ಬಾಲಿವುಡ್ ನ ಹಿರಿಯ ನಟ, ಧರ್ಮೇಂದ್ರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಬಾಲಿವುಡ್ ನ ‘ಹೀಮ್ಯಾನ್’ ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ್ದರು.
ಇದೇ ತಿಂಗಳ ಮೊದಲವಾರದಲ್ಲಿ ತೀವ್ರ ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಧರ್ಮೇಂದ್ರ ಅವರನ್ನು ದಾಖಲಿಸಲಾಗಿತ್ತು, ನಂತರ ಡಿಸ್ಚಾರ್ಜ್ ಆಗಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಕುಟುಂಬದ ಮೂಲಗಳು ತಿಳಿಸಿವೆ.
ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಮತ್ತು ಮಗಳು ಇಶಾ ಡಿಯೋಲ್ ಸೇರಿದಂತೆ ಅವರ ಕುಟುಂಬ ಸೋಮವಾರ ಮುಂಬೈನ ವಿಲೇ ಪಾರ್ಲೆಯಲ್ಲಿರುವ ಸ್ಮಶಾನಕ್ಕೆ ತೆರಳುತ್ತಿರುವುದು ಕಂಡುಬಂದಿದೆ. ಬಾಲಿವುಡ್ ಹಿರಿಯ ನಟರಾದ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಸ್ಮಶಾನಕ್ಕೆ ಆಗಮಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಕರಣ್ ಜೋಹರ್ ಒಂದು ಯುಗದ ಅಂತ್ಯ ಎಂದು ಬರೆದುಕೊಂಡಿದ್ದಾರೆ.

ಧರ್ಮೇಂದ್ರ ಅವರು ಶೋಲೆ (1975) ಮತ್ತು ಚುಪ್ಕೆ ಚುಪ್ಕೆ (1975) ಸೇರಿದಂತೆ ಅನೇಕ ಸೂಪರ್-ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಫೂಲ್ ಔರ್ ಪತ್ತರ್ (1966), ಸೀತಾ ಔರ್ ಗೀತಾ (1972), ಧರಮ್ ವೀರ್ (1977), ಮತ್ತು ಮೇರಾ ಗಾಂವ್ ಮೇರಾ ದೇಶ್ (1971). ಅವರು ಪ್ರತಿಗ್ಯಾ (1975), ಆಂಖೇನ್ (1968), ಮತ್ತು ಬಾಂದಿನಿ (1963) ನಂತಹ ಸಿನಿಮಾಗಳಿಂದಲೂ ಅವರು ಹೆಸರುವಾಸಿಯಾಗಿದ್ದರು.



Very sad news. Dharmendra rulled Bollywood for several years. A great loss to Bollywood and cinegoyers.