ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿ ಮುಸ್ಲಿಂ ವೈದ್ಯೆಗೆ ಮನೆ ಮಾರಾಟ ಮಾಡಿದ್ದಕ್ಕೆ, ಅಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೊರಾದಾಬಾದ್‌ನ ಟಿಡಿಐ ಹೌಸಿಂಗ್ ಸೊಸೈಟಿಯಲ್ಲಿ ಸುಮಾರು 450 ಹಿಂದೂ ಕುಟುಂಬಗಳು ವಾಸಿಸುತ್ತಿವೆ. ಅಲ್ಲಿ ಯಾವುದೇ ಮುಸ್ಲಿಂ ಮನೆಗಳಿಲ್ಲ. ಇಲ್ಲಿನ ನಿವಾಸಿಯಾಗಿರುವ ಡಾ. ಅಶೋಕ್ ಬಜಾಜ್ ಎಂಬವರು ತನ್ನ ಸಹೋದ್ಯೋಗಿ ಡಾ. ಇಕ್ರಾ ಚೌಧರಿ ಎಂಬವರಿಗೆ ಮನೆ ಮಾರಾಟ ಮಾಡಿದ್ದಾರೆ. ಇದಕ್ಕೆ ಹಿಂದೂ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿ ಮಂಗಳವಾರ (ಡಿ.3) ತಡರಾತ್ರಿ ಪ್ರತಿಭಟಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
A Doctor sold his house to a fellow Doctor… why on earth would that lead to a massive protest / uproar in a posh housing society in Moradabad??
Well because the DOCTOR who bought the house is a Muslim and that will lead to ‘security concerns’ say residents.
Welcome to #NewIndia pic.twitter.com/psQETYdbCp— The DeshBhakt 🇮🇳 (@TheDeshBhakt) December 4, 2024
“ಮುಸ್ಲಿಂ ವೈದ್ಯೆಗೆ ಮನೆ ಮಾರಾಟ ಮಾಡಿರುವುದು ಹೌಸಿಂಗ್ ಸೊಸೈಟಿಯ ಜನಸಂಖ್ಯಾ ಬದಲಾವಣೆಗಳಿಗೆ ಕಾರಣವಾಗಬಹುದು ಮತ್ತು ಹಿಂದೂ ಕುಟುಂಬಗಳು ಈ ಪ್ರವೃತ್ತಿಯನ್ನು ಮುಂದುವರಿಸಬಹುದು ಎಂಬ ಭಯವಿದೆ. ಸಾಮಾಜಿಕ ಸಾಮರಸ್ಯ ಹಾಳಾಗಬಹುದು” ಎಂದು ಪ್ರತಿಭಟನಾಕಾರರು ಹೇಳಿದ್ದಾಗಿ ವರದಿ ತಿಳಿಸಿದೆ.
ಪ್ರತಿಭಟನಾಕಾರರಲ್ಲಿ ಒಬ್ಬರಾದ ಪಾಯಲ್ ರಸ್ತೋಗಿ ಮಾತನಾಡಿ, “ಡಾ.ಅಶೋಕ್ ಬಜಾಜ್ ನಮಗೆ ಯಾವುದೇ ಮಾಹಿತಿ ನೀಡದೆ ತನ್ನ ಮನೆಯನ್ನು ಹಿಂದೂಯೇತರರಿಗೆ ಮಾರಿದ್ದಾರೆ. ನಾವು ಇಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದೇವೆ. ಇಲ್ಲಿ ಹಿಂದೆಂದೂ ಯಾವುದೇ ಸಮಸ್ಯೆ ಇರಲಿಲ್ಲ. ಬಜಾಜ್ ಅವರು ಇಕ್ರಾ ಚೌಧರಿಗೆ ಮನೆ ನೋಂದಣಿ ಮಾಡಿ ಕೊಟ್ಟಿರುವುದನ್ನು ವಾಪಸ್ ಪಡೆಯಬೇಕು. ಈ ಬಗ್ಗೆ ನಾವು ಈಗಾಗಲೇ ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವಿವರಿಸಿದೆ.
ಸೊಸೈಟಿಯ ನಿವಾಸಿ ಪಲ್ಲವಿ ಮಾತನಾಡಿ “ನಮಗೆ ಯಾವುದೇ ಸಮುದಾಯದೊಂದಿಗೆ ದ್ವೇಷವಿಲ್ಲ, ವ್ಯವಸ್ಥೆಯು ಬದಲಾಗುವುದನ್ನು ನಾವು ಬಯಸುವುದಿಲ್ಲ. ಸುಮಾರು 15 ವರ್ಷಗಳಿಂದ ಇದು ಹಿಂದೂಗಳ ಪ್ರದೇಶವಾಗಿದೆ. ಇಕ್ರಾ ಚೌಧರಿಗೆ ಮಾರಿರುವ ಮನೆಯನ್ನು ಮತ್ತೆ ಹಿಂದೂ ಹೆಸರಿಗೆ ನೋಂದಣಿ ಮಾಡುವುದು ಮುಖ್ಯ ಎಂದು ನಾವು ಭಯಸುತ್ತೇವೆ. ಇಲ್ಲವಾದರೆ, ಇಲ್ಲಿಂದ ಹಿಂದೂಗಳು ಹೊರ ಹೋಗಬಹುದು. ಎಲ್ಲವೂ ಬದಲಾಗಬಹುದು” ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು, ಇತರ ಹಿಂದೂ ಪ್ರದೇಶಗಳಲ್ಲೂ ಮನೆಗಳು ಮುಸ್ಲಿಮರಿಗೆ ಮಾರಾಟವಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬರು ಮುಸ್ಲಿಮರಿಗೆ ಮನೆ ಮಾರಿದರೆ ಉಳಿದವರು ಕೂಡ ಇದನ್ನೇ ಅನುಸರಿಸಬಹುದು. ಹಾಗಾದರೆ, ಶೀಘ್ರದಲ್ಲೇ ಹಿಂದೂ ಪ್ರದೇಶಗಳ ಸ್ವರೂಪ ಬದಲಾಗಬಹುದು ಎಂದು ಹೇಳಿದ್ದಾರೆ.
ಸೊಸೈಟಿ ನಿವಾಸಿಗಳಿಂದ ದೂರು ಬಂದಿದೆ. ನಾವು ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಸೌಹಾರ್ದತೆ ಕಾಪಾಡಿಕೊಳ್ಳಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಾತುಕತೆ ನಡೆಸುತ್ತಿದೆ ಎಂದು ಮೊರಾದಾಬಾದ್ ಜಿಲ್ಲಾಧಿಕಾರಿ ಅನುಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಇದನ್ನೂ ಓದಿ : ‘ಯುಪಿ ದರೋಡೆಕೋರರ ಕಾಯಿದೆ’ ಕ್ರೂರವಾಗಿರುವಂತೆ ತೋರುತ್ತಿದೆ – ಸುಪ್ರೀಂಕೋರ್ಟ್


