿಗಳನ್ನು ವಿತರಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.
ಮದನ್ ಮೋಹನ್ ಮಾಳವೀಯ ಅವರು 1915 ರಲ್ಲಿ ಸ್ಥಾಪಿಸಿದ ಹಿಂದೂ ಮಹಾಸಭಾ, ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರೋಪಿಯಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ ನೇತೃತ್ವದಲ್ಲಿದ್ದ ಒಂದು ವಿಶಿಷ್ಟ ಪಕ್ಷವಾಗಿ ಹೊರಹೊಮ್ಮಿತ್ತು.
ಇದನ್ನೂಓದಿ: ಮಹಾರಾಷ್ಟ್ರ: ಮಂಡಳಿ ಪರೀಕ್ಷೆಗಳಲ್ಲಿ ಬುರ್ಖಾ ನಿಷೇಧಕ್ಕೆ ಸಚಿವ ನಿತೇಶ್ ರಾಣೆ ಕರೆ
ಮಹಾರಾಷ್ಟ್ರ: ಮಂಡಳಿ ಪರೀಕ್ಷೆಗಳಲ್ಲಿ ಬುರ್ಖಾ ನಿಷೇಧಕ್ಕೆ ಸಚಿವ ನಿತೇಶ್ ರಾಣೆ ಕರೆ


