Homeಚಳವಳಿಮಹಿಳೆಯರ ದಿಟ್ಟ ಹೋರಾಟಕ್ಕೆ ಜಯ: ಮದ್ಯದಂಗಡಿ ಸ್ಥಳಾಂತರಕ್ಕೆ ಆದೇಶ

ಮಹಿಳೆಯರ ದಿಟ್ಟ ಹೋರಾಟಕ್ಕೆ ಜಯ: ಮದ್ಯದಂಗಡಿ ಸ್ಥಳಾಂತರಕ್ಕೆ ಆದೇಶ

ಬಹುತೇಕ ಸುಡಗಾಡು ಸಿದ್ದ ದಲಿತ ಸಮುದಾಯದಿಂದ ಕೂಡಿದ ಅಂಚೆ ಸೋಮನಹಳ್ಳಿಯಲ್ಲಿ ಮದ್ಯದಂಗಡಿ ಸ್ಥಾಪನೆ ವಿರುದ್ಧ ತೀವ್ರ ಹೋರಾಟ ನಡೆದಿತ್ತು.

- Advertisement -
- Advertisement -

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ಅಂಚೆ ಸೋಮನಹಳ್ಳಿ ಗ್ರಾಮದಲ್ಲಿ ಸ್ಥಾಪನೆಯಾಗಿದ್ದ ಮದ್ಯದಂಗಡಿ ತೆರವಿಗೆ ಮಹಿಳೆಯರು ನಡೆಸಿದ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಅರವತ್ತು ದಿವಸದ ಒಳಗೆ ಮದ್ಯದ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಅಬಕಾರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಬಹುತೇಕ ಸುಡಗಾಡು ಸಿದ್ದ ದಲಿತ ಸಮುದಾಯದಿಂದ ಕೂಡಿದ ಅಂಚೆ ಸೋಮನಹಳ್ಳಿ ಒಂದು ಚಿಕ್ಕ ಗ್ರಾಮ. ಗ್ರಾಮಸ್ಥರ ವಿರೋಧದ ನಡುವೆಯೇ ಏಕಾಏಕಿ ಊರಿನಲ್ಲಿ ಮದ್ಯದಂಗಡಿ ತೆರೆಯಲು ಕೆಲವರು ಮುಂದಾಗಿದ್ದಾರೆ. ಇದು ಮಹಿಳೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಕೂಲಿ ಕಾರ್ಮಿಕರಾಗಿರುವ ಇಲ್ಲಿನ ಜನರು ಜೀವನೋಪಾಯಕ್ಕೆ ಕೂಲಿಯಿಂದ ಬರುವ ಅಲ್ಪ ಆದಾಯವನ್ನೇ ನಂಬಿದ್ದಾರೆ. ಮದ್ಯದಂಗಡಿಯಿಂದ ಬಡ ಜನರ ಜೀವನ ಬೀದಿಗೆ ಬೀಳಲಿದೆ ಎಂಬ ಆತಂಕದಿಂದ ಮಹಿಳೆಯರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು.

ಮದ್ಯದಂಗಡಿ ತೆರವಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಸವಿತಾ ಪ್ರಸನ್ನ, ಸ್ಥಳೀಯ ಹೋರಾಟಗಾರ ಮಂಜುನಾಥ್‌ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಅಂಚೆ ಸೋಮನಹಳ್ಳಿಯ ಬಹುತೇಕ ಜನರು ಅವಿದ್ಯಾವಂತ ಕೂಲಿ ಕಾರ್ಮಿಕರು. ಜನರ ಕಾನೂನಿನ ಅಜ್ಞಾನವನ್ನು ಅಸ್ತ್ರ ಮಾಡಿಕೊಂಡು ಕೆಲವರು ತಮ್ಮ ಲಾಭಕ್ಕಾಗಿ ಊರಿನ ಆರೋಗ್ಯವನ್ನು ಬಲಿಕೊಡಲು ಹೊರಟಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ದೂರು ದಾಖಲಿಸಿದ್ದರು.

ದೂರು ಆಲಿಸಿದ ಅಬಕಾರಿ ಜಿಲ್ಲಾ ನ್ಯಾಯಾಲಯ “ಅಂಚೆ ಸೋಮನಹಳ್ಳಿ ಗ್ರಾಮದ ಬಾಪೂಜಿ ಕಾಲೋನಿ ರಸ್ತೆಯಲ್ಲಿರುವ ಸರ್ವೇ ನಂ.38/12, ಸಂಖ್ಯೆ 323ರಲ್ಲಿ ಹೊಂದಿರುವ ಸಿಎಲ್‌-2 ಸನ್ನದನ್ನು ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಸನ್ನದುಗಳು (ಸಾಮಾನ್ಯ ಷರತ್ತುಗಳು) ನಿಯಮಾವಳಿ 1967ರ ನಿಯಮ 5(4)(ಎ)ರ ರೀತ್ಯಾ ಹಾಲಿ ಇರುವ ಸ್ಥಳದಿಂದ ಬೇರೊಂದು ಆಕ್ಷೇಪಣಾ ರಹಿತ ಸ್ಥಳಕ್ಕೆ 60 ದಿನಗಳೊಳಗಾಗಿ ಸ್ಥಳಾಂತರಿಸಿಕೊಳ್ಳಲು” ಆದೇಶಿಸಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಹೋರಾಟಗಾರರಾದ ಮಂಜುನಾಥ್‌ರವರು “ಕಾನೂನು ಸಂವಿಧಾನ ನಮ್ಮ ಕಡೆಯಿವೆ ಎಂಬುದನ್ನು ಈ ತೀರ್ಪು ನಮಗೆ ತೋರಿಸಿಕೊಟ್ಟಿದೆ. ನಾವು ಕಾನೂನು ರೀತಿ ಹೋರಾಡಿ ಜಯ ಗಳಿಸಬಹುದು ಎಂಬುದಕ್ಕೆ ಇದು ಉದಾಹರಣೆ. ಅಂಬೇಡ್ಕರ್‌ರವರ ಸಂವಿಧಾನದಿಂದ ನಾವು ಗೆದ್ದಿದ್ದೇವೆ” ಎಂದಿದ್ದಾರೆ.

ಈ ಹಿಂದೆ ನಾನುಗೌರಿ.ಕಾಂ ಈ ಹೋರಾಟದ ಕುರಿತು ವಿಸ್ತೃತವಾಗಿ ವರದಿ ಮಾಡಿತ್ತು. ಅದನ್ನು ಇಲ್ಲಿ ಓದಬಹುದು.

ಅಬಕಾರಿ ಇಲಾಖೆಯಿಂದ ಜನಾರೋಗ್ಯ ಕಡೆಗಣನೆ: ಮದ್ಯದಂಗಡಿ ತೆರವಿಗೆ ನೂರಾರು ಮಹಿಳೆಯರ ನಿರಂತರ ಧರಣಿ


ಇದನ್ನೂ ಓದಿ: ಸಮಾಜದ ಆರೋಗ್ಯ ಮುಖ್ಯ, ಆದಾಯ ಅಲ್ಲ: ಅಕ್ರಮ ಮದ್ಯ ನಿಷೇದಕ್ಕೆ ಆಗ್ರಹಿಸಿ ಟ್ವಿಟರ್‌ ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...