ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು, ತನ್ನ ಡಬ್ಬಿಯಲ್ಲಿ ಮಾಂಸಾಹಾರಿ ಊಟ ತಂದ ಆರೋಪದ ಮೇಲೆ ನರ್ಸರಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದದ ವಿಡಿಯೋ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ವಿಡಿಯೋವನ್ನು ಪೋಷಕರೊಬ್ಬರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.
“ನಮ್ಮ ದೇವಸ್ಥಾನಗಳನ್ನು ಕೆಡವಿ ಶಾಲೆಗೆ ಮಾಂಸಾಹಾರ ತರಿಸುವ ಇಂತಹ ನೈತಿಕತೆಯನ್ನು ಮಕ್ಕಳಿಗೆ ಕಲಿಸಲು ನಾವು ಬಯಸುವುದಿಲ್ಲ” ಎಂದು ಪ್ರಾಂಶುಪಾಲರು ಮಗುವಿನ ತಾಯಿಗೆ ಹೇಳಿದರು. ವಿದ್ಯಾರ್ಥಿಯು ಸಹ ವಿದ್ಯಾರ್ಥಿಗಳಿಗೆ ಮಾಂಸಾಹಾರಿ ಆಹಾರವನ್ನು ತಿನ್ನಿಸಿ, ಅವರನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಮಾತನಾಡಿದ್ದಾನೆ ಎಂದು ಪ್ರಾಂಶುಪಾಲರು ಆರೋಪಿಸಿದ್ದಾರೆ.
A 4-5-year-old Muslim child was expelled from Hilton Public School, Amroha, over allegations of bringing non-veg food.
The principal allegedly stated, "We can't educate kids who break our temples, harm Hindus, talk about converting all Hindus, and destroying Ram Mandir." pic.twitter.com/7E3duOyNn9
— Mohd Shadab Khan (@ShadabKhanPost) September 5, 2024
ಮಗುವಿನ ತಾಯಿ ಪ್ರಾಂಶುಪಾಲರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತನ್ನ ಏಳು ವರ್ಷದ ಮಗನಿಗೆ ಅಂತಹ ವಿಷಯಗಳನ್ನು ಗ್ರಹಿಸಲು ಸಹ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ಈ ವಿಚಾರಗಳನ್ನು ಮಗು ಮನೆಯಲ್ಲಿ ಕಲಿಯುತ್ತದೆ” ಎಂದು ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ.
ಇತರ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದರಿಂದ ಶಾಲೆಯ ರಿಜಿಸ್ಟರ್‌ನಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪ್ರಾಂಶುಪಾಲರು ಹೇಳಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳು ಹಿಂದೂ-ಮುಸ್ಲಿಂ ವಿಷಯಗಳ ಬಗ್ಗೆ ಜಗಳವಾಡುತ್ತಾರೆ ಮತ್ತು ಅದೇ ತರಗತಿಯ ಇನ್ನೊಬ್ಬ ವಿದ್ಯಾರ್ಥಿಯು ತನ್ನ ಮಗುವಿನ ಮೇಲೆ ಆಗಾಗ್ಗೆ ಹಲ್ಲೆ, ತೊಂದರೆ ನೀಡುತ್ತಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.
ಈ ನಡುವೆ, ಸುಮಾರು ಏಳು ನಿಮಿಷಗಳ ಕಾಲ ವ್ಯಾಪಕವಾಗಿ ವೈರಲ್ ಆಗಿರುವ ವೀಡಿಯೊಗೆ ಪ್ರತಿಕ್ರಿಯೆಯಾಗಿ, ಅಮ್ರೋಹಾ ಪೊಲೀಸರು, ಜಿಲ್ಲಾ ಶಾಲೆಗಳ ಇನ್ಸ್‌ಪೆಕ್ಟರ್ (ಡಿಐಎಸ್) ಕ್ರಮ ಕೈಗೊಂಡಿದ್ದಾರೆ ಮತ್ತು ತನಿಖೆ ಮತ್ತು ಮುಂದಿನ ಕ್ರಮ ತೆಗೆದುಕೊಳ್ಳಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ; ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಆರೋಪಿ ಸಂಜಯ್ ರಾಯ್ ಡಿಎನ್‌ಎ ಹೊಂದಾಣಿಕೆ, ಅಂತಿಮ ಹಂತದಲ್ಲಿ ಸಿಬಿಐ ತನಿಖೆ


