ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದ ತೀವ್ರ ವಯಸ್ಸಾಗಿದ್ದ ಮುಸ್ಲಿಂ ವೃದ್ಧನ ಮೇಲೆ ಯವಕರ ಗುಂಪೊಂದು ಜೈಶ್ರೀರಾಮ್, ವಂದೇಮಾತರಂ ಘೋಷಣೆ ಕೂಗುವಂತೆ ಒತ್ತಾಯಿಸಿ ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿ ಎಂಬಲ್ಲಿ ವರದಿಯಾಗಿದೆ.
ಜೂನ್ 05 ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ವೃದ್ಧ ಅಬ್ದುಲ್ ಸಮದ್ ಪ್ರಾರ್ಥನೆ ಮುಗಿಸಿ ಬರುತ್ತಿದ್ದಾಗ ಆಟೋದಲ್ಲಿ ಬಂದ ಯುವಕರು ಅವರನ್ನು ಕಾಡಿನೊಳಗೆ ಎಳೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆ. ಚಾಕುವಿನಲ್ಲಿ ವೃದ್ದನ ಗಡ್ಡ ಕತ್ತರಿಸಿ, ಕೋಲಿನಿಂದ ಬಾರಿಸಿ ಅಮಾನವೀಯತೆ ಮೆರೆದಿದ್ದಾರೆ.
ಹಲ್ಲೆಯ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಅಂತರ್ಜಾಲಕ್ಕೆ ಅಪ್‌ಲೋಡ್ ಮಾಡಲಾಗಿದೆ. ವೃದ್ದನು ಪಾಕಿಸ್ತಾನದ ಏಜೆಂಟ್ ಆಗಿದ್ದಾನೆ ಎಂದು ಆರೋಪಿಸಿ ಮನಸೋ ಇಚ್ಛೆ ತಳಿಸಿದ್ದಾರೆ.
In Hindutva ideology bravery is always attacking frail elderly men or little teenagers. And always as a mob (never alone). @India_NHRC will you react? These men are from same ideology. Muslims’ right to dignity is being snatched by Hindutvadi goons 1/3pic.twitter.com/yZqALTCjiu
— Asaduddin Owaisi (@asadowaisi) June 14, 2021
ಈ ಕುರಿತು ಸಂತ್ರಸ್ತ ವೃದ್ದ ಹೇಳಿಕೆ ನೀಡಿದ್ದಾರೆ. “ನಾನು ಮನೆಗೆ ವಾಪಸ್ ಬರುತ್ತಿದ್ದಾಗ ಲಿಫ್ಟ್ ಕೊಡುತ್ತೇನೆ ಎಂದು ಆಟೋಗೆ ಹತ್ತಿಸಿಕೊಂಡ. ನಂತರು ಇಬ್ಬರು ಅದೇ ಆಟೋ ಏರಿದರು. ನನ್ನನ್ನು ಬಲವಂತವಾಗಿ ಯಾವುದೋ ಮನೆಗೆ ಕರೆದೊಯ್ದು ರೂಮಿನಲ್ಲಿ ಕಟ್ಟಿಹಾಕಿದರು. ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿದರು. ನನ್ನ ಮೊಬೈಲ್ ಕಿತ್ತುಕೊಂಡು ಚಾಕುವಿನಿಂದ ಗಡ್ಡ ಕತ್ತರಿಸಿದರು. ನಂತರ ಮನಬಂದಂತೆ ಥಳಿಸಿದರು” ಎಂದು ಅಳುತ್ತಾ ವಿವರಿಸಿದ್ದಾರೆ.
ಅವರು ನನಗೆ ಮೊಬೈಲ್‌ನಲ್ಲಿ ಮತ್ತೊಬ್ಬ ಮುಸ್ಲಿಂನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ತೋರಿಸಿದರು. ಈಗಾಗಲೇ ಹಲವು ಮುಸ್ಲಿಮರನ್ನು ಕೊಂದಿದ್ದೇನೆ ಎಂದು ಯುವಕನೊಬ್ಬ ತಿಳಿಸಿದ ಎಂದು ವೃದ್ದ ಆರೋಪಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರವೇಶ್ ಗುಜ್ಜರ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಆತ ಪ್ರಕರಣದ ಮುಖ್ಯ ಆರೋಪಿ ಎನ್ನಲಾಗಿದೆ. ಆತ ಇನ್ನು ತನ್ನ ಹೇಳಿಕೆಯನ್ನು ದಾಖಲಿಸಿಲ್ಲ. ಇತರರಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಜೀವ ಬೆದರಿಕೆಯಿದೆ ಎಂದು ಪೊಲೀಸರಿಗೆ ತಿಳಿಸಿದ್ದ ಪತ್ರಕರ್ತ ಸಾವು: ಅಪಘಾತ ಎಂದ ಪೊಲೀಸರು!


