ಕಂಬಳಿ ರಫ್ತುದಾರ ಸೇರಿದಂತೆ ಇಬ್ಬರು ದುಷ್ಕರ್ಮಿಗಳು ದುಡಿದ ಹಣ ಕೊಡುತ್ತೇವೆ ಎಂದು ಕಚೇರಿಗೆ ಕರೆಸಿ ದಲಿತ ಕಾರ್ಮಿಕನಿಗೆ ಹೊಡೆದು ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಉತ್ತರ ಪ್ರದೇಶದ ಭದೋಯಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.ಉತ್ತರ ಪ್ರದೇಶ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಾರ್ಪೆಟ್ ರಫ್ತುದಾರ ಅನುರಾಗ್ ಬರನ್ವಾಲ್ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಗುರುವಾರ ಔರೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಸುಲಿಗೆ’ | ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಬೆಂಗಳೂರಿನಲ್ಲಿ FIR
ದೂರುದಾರ ಓಂ ಪ್ರಕಾಶ್ ಗೌತಮ್ (34) ಮತ್ತು ಅವರ 20 ಕಾರ್ಮಿಕರು ಮೇ ನಿಂದ ಆಗಸ್ಟ್‌ವರೆಗೆ ಅನುರಾಗ್ ಬರನ್ವಾಲ್ ಅವರ ರಫ್ತು ಸಂಸ್ಥೆಯಲ್ಲಿ 7,80,000 ರೂಪಾಯಿ ಮೌಲ್ಯದ ಕಾರ್ಪೆಟ್ ಫಿನಿಶಿಂಗ್ ಮತ್ತು ಪ್ಯಾಕಿಂಗ್ ಕೆಲಸವನ್ನು ಪಡೆದಿದ್ದರು.
ಆರಂಭದಲ್ಲಿ, ಅನುರಾಗ್ ಬರನ್ವಾಲ್ ಅವರಿಗೆ 2,14,485 ರೂ.ಗಳನ್ನು ನೀಡಿದ್ದರು. ಆದರೆ ಆಗಸ್ಟ್ 30 ರಂದು ಬರನ್ವಾಲ್ ಅವರು ಗೌತಮ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಬಾಕಿ ಇರುವ 5,65,515 ರೂ. ನೀಡಿವುದಾಗಿ ಹೇಳಿದ್ದರು. ಆದರೆ ಗೌತಮ್ ಅವರ ಕಚೇರಿಗೆ ಹೋದಾಗ ಬರನ್ವಾಲ್ ಮತ್ತು ಇನ್ನೊಬ್ಬ ವ್ಯಕ್ತಿ ಕಚೇರಿಯನ್ನು ಮುಚ್ಚಿ ಆತನಿಗೆ ಥಳಿಸಿದ್ದಾರೆ ಎಂದು ಎಫ್‌ಐಆರ್ ಅನ್ನು ಉಲ್ಲೇಖಿಸಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೀನಾಕ್ಷಿ ಕಾತ್ಯಾಯನ್ ಹೇಳಿದ್ದಾರೆ.ಉತ್ತರ ಪ್ರದೇಶ
ದೂರುದಾರರ ಬಟ್ಟೆ ಹರಿದು ಆಸಿಡ್ ಸುರಿದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಗೌತಮ್‌ನ ಕೂಗು ಕೇಳಿದ ಕೆಲ ಕಾರ್ಖಾನೆಯ ಕಾರ್ಮಿಕರು ಬಾಗಿಲು ತೆರೆದ್ದಾರೆ. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ:ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


