ತಾನು ಹೇಳಿದಾಗ ಹಣ್ಣುಗಳನ್ನು ಕೀಳಲು ನಿರಾಕರಿಸಿದ್ದಕ್ಕಾಗಿ ನಾಲ್ಕನೇ ತರಗತಿಯ ವಿದ್ಯಾರ್ಥಿಯನ್ನು ಆತನ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿಯ ಕುಲಾಡಿಯಾದಲ್ಲಿ ಘಟನೆ ನಡೆದಿದ್ದು, “ತಮ್ಮ ಒಂಬತ್ತು ವರ್ಷದ ಮಗನನ್ನು ತರಗತಿಯಲ್ಲಿ ಬಂಧಿಸಿ, ಅವರ ಶಿಕ್ಷಕಿಯು ನಿಷ್ಕರುಣೆಯಿಂದ ಹೊಡೆದಿದ್ದಾರೆ” ಎಂದು ಪೋಷಕರು ಆರೋಪಿಸಿದ್ದಾರೆ.
ವಿವಾದದ ನಂತರ ಬರೇಲಿಯ ಶಿಕ್ಷಣ ಅಧಿಕಾರಿ (ಬಿಎಸ್‌ಎ) ಸೋಮವಾರ ಸಂಜೆ ಶಿಕ್ಷಕಿಯನ್ನು ಅಮಾನತುಗೊಳಿಸಿದ್ದಾರೆ. “ತನ್ನ ಮಗು ಶನಿವಾರ (ಜುಲೈ 20) ಭುಜದ ಮೇಲೆ ಮತ್ತು ಬೆನ್ನಿನಲ್ಲಿ ಹಲವಾರು ಗಾಯಗಳೊಂದಿಗೆ ಮನೆಗೆ ಮರಳಿದ” ಬಾಲಕನ ತಂದೆ ಪೋತಿರಾಮ್ ಪೊಲೀಸರಿಗೆ ತಿಳಿಸಿದ್ದಾರೆ.
“ನನ್ನ ಮಗ ಅಳುತ್ತಿದ್ದನು, ಏಕೆ ಎಂದು ಕೇಳಿದಾಗ, ಜಾಮೂನ್ ಮರ (ನೇರಳೆ) ಹತ್ತಿ ಹಣ್ಣುಗಳನ್ನು ಕೀಳುವಂತೆ ಆತನ ಶಿಕ್ಷಕಿ ರಾಣಿ ಗಂಗ್ವಾರ್ ಮಗನಿಗೆ ಬಲವಂತಪಡಿಸಿದ್ದಾರೆ. ಅವನು ನಿರಾಕರಿಸಿದಾಗ, ಆಕೆ ತರಗತಿಯೊಳಗೆ ಬಂಧಿಸಿ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಥಳಿಸಿದರು” ಎಂದು ಪೋಷಕರು ಹೇಳಿದರು.
A #Dalit student of class IV was "punished" by his primary school teacher for refusing to pluck fruits for her at #Kuladia in #UttarPradesh's #Bareilly.
Parents alleged that their nine-year-old son was locked in a "classroom and mercilessly beaten by his teacher". Bareilly's… pic.twitter.com/AP5Z0LY0Dv
— Hate Detector 🔍 (@HateDetectors) July 23, 2024
“ನಾವು ಈ ಬಗ್ಗೆ ಪ್ರಶ್ನಿಸಿದಾಗ, ಗ್ರಾಮದ ಕೆಲವು ‘ಪ್ರಭಾವಿ’ ವ್ಯಕ್ತಿಗಳಿಂದ ರಾಜಿ ಮಾಡಿಕೊಳ್ಳುವಂತೆ ನಮ್ಮನ್ನು ಒತ್ತಾಯಿಸಿದರು. ಅದಕ್ಕೆ ನನ್ನ ಪತಿ ಒಪ್ಪಿದರು. ಆದರೆ, ನಾನು ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದೆ. ವೈದ್ಯರು ನನ್ನ ಮಗನ ಮೇಲೆ ಗಾಯಗಳನ್ನು ದೃಢಪಡಿಸಿದ ನಂತರವೇ ಎಫ್ಐಆರ್ ದಾಖಲಿಸಲಾಗಿದೆ. ನನ್ನ ಮಗ ಇನ್ನೂ ಆಘಾತಕ್ಕೊಳಗಾಗಿದ್ದಾನೆ ಮತ್ತು ಶಾಲೆಗೆ ಹೋಗಲು ಹೆದರುತ್ತಾನೆ” ಎಂದು ಬಾಲಕನ ತಾಯಿ ಹೇಳಿದ್ದಾರೆ.
ಬಾಲಕನ ವೈದ್ಯಕೀಯ ಪರೀಕ್ಷೆಯ ನಂತರ ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. “ವೈದ್ಯಕೀಯ ಪರೀಕ್ಷೆಯು ಮಗುವಿನ ಮೇಲೆ ಗಾಯಗಳನ್ನು ದೃಢಪಡಿಸಿದೆ ಮತ್ತು ನಾವು ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸುತ್ತಿದ್ದೇವೆ. ನಾವು ಇತರ ಸಿಬ್ಬಂದಿಗಳೊಂದಿಗೆ ಮಾತನಾಡುತ್ತೇವೆ ಮತ್ತು ಕಾನೂನಿನ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಆರೋಪಿತ ಶಿಕ್ಷಕಿ ರಾಣಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ; ಶಂಭು ಗಡಿ ದಿಗ್ಬಂಧನ: ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆಯಿದೆ ಎಂದ ಸುಪ್ರೀಂ ಕೋರ್ಟ್



These type of atrocities on sc/St s are routine in Buldozer Baba,s Government.
Reported cases not even percent.99%
Cases closed without anybody’s notice.officers themselves currupt and they are yeilding to local influenced gundas. Government will never take any serious action against culprits.