ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಬಣ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ರಾಜ್ಯಸಭೆಯ ಉಪ ಸ್ಪೀಕರ್ ಹರಿವಂಶ್ ಅವರು ಗುರುವಾರ ತಿರಸ್ಕರಿಸಿದ್ದು, ಇದು “ತೀವ್ರ ದೋಷಪೂರಿತ” ಮತ್ತು “ಅಯೋಗ್ಯ ಕೃತ್ಯ” ಎಂದು ಕರೆದಿದ್ದಾರೆ. ವಿಪಕ್ಷಗಳ ನೋಟಿಸ್ ಉಪರಾಷ್ಟ್ರಪತಿಯ ವಿರುದ್ಧ ದೋಷಾರೋಪಣೆಯ ಸಮರ್ಥನೆಗಳಿಂದ ಮಾತ್ರ ತುಂಬಿತ್ತು ಎಂದು ಅವರು ಹೇಳಿದ್ದಾರೆ. ಉಪರಾಷ್ಟ್ರಪತಿ ಧನಕರ್
ಡಿಸೆಂಬರ್ 10 ರಂದು, ವಿರೋಧ ಪಕ್ಷದ ಸಂಸದರು ಧಂಖರ್ ಅವರನ್ನು ಪದಚ್ಯುತಗೊಳಿಸುವಂತೆ ನೋಟಿಸ್ ಸಲ್ಲಿಸಿದ್ದರು. ರಾಜ್ಯಸಭೆಯ ಸ್ಪೀಕರ್ ಆಗಿರುವ ಧನಕರ್ ಅವರು ಸಂಸತ್ತಿನ ಮೇಲ್ಮನೆಯ ಕಲಾಪಗಳನ್ನು “ಅತ್ಯಂತ ಪಕ್ಷಪಾತದ ರೀತಿಯಲ್ಲಿ” ನಡೆಸುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂವಿಧಾನದ ಪರಿಚ್ಛೇದ 67(ಬಿ) ಅಡಿಯಲ್ಲಿ ನೋಟಿಸ್ ಸಲ್ಲಿಸಲಾಗಿದ್ದು, ಈ ಪರಿಚ್ಛೇದವು ಕೌನ್ಸಿಲ್ ಆಫ್ ಸ್ಟೇಟ್ಸ್ ಅಥವಾ ರಾಜ್ಯಸಭೆಯಿಂದ ನಿರ್ಣಯವನ್ನು ಅಂಗೀಕರಿಸಿದರೆ ಮತ್ತು ಜನರ ಸದನ ಅಂದರೆ ಲೋಕಸಭೆ ಇದಕ್ಕೆ ಒಪ್ಪಿಗೆ ನೀಡಿದರೆ ಉಪ ರಾಷ್ಟ್ರಪತಿಯನ್ನು ಅವರ ಸ್ಥಾನದಿಂದ ವಜಾಗೊಳಿಸಬಹುದಾಗಿದೆ ಎಂದು ಹೇಳುತ್ತದೆ. ಉಪರಾಷ್ಟ್ರಪತಿ ಧನಕರ್
ಆದರೆ ಇದನ್ನು 14 ದಿನಗಳ ಮುಂಚೆ ನೋಟಿಸ್ ನೀಡಿ ನಿರ್ಣಯ ಮಂಡಿಸಬೇಕಾಗುತ್ತದೆ ಎಂದು ಹೇಳುತ್ತದೆ. ಈ ನಿಯಮವನ್ನು ಉಲ್ಲೇಖಿಸಿದ ಹರಿವಂಶ್ ಅವರು, ಡಿಸೆಂಬರ್ 10, 2024ರಂದು ನೀಡಿರುವ ನೋಟಿಸ್ ಡಿಸೆಂಬರ್ 24, 2024 ರ ನಂತರ ನಿರ್ಣಯ ಮಂಡಿಸಲು ಅನುಮತಿಸಲಾಗುತ್ತದೆ ಎಂದು ಹೇಳಿದ್ದಾರೆ. ಅದಾಗ್ಯೂ, ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 20 ರಂದು ಕೊನೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ನಡೆಯುತ್ತಿರುವ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯವನ್ನು ಸದನದ ಮುಂದೆ ತರಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ, “ದೇಶದ 2 ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಮತ್ತು ಉಪರಾಷ್ಟ್ರಪತಿ ವಿರುದ್ಧ ದೋಷಾರೋಪಣೆಗಾಗಿ ಮಾತ್ರ” ಪ್ರತಿಪಕ್ಷಗಳು ನಿರ್ಣಯವನ್ನು ಮಂಡಿಸಿವೆ ಎಂದು ಉಪ ಸ್ಪೀಕರ್ ಹೇಳಿದ್ದಾರೆ.


