Homeರಾಷ್ಟ್ರೀಯಉತ್ತರ ಪ್ರದೇಶ: ಮದುವೆಯಲ್ಲಿ ಸಿಡಿದ ಬಂದೂಕು; ವರನಿಂದ ಸ್ನೇಹಿತನ ಹತ್ಯೆ

ಉತ್ತರ ಪ್ರದೇಶ: ಮದುವೆಯಲ್ಲಿ ಸಿಡಿದ ಬಂದೂಕು; ವರನಿಂದ ಸ್ನೇಹಿತನ ಹತ್ಯೆ

- Advertisement -
- Advertisement -

ಮದುವೆಯ ಸಂಭ್ರಮಾಚರಣೆಯಲ್ಲಿದ್ದ ವರನ ಬಂದೂಕಿನಿಂದ ಸಿಡಿದ ಗುಂಡಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದಿದ್ದು ವರದಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆರೋಪಿಯನ್ನು ಮನೀಶ್‌‌ ಮಧೇಶಿಯಾ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ವರನು ತನ್ನ ಮದುವೆ ದಿಬ್ಬಣದ ರಥದ ಮೇಲೆ ನಿಂತುಕೊಂಡಿದ್ದಾಗ, ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವೇಳೆ ಹಾರಿದ ಗುಂಡು ಅಲ್ಲೇ ಇದ್ದ ತನ್ನ ಸ್ನೇಹಿತ, ಯೋಧ ಬಾಬು ಲಾಲ್ ಯಾದವ್‌ಗೆ ತಗುಲಿದೆ. ವರ ಮನೀಶ್‌ ಬಳಸಿದ ಗನ್ ಲಾಲ್‌‌ ಯಾದವ್ ಅವರದ್ದು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ವರ ಮತ್ತು ಹತ್ಯೆಯಾದ ವ್ಯಕ್ತಿ ಸ್ನೇಹಿತರಾಗಿದ್ದಾರೆ ಎಂದು ಸೋನಭದ್ರಾ ಪೊಲೀಸ್ ವರಿಷ್ಠಾಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ಖಚಿತಪಡಿಸಿದ್ದಾರೆ. ಗುಂಡು ಹಾರಿಸಿದ ತಕ್ಷಣ, ಲಾಲ್ ಯಾದವ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವಾಟ್ಸಾಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್‌ಗೆ ವ್ಯಂಗ್ಯ

ಸಂತ್ರಸ್ತನ ಕುಟುಂಬದವರು ಎಫ್‌ಐಆರ್ ದಾಖಲಿಸಿದ್ದು, ವರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗುಂಡಿನ ದಾಳಿಗೆ ಬಳಸಿದ್ದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ.

ಲೈಸನ್ಸ್ ಪಡೆದ ಬಂದೂಕುಗಳಿದ್ದರೂ ಕೂಡಾ ಮದುವೆ ಅಥವಾ ಇತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸಂಭ್ರಮಿಸುವುದಕ್ಕಾಗಿ ಗುಂಡು ಹಾರಿಸುವುದು ಭಾರತದಲ್ಲಿ ಕ್ರಿಮಿನಲ್ ಅಪರಾಧವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...