ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ತಮಿಳುನಾಡು ದೇಶದಲ್ಲಿ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿರುವ ಐದು ರಾಜ್ಯಗಳಾಗಿವೆ ಎಂದು ಕೇಂದ್ರ ಸರ್ಕರ ಶುಕ್ರವಾರ ತಿಳಿಸಿದೆ.
ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರನ್ನು 100% ತಪಾಸಣೆ ಮಾಡಲು ಫೆಬ್ರವರಿ 20 ರಿಂದ ಮಾರ್ಚ್ 31 ರವರೆಗೆ ಸಚಿವಾಲಯವು ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶ
“ಈ ಅಭಿಯಾನವನ್ನು ದೇಶಾದ್ಯಂತ ಆಯುಷ್ಮಾನ್ ಆರೋಗ್ಯ ಮಂದಿರಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳಲ್ಲಿ ನಡೆಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)-ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮ (ಎನ್‌ಸಿಆರ್‌ಪಿ)ವನ್ನು ಉಲ್ಲೇಖಿಸಿದ ಅವರು, ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಇರುವ ಐದು ರಾಜ್ಯಗಳು ಉತ್ತರ ಪ್ರದೇಶ (2,10,958 ಪ್ರಕರಣಗಳು), ಮಹಾರಾಷ್ಟ್ರ (1,21,717), ಪಶ್ಚಿಮ ಬಂಗಾಳ (1,13,581), ಬಿಹಾರ (1,09,274) ಮತ್ತು ತಮಿಳುನಾಡು (93,536) ಎಂದು ಹೇಳಿದ್ದಾರೆ.
ICMR-NCRP ದತ್ತಾಂಶದ ಪ್ರಕಾರ, 2025 ರಲ್ಲಿ ದೇಶದಲ್ಲಿ ಅಂದಾಜು ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 15,69,793 ಎಂದು ಅವರು ಹೇಳಿದ್ದಾರೆ. ಜಾಗತಿಕ ಕ್ಯಾನ್ಸರ್ ವೀಕ್ಷಣಾಲಯ, ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC)ಯನ್ನು ಉಲ್ಲೇಖಿಸಿದ ಅವರು, 2040 ರ ವೇಳೆಗೆ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು 22,18,694 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
“ರೋಗ ಪತ್ತೆಗಾಗಿ ಸುಧಾರಿತ ರೋಗನಿರ್ಣಯ ತಂತ್ರಗಳ ಲಭ್ಯತೆ ಮತ್ತು ಅದು ಜನರ ಕೈಗೆಟುಕದಿರುವುದು, ಹೆಚ್ಚಿದ ಜೀವಿತಾವಧಿ, ವೃದ್ಧರ ಜನಸಂಖ್ಯೆಯ ಹೆಚ್ಚುತ್ತಿರುವುದು, ಹೆಚ್ಚಿನ ಆರೋಗ್ಯ ಪ್ರಜ್ಞೆ ಮತ್ತು ಸುಧಾರಿತ ಆರೋಗ್ಯ ಹುಡುಕಾಟ ನಡವಳಿಕೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲು ಕಾರಣ” ಎಂದು ICMR ಅನ್ನು ಉಲ್ಲೇಖಿಸಿ ಸಚಿವರು ಹೇಳಿದ್ದಾರೆ.
ಅಲ್ಲದೆ, ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳಿಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಉದಾಹರಣೆಗೆ ತಂಬಾಕು ಮತ್ತು ಮದ್ಯ ಸೇವನೆ, ಸಾಕಷ್ಟು ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಅನಾರೋಗ್ಯಕರ ಆಹಾರ ಪದ್ಧತಿ, ಹೆಚ್ಚಿನ ಉಪ್ಪು, ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕ್ಯಾನ್ಸರ್ ವೀಕ್ಷಣಾಲಯ, ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಮಾಹಿತಿ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಅಂದಾಜು ಪ್ರಮಾಣ 14,13,316 ಇದ್ದು, ವಿಶ್ವದಲ್ಲೆ ಅತೀ ಹೆಚ್ಚು ಕ್ಯಾನ್ಸರ್ ಇರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭಾರತದ ಪ್ರತಿ 1 ಲಕ್ಷ ಜನರಲ್ಲಿ 98.5 ಜನರಿಗೆ ಕ್ಯಾನ್ಸರ್ ಇವೆ. ಮೊದಲ ಸ್ಥಾನದಲ್ಲಿ ಚೀನಾ ಇದ್ದು, ಇಲ್ಲಿನ 48,24,703 ಜನರಿಗೆ ಕ್ಯಾನ್ಸರ್ ಇದೆ. ಇಲ್ಲಿನ ಪ್ರತಿ 1 ಲಕ್ಷ ಜನರಲ್ಲಿ 201.6 ಜನರಿಗೆ ಕ್ಯಾನ್ಸರ್ ಇವೆ. ಅಮೇರಿಕಾ 2ನೇ ಸ್ಥಾನದಲ್ಲಿದ್ದು, ಇಲ್ಲಿ 23,80,189 ಜನರಿಗೆ ಕ್ಯಾನ್ಸರ್ ಇದೆ. ಇಲ್ಲಿನ ಪ್ರತಿ 1 ಲಕ್ಷ ಜನರಲ್ಲಿ 367 ಜನರಿಗೆ ಕ್ಯಾನ್ಸರ್ ಇವೆ.
ICMR-NCRP ದತ್ತಾಂಶವನ್ನು ಉಲ್ಲೇಖಿಸಿದ ಸಚಿವರು, ಶ್ವಾಸಕೋಶ ಮತ್ತು ಸ್ತನದ ಕ್ಯಾನ್ಸರ್ ದೇಶದ ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ ಎಂದು ಹೇಳಿದ್ದಾರೆ. 2025-26 ರ ಬಜೆಟ್ ಘೋಷಣೆಯ ಪ್ರಕಾರ, ಭಾರತದಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ 200 ಡೇ ಕೇರ್ ಕ್ಯಾನ್ಸರ್ ಕೇಂದ್ರಗಳನ್ನು (DCCCs) ಸ್ಥಾಪಿಸಲು ಸರ್ಕಾರ ಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: “ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ, ನಾನು ಊರಿಗೆ ಹೋಗುತ್ತೇನೆ”: ಮಲ್ಪೆ ಬಂದರಿನಲ್ಲಿ ಹಲ್ಲೆಗೊಳಗಾದ ದಲಿತ ಮಹಿಳೆ
“ಇನ್ನು ಇಲ್ಲಿ ಕೆಲಸ ಮಾಡುವುದು ಕಷ್ಟ, ನಾನು ಊರಿಗೆ ಹೋಗುತ್ತೇನೆ”: ಮಲ್ಪೆ ಬಂದರಿನಲ್ಲಿ ಹಲ್ಲೆಗೊಳಗಾದ ದಲಿತ ಮಹಿಳೆ

