Homeಕರ್ನಾಟಕಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು

ಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು

- Advertisement -
- Advertisement -

ಹರಿಗೆ ಎಂದು ಗುಡಿಯನೊಂದು
ಕಟ್ಟುತ್ತಿರುವೆಯಾ?
ದೀನಗಿಂತ ದೇವ ಬಡವನೆಂದು ಬಗೆದೆಯಾ?

ಎಂದು ಹಾಡಿದ ಅಂಕೋಲೆಯ “ಚುಟುಕು ಬ್ರಹ್ಮ” ದಿನಕರ ದೇಸಾಯಿಯವರ ಮಾತೃಭಾಷೆ ಕೊಂಕಣಿ! ರೈತ-ಕಾರ್ಮಿಕ ಹೋರಾಟ ಕಟ್ಟಿದ ದೇಸಾಯಿ ಕನ್ನಡ ಕಟ್ಟುವ ಕೈಂಕರ್ಯದಲ್ಲೂ ಹಿಂದಿರಲಿಲ್ಲ. ವಿಭಿನ್ನ ಜನ-ಜಾತಿ ಮತ್ತು ವಿವಿಧ ಭಾಷೆಯ ಉತ್ತರ ಕನ್ನಡದ ಮಣ್ಣಿನ ಸೊಗಡು-ಕಸುವುಗಳೇ ಅಂಥದ್ದು. ವಿಭಿನ್ನ ಭಾಷೆ-ಸಂಸ್ಕೃತಿಗಳಿದ್ದರೂ ಕನ್ನಡ ನಾಡು, ನುಡಿಯ ಜೊತೆಗೆ ಬಾಂಧವ್ಯ ಉಳಿಸಿಕೊಂಡೇ ಬಂದಿದೆ ಉತ್ತರ ಕನ್ನಡ.

ಮಲೆನಾಡು, ಕರಾವಳಿ, ಅರೆಬಯಲುಸೀಮೆಯಂಥ ವಿಶಿಷ್ಟ ಭೌಗೋಳಿಕ ಪರಿಸರದ ಈ ಜಿಲ್ಲೆಯ ಹಲವು ಕೊಂಕಣಿ ಮತ್ತು ಮರಾಠಿಗರು ಕನ್ನಡ ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ, ರಾಜಕೀಯ, ಸಾಮಾಜಿಕ, ಮಾಹಿತಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಿಗೆ ಎಂದೆಂದೂ ಅಳಿಸಲಾಗದ ದೊಡ್ಡ ಕೊಡುಗೆಗಳನ್ನೇ ಕೊಟ್ಟಿದ್ದಾರೆ. ಜಿಲ್ಲೆಗೊಂದು ನಿಜ ನಾಯಕತ್ವ ನೀಡಿದ್ದ ದಿನಕರ ದೇಸಾಯಿ ಲೋಕಸಭಾ ಸದಸ್ಯರೂ ಆಗಿದ್ದರು. ತ್ರಿಭಾಷಾ ಸಾಹಿತಿಯಾಗಿದ್ದ ಈ ಗೇಣಿದಾರರ-ಕೂಲಿಕಾರರ ಗೆಣೆಗಾರ ಲಲಿತ ಸಾಹಿತ್ಯ ಮತ್ತು ವೈಚಾರಿಕ ಬರಹಗಳಿಂದ ಪ್ರಸಿದ್ಧಿ ಪಡೆದಿದ್ದರು. ಜನರಲ್ಲಿ ತಿಳಿವು ಅರಿವು ಮೂಡಿಸಲೆಂದು “ಜನಸೇವಕ” ಎಂಬ ಪತ್ರಿಕೆ ಹೊರತರುತ್ತಿದ್ದ ದೇಸಾಯಿ ಹತ್ತಾರು ಹೈಸ್ಕೂಲು, ಕಾಲೇಜು ತೆರೆದು ಹಳ್ಳಿಗಾಡಿನಲ್ಲಿ ವಿದ್ಯಾಪ್ರಸಾರದ ಅಭೂತಪೂರ್ವ ಸಾಹಸ-ಸಾಧನೆ ಮಾಡಿದ್ದರು.

ಕನ್ನಡ, ಮರಾಠಿ, ಕೊಂಕಣಿ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸಿರುವ ಗೋಕರ್ಣದ ಡಾ. ಗೌರೀಶ್ ಕಾಯ್ಕಿಣಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಮೂರ್ತಿಭಂಜಕ ಪ್ರವೃತ್ತಿಯ ಕೊಂಕಣಿ ಮನೆಮಾತಾಗಿರುವ ಕಾಯ್ಕಿಣಿ ಅವರು ಮುಂದಿನ ತತ್ವಜ್ಞಾನವೆಂದರೆ ವಿಜ್ಞಾನ ಎನ್ನುತ್ತಿದ್ದರು. ಹರಿತ ವೈಚಾರಿಕ ಸಾಹಿತ್ಯದಿಂದ ಖ್ಯಾತಿ ಪಡೆದಿದ್ದ ಕಾಯ್ಕಿಣಿ ಪತ್ರಿಕೋದ್ಯಮಿಯೂ ಆಗಿದ್ದರು. ಮೆದು ಮಾತು-ಮೆಲುದನಿಯ ಕಥೆಗಾರ ಜಯಂತ್ ಕಾಯ್ಕಿಣಿ ಗೌರೀಶ್ ಕಾಯ್ಕಿಣಿಯವರ ಪುತ್ರ. ಕನ್ನಡಿಗರ ಅಚ್ಚುಮೆಚ್ಚಿನ ಸಾಹಿತಿ ಜಯಂತ್ 2006ರ ಬಳಿಕ ಸಿನಿಮಾ ಸಾಹಿತ್ಯದ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಆಯಾಮವನ್ನು ತೆರೆದಿಟ್ಟಿದ್ದಾರೆ.

ಕಾಯ್ಕಿಣಿಗಳಂತೆ ಗೋಕರ್ಣ ಹತ್ತಿರದ ಹನೇಹಳ್ಳಿಯ ಖ್ಯಾತ ಕಥೆಗಾರ, ಕಾದಂಬರಿಕಾರ ಯಶವಂತ ಚಿತ್ತಾಲರೂ ಕೊಂಕಣಿ ಆಡುಮಾತಿನವರು. ‘ಶಿಕಾರಿ’ ಕಾದಂಬರಿಯಿಂದ ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲರು ಕವಿಯಾಗಿ ಗುರುತಿಸಿಕೊಂಡವರು. ಗೋಕರ್ಣಕ್ಕೆ ಹತ್ತಿರವೇ ಇರುವ ಬಂಕಿಕೊಡ್ಲದ ಅರವಿಂದ ನಾಡಕರ್ಣಿ ಮತ್ತು ಸುಂದರ ನಾಡಕರ್ಣಿ ಸೋದರರು ಹಲವು ಕನ್ನಡಕವನ ಸಂಕಲನ ಪ್ರಕಟಿಸಿದ್ದಾರೆ. ಇವರೂ ಕೊಂಕಣಿ ಭಾಷೆಯ ಸಾರಸ್ವತ ಕುಟುಂಬದ ರೇ.ದಾಮೋದರ ಚಿತ್ತಾಲರೂ ಕನ್ನಡ ಸಾಹಿತ್ಯ ಕ್ಷೇತ್ರದ ಗಮನ ಸೆಳೆದ ಬರಹಗಾರರು.

ಕನ್ನಡ ಕಾದಂಬರಿ ಲೋಕಕ್ಕೆ ನವ್ಯಮಾರ್ಗ ತಂದ ಶಾಂತಿನಾಥ ದೇಸಾಯಿ ಹಳಿಯಾಳದವರು. ಸಣ್ಣಕತೆ, ಪ್ರಬಂಧ, ವಿಮರ್ಶೆ…ಮುಂತಾದ ಪ್ರಕಾರಗಳಲ್ಲಿ ಪ್ರಯೋಗಶೀಲತೆ ಅಳವಡಿಸಿ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖ ಬರಹಗಾರನೆಂದು ಖ್ಯಾತರಾಗಿದ್ದ ದೇಸಾಯಿ ಕೊಂಕಣಿಗರು. ಕೊಂಕಣಿ ಮಾತಾಡುವ ಕುಟುಂಬದ ಉತ್ತರಕನ್ನಡಿಗ ವಿವೇಕ್ ಶಾನ್‍ಭಾಗ್ ಕನ್ನಡದ ಪ್ರಮುಖ ಕತೆಗಾರ, ಕಾದಂಬರಿಕಾರ ಮತ್ತು ನಾಟಕಕಾರರಲ್ಲಿ ಒಬ್ಬರು.

1950-60ರ ದಶಕದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಮನೋಜ್ಞ ಅಭಿನಯದಿಂದ ಪ್ರಖ್ಯಾತರಾಗಿದ್ದ ಅಭಿನೇತ್ರಿಯರಾದ ಮೈನಾವತಿ ಮತ್ತು ಪಂಡರಿಬಾಯಿ ಮೂಲ ಭಟ್ಕಳ. ಕೊಂಕಣಿ ಮನೆಮಾತಿನ ಈ ಸಹೋದರಿಯರ ತಂದೆ ರಂಗರಾವ್ ಹರಿಕಥೆ, ಸಂಗೀತ, ಸಾಹಿತ್ಯ, ಅಭಿನಯದಲ್ಲಿ ಪರಿಣಿತರಾಗಿದ್ದರು. ಮೈನಾವತಿ ಸರಿಸುಮಾರು ನೂರು ಚಿತ್ರಗಳಲ್ಲಿ ನಟಿಸಿದ್ದರೆ, ಪಂಡರಿಬಾಯಿ ಕನ್ನಡ ಸಿನಿಮಾಗಳ ಮೊದಲ ಯಶಸ್ವೀ ತಾರೆ. ಡಾ. ರಾಜ್‍ಕುಮಾರ್ ಅವರಿಗೆ ನಾಯಕಿಯಾಗಿ ಮಿಂಚಿದ ಪಂಡರಿಬಾಯಿ ಆನಂತರ ಕನ್ನಡ ಚಿತ್ರರಂಗದ “ಅಮ್ಮ”ನೆಂದೇ ಹೆಸರಾಗಿದ್ದರು.

ಕುಮಟಾದ ಮಲ್ಲಾಪುರ ಗ್ರಾಮದ ಸಾರಸ್ವತ ಕೊಂಕಣಿ ಕುಟುಂಬದ ಅನಂತ್‍ನಾಗ್ ಮತ್ತು ಶಂಕರ್‌ನಾಗ್ ಇವತ್ತಿಗೂ ಕನ್ನಡ ಸಿನಿಮಾ ಲೋಕದಲ್ಲಿ ಮಾಂತ್ರಿಕ ಹೆಸರು. ಅನನ್ಯ ಪ್ರತಿಭೆಯ ಈ ಸಹೋದರರ ನಟನಾಕೌಶಲ್ಯ ಕನ್ನಡ ಸಿನಿಮಾರಂಗದಲ್ಲಿ ಸರ್ವಕಾಲಿಕ ದಾಖಲೆ! ಸಿನಿಮಾ ನಟಿ ರಾಧಿಕಾಪಂಡಿತ್ ಭಟ್ಕಳದ ಚಿತ್ರಾಪುರ ಮೂಲದ ಸಾರಸ್ವತ ಕೊಂಕಣಿ. ಉತ್ತರ ಕನ್ನಡದ ಯು.ಎಸ್. ಕೃಷ್ಣರಾವ್ ಮತ್ತವರ ಮಡದಿ ಚಂದ್ರಭಾಗಾದೇವಿ ಶಾಸ್ತ್ರೀಯ ನೃತ್ಯದ ಮೂಲಕ ಹೆಸರು ಮಾಡಿದ್ದಾರೆ. ಕೊಳಲುವಾದಕ ನಿತ್ಯಾನಂದ ಹಳದಿಪುರ್, ಸಂಗೀತಗಾರ ಮೋಹನ್‍ಚಿತ್ರಮನೆ, ತಬಲಾ ವಾದಕ ಆದಿತ್ಯ ಕಲ್ಯಾಣ್‍ಪುರ್, ಸಂಗೀತಗಾರ ಭರತ್ ಬಳವಳ್ಳಿ, ನಟ ವೆಂಕಟರಾವ್ ತಲಗೇರಿ, ಅನುಪಮಾ (ಕಾಯ್ಕಿಣಿ), ದೇಶಪಾಂಡೆ(ಸಂಗೀತ), ಆರ್.ಡಿ ಕಾಮತ್ (ರಂಗಭೂಮಿ) ಲೀನಾ ಚಂದಾವರ್ಕರ್ (ಪ್ರಸಿದ್ಧ ಗಾಯಕಿ), ಅನುರಾಧಾ ಪೋಡ್ವಾಲ್, ಅನುರಾಧಾ ಧಾರೇಶ್ವರ್ (ಹಾಡುಗಾರ್ತಿ) ಕೊಂಕಣಿಗರಾದರೂ ಕನ್ನಡ ಪ್ರತಿಭೆಗಳೆಂದೇ ಗುರುತಿಸಲ್ಪಡುವವರು!

ಸುಮಾರು ಮೂರೂಮುಕ್ಕಾಲು ದಶಕದಿಂದ ಕರ್ನಾಟಕದ ರಾಜಕಾರಣದಲ್ಲಿ ಪ್ರಮುಖ ರಾಜಕಾರಣಿಯಾಗಿರುವ ಹಳಿಯಾಳದ ರಘುನಾಥ್ ವಿಶ್ವನಾಥ್‍ರಾವ್ ದೇಶಪಾಂಡೆ ಕೊಂಕಣಿ ಮನೆ ಮಾತಿನವರು. ಅಧಿಕಾರ ರಾಜಕಾರಣದ ಹಲವು ಆಯಕಟ್ಟಿನ ಸ್ಥಾನದಲ್ಲಿದ್ದ ದೇಶಪಾಂಡೆ ಒಂದು ಸಂದರ್ಭದಲ್ಲಿ ಸಿಎಂ ಮಟೇರಿಯಲ್ ಅನಿಸಿಕೊಂಡವರು! ಸಮಾಜವಾದಿ ದಿನಕರ ದೇಸಾಯಿ ಒಡನಾಡಿ ಅಂಕೋಲೆಯ ದಯಾನಂದ ನಾಡಕರ್ಣಿ ಶಾಸಕರೂ ಆಗಿದ್ದರು. ಕುಮಟೆಯಲ್ಲಿ ವಸಂತಲತಾ ಮಿರ್ಜಾನ್‍ಕರ್ ಶಾಸಕಿಯಾಗಿದ್ದರು. ಇವರಿಬ್ಬರೂ ಸಾರಸ್ವತ ಕೊಂಕಣಿಗರು. ದಟ್ಟ ಕೊಂಕಣಿ ಪ್ರಭಾವದ ಕಾರವಾರದ ಬಿ.ಪಿ. ಕದಮ್ ವಿಧಾನಸಭೆಯ ಉಪಾಧ್ಯಕ್ಷರಾಗಿ, ಸಂಸದರಾಗಿದ್ದ ಕೊಂಕಣಿ ಭಾಷಿಕ. ವಿಧಾನಪರಿಷತ್‍ನ ಸಭಾಪತಿಯಾಗಿದ್ದ ಇದೇ ಕಾರವಾರದ ಎಸ್.ಡಿ. ಗಾಂವ್ಕರ್ ಕೂಡ ಕೊಂಕಣಿ ಮನೆ ಮಾತಿನವರಾಗಿದ್ದರು. ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಲ್ಲೊಬ್ಬರಾಗಿರುವ ನಂದನ್ ನೀಲೇಕಣಿ ಶಿರಸಿ ಮೂಲದ ಸಾರಸ್ವತ ಕೊಂಕಣಿಗರು. ಕಾರಾವಾರದ ಶಾಸಕಿ ರೂಪಾಲಿ ನಾಯ್ಕ್ ಮನೆಮಾತು ಕೊಂಕಣಿ.

ಕನ್ನಡದ ಗಂಧಗಾಳಿಯೇ ಇಲ್ಲದ ಹಲವು ಪ್ರದೇಶವಿರುವ ಉತ್ತರಕನ್ನಡದ ಎರಡನೇ ಪ್ರಮುಖ ವ್ಯಾವಹಾರಿಕ ಭಾಷೆ ಕೊಂಕಣಿ. ಕನ್ನಡಾಂಬೆಯ ತೇರು ಎಳೆಯುವಾಗ ಎಲ್ಲರೂ ಒಂದೇ. ಇದೇ ಉತ್ತರ ಕನ್ನಡದ ಭಾಷಾ ಸಹಿಷ್ಣುತೆ, ಸಾಮರಸ್ಯದ ವೈಶಿಷ್ಟ್ಯ!


ಇದನ್ನೂ ಓದಿ: ತಾತ್ಸಾರ ತೊರೆದು ಸ್ವಾಯತ್ತತೆಗಾಗಿ – ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...