ಉತ್ತರ ಪ್ರದೇಶದ ಮುಜಫರ್‌ನಗರದ ಪೊಲೀಸರು, ನಗರದಲ್ಲಿ ಹೆಚ್ಚಿನ ಶಬ್ದ ಮಾಡುತ್ತಿದ್ದ ಧ್ವನಿವರ್ಧಕಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಧ್ವನಿ ಮಿತಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿವಿಧ ಮಸೀದಿಗಳಿಂದ 55 ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ನಡೆಯುತ್ತಿರುವ ತೆರವು ಅಭಿಯಾನದ ಭಾಗವಾಗಿ ಸಿವಿಲ್ ಲೈನ್ಸ್, ಕೊಟ್ವಾಲಿ ಮತ್ತು ಖಲಾಪರ್ ಪೊಲೀಸ್ ಠಾಣೆ ಪ್ರದೇಶಗಳಲ್ಲಿರುವ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.
ಸರ್ಕಲ್ ಆಫೀಸರ್ (ನಗರ) ಸಿದ್ಧಾರ್ಥ್ ಮಿಶ್ರಾ ಮಾತನಾಡಿ, ಜಿಲ್ಲಾ ಅಧಿಕಾರಿಗಳು ಮಸೀದಿಗಳು, ದೇವಾಲಯಗಳು, ಗುರುದ್ವಾರಗಳ ಉಸ್ತುವಾರಿಗಳಿಗೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರವು ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಹೊರಡಿಸಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ ಎಂದರು.
ಅಸ್ತಿತ್ವದಲ್ಲಿರುವ ಎಲ್ಲಾ ಧ್ವನಿವರ್ಧಕಗಳು ಅನುಮತಿಸಲಾದ ಕಾನೂನುಬದ್ಧ ಧ್ವನಿ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಗುರಿಯಾಗಿದೆ ಎಂದು ಅವರು ಹೇಳಿದರು.


