ಉತ್ತರ ಪ್ರದೇಶದ ಸೀತಾಪುರದ ಲಕ್ನೋ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸ್ಥಳೀಯ ಪತ್ರಕರ್ತ ಮತ್ತು ಆರ್‌ಟಿಐ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಗಿದೆ. ಮೃತ ರಾಘವೇಂದ್ರ ಬಾಜ್‌ಪೈ ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರರಾಗಿದ್ದರು.
ದಾಳಿಕೋರರು ಮೊದಲು ಅವರ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಮೂರು ಬಾರಿ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಮೊದಲು ಇದನ್ನು ಅಪಘಾತವೆಂದು ಪರಿಗಣಿಸಲಾಗಿತ್ತು. ಆದರೆ, ಜಿಲ್ಲಾ ಆಸ್ಪತ್ರೆಯ ವೈದ್ಯರು ಅವರ ದೇಹದಲ್ಲಿ ಮೂರು ಗುಂಡುಗಳ ಗಾಯಗಳನ್ನು ಪತ್ತೆ ಮಾಡಿದ ನಂತರ, ಶೀಘ್ರದಲ್ಲೇ ಅದನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಯಿತು.
35 ವರ್ಷದ ಪತ್ರಕರ್ತ ಶನಿವಾರ ಮಧ್ಯಾಹ್ನ ಫೋನ್ ಕರೆ ಬಂದ ನಂತರ ತನ್ನ ಮನೆಯಿಂದ ಹೊರಟಿದ್ದರು. ಸ್ವಲ್ಪ ಸಮಯದ ನಂತರ, ಮಧ್ಯಾಹ್ನ 3:15 ರ ಸುಮಾರಿಗೆ, ಹೆದ್ದಾರಿಯಲ್ಲಿ ಅವರನ್ನು ಕೊಲ್ಲಲಾಯಿತು.
ಕೊಲೆಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ನಿರ್ಧರಿಸಿಲ್ಲ; ಎಫ್‌ಐಆರ್ ಕೂಡ ದಾಖಲಿಸಲಾಗಿಲ್ಲ. ಪ್ರಕರಣ ದಾಖಲಿಸುವ ಮೊದಲು ಮೃತನ ಕುಟುಂಬದಿಂದ ಔಪಚಾರಿಕ ದೂರಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಪೊಲೀಸರ ಪ್ರಕಾರ, “ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಹೋಲಿ, ಇಮಾಲಿಯಾ ಮತ್ತು ಕೊತ್ವಾಲಿಯ ಪೊಲೀಸ್ ತಂಡಗಳು, ಕಣ್ಗಾವಲು ಮತ್ತು ಎಸ್‌ಒಜಿ ತಂಡಗಳೊಂದಿಗೆ ಆರೋಪಿಗಳನ್ನು ತನಿಖೆ ಮಾಡಲು ಮತ್ತು ಗುರುತಿಸಲು ನಿಯೋಜಿಸಲಾಗಿದೆ” ಎಂದು ಮಾಹಿತಿ ನಿಡಿದ್ದಾರೆ.
ದೆಹಲಿ ಗಲಭೆ ಪ್ರಕರಣ: ವೈಯಕ್ತಿಕ ಆಧಾರದ ಮೇಲೆ ಶಾರುಖ್ ಪಠಾಣ್‌ಗೆ 15 ದಿನಗಳ ಮಧ್ಯಂತರ ಜಾಮೀನು


