ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೋಸ್ಟ್ ಮಾರ್ಟಮ್ ಮನೆಯೊಳಗೆ ಇಬ್ಬರು ವ್ಯಕ್ತಿಗಳು ದೇಹವನ್ನು ಅದರ ಕಾಲು ಹಿಡಿದು ಎಳೆದುಕೊಂಡು ಹೋಗುತ್ತಿರುವ ವೀಡಿಯೊ ವೈರಲ್ ಆಗಿದೆ.
ನಗರದ ಆಸ್ಪತ್ರೆಯೊಂದರ ಹೊರಗೆ, ಇಬ್ಬರು ವ್ಯಕ್ತಿಗಳು ದೇಹವೊಂದರ ಕಾಲಿಗೆ ಬಟ್ಟೆ ಕಟ್ಟಿ ಶವಾಗಾರಕ್ಕೆ ಎಳೆದೊಯ್ಯತ್ತಿರುವ ವೀಡಿಯೊ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ರಾಜ್ಯದ ವೈದ್ಯಕೀಯ ಸೌಲಭ್ಯಗಳಲ್ಲಿನ ಸಿಬ್ಬಂದಿ ಶವಗಳನ್ನು ನಿರ್ವಹಿಸುವ ವಿಧಾನದ ಬಗ್ಗೆ ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮೂಲಗಳ ಪ್ರಕಾರ, ಇತ್ತೀಚಿನ ವೀಡಿಯೊವನ್ನು ಝಾನ್ಸಿ ಪೋಸ್ಟ್ ಮಾರ್ಟಮ್ ಹೌಸ್ ಹೊರಗೆ ತೆಗೆಯಲಾಗಿದೆ. ಆದರೆ, ಈ ಘಟನೆಯ ದಿನವನ್ನು ತಕ್ಷಣವೇ ಖಚಿತಪಡಿಸಲು ಸಾಧ್ಯವಾಗಲಿಲ್ಲ.
A case of appalling apathy has come to the fore in #UttarPradesh's #Jhansi, where two men, in a viral video, are seen dragging a body by its legs inside a post mortem house.
This came just days after a video showed another man manhandling another body outside a hospital in the… pic.twitter.com/UUEXJvmld0
— Hate Detector 🔍 (@HateDetectors) January 6, 2025
ಒಂಬತ್ತು ಸೆಕೆಂಡುಗಳ ವೀಡಿಯೊದಲ್ಲಿ ಇಬ್ಬರು ಪುರುಷರು ಶವಪರೀಕ್ಷೆ ಸೌಲಭ್ಯವನ್ನು ಪ್ರವೇಶಿಸುತ್ತಿದ್ದಂತೆ ಕಾಲುಗಳಿಗೆ ಕಟ್ಟಲಾದ ಬಟ್ಟೆಯಿಂದ ದೇಹವನ್ನು ಎಳೆಯುವುದನ್ನು ಕಾಣಬಹುದು. ಇಬ್ಬರೂ ವ್ಯಕ್ತಿಗಳು ಆಂಬ್ಯುಲೆನ್ಸ್‌ನ ನಿರ್ವಾಹಕರು ಎಂದು ಮೂಲಗಳು ತಿಳಿಸಿವೆ.
ಪೋಸ್ಟ್ ಮಾರ್ಟಮ್ ಹೌಸ್ ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಸರ್ಕಲ್ ಆಫೀಸರ್ ರಾಮ್ವೀರ್ ಸಿಂಗ್ ಅವರು ವೀಡಿಯೊದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
“ಪೊಲೀಸರು ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಶವವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಾವು ವೀಡಿಯೊದ ಸ್ಥಳ ಮತ್ತು ಸಮಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಂಗ್ ಹೇಳಿದರು.
ಇದನ್ನೂ ಓದಿ; ಮಣಿಪುರ ಅಂತಿಮ ಮತದಾರರ ಪಟ್ಟಿ; ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು


