ಮದುವೆಯ ಸಂಭ್ರಮಾಚರಣೆಯಲ್ಲಿದ್ದ ವರನ ಬಂದೂಕಿನಿಂದ ಸಿಡಿದ ಗುಂಡಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದಿದ್ದು ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆರೋಪಿಯನ್ನು ಮನೀಶ್ ಮಧೇಶಿಯಾ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ವರನು ತನ್ನ ಮದುವೆ ದಿಬ್ಬಣದ ರಥದ ಮೇಲೆ ನಿಂತುಕೊಂಡಿದ್ದಾಗ, ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ವೇಳೆ ಹಾರಿದ ಗುಂಡು ಅಲ್ಲೇ ಇದ್ದ ತನ್ನ ಸ್ನೇಹಿತ, ಯೋಧ ಬಾಬು ಲಾಲ್ ಯಾದವ್‌ಗೆ ತಗುಲಿದೆ. ವರ ಮನೀಶ್ ಬಳಸಿದ ಗನ್ ಲಾಲ್ ಯಾದವ್ ಅವರದ್ದು ಎಂದು ಎನ್‌ಡಿಟಿವಿ ವರದಿ ಮಾಡಿದೆ.
— Sonbhadra Police (@sonbhadrapolice) June 23, 2022
ವರ ಮತ್ತು ಹತ್ಯೆಯಾದ ವ್ಯಕ್ತಿ ಸ್ನೇಹಿತರಾಗಿದ್ದಾರೆ ಎಂದು ಸೋನಭದ್ರಾ ಪೊಲೀಸ್ ವರಿಷ್ಠಾಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ಖಚಿತಪಡಿಸಿದ್ದಾರೆ. ಗುಂಡು ಹಾರಿಸಿದ ತಕ್ಷಣ, ಲಾಲ್ ಯಾದವ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್‌ಗೆ ವ್ಯಂಗ್ಯ
ಸಂತ್ರಸ್ತನ ಕುಟುಂಬದವರು ಎಫ್‌ಐಆರ್ ದಾಖಲಿಸಿದ್ದು, ವರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗುಂಡಿನ ದಾಳಿಗೆ ಬಳಸಿದ್ದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ.
थाना रॉबर्ट्सगंज क्षेत्रान्तर्गत आशीर्वाद वाटिका मे आयोजित वैवाहिक कार्यक्रम में दूल्हा मनीष मद्धेशिया नि0 रॉबर्ट्सगंज, सोनभद्र द्वारा की गयी हर्ष फायरिंग में गोली लगने से एक व्यक्ति (सेना में कार्यरत) बाबूलाल यादव की मृत्य हो गयी जिसके सम्बन्ध में #DIG/SP SBR द्वारा दी गयी बाइट- pic.twitter.com/gS5QnfM28s
— Sonbhadra Police (@sonbhadrapolice) June 22, 2022
ಲೈಸನ್ಸ್ ಪಡೆದ ಬಂದೂಕುಗಳಿದ್ದರೂ ಕೂಡಾ ಮದುವೆ ಅಥವಾ ಇತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಂಭ್ರಮಿಸುವುದಕ್ಕಾಗಿ ಗುಂಡು ಹಾರಿಸುವುದು ಭಾರತದಲ್ಲಿ ಕ್ರಿಮಿನಲ್ ಅಪರಾಧವಾಗಿದೆ.


