Homeದಿಟನಾಗರಫ್ಯಾಕ್ಟ್‌ಚೆಕ್‌: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್‌!

ಫ್ಯಾಕ್ಟ್‌ಚೆಕ್‌: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್‌!

- Advertisement -
- Advertisement -

ಅಫ್ಘಾನ್‌ 20 ವರ್ಷಗಳ ನಂತರ ಮತ್ತೆ ತಾಲಿಬಾನಿಗಳ ವಶವಾಗಿದೆ. ಈ ಬೆಳವಣಿಗೆಯಾಗುತ್ತಿದ್ದಂತೆ ಅಫ್ಘಾನಿಸ್ತಾನದ ಮಹಿಳೆ ಮತ್ತು ಮಕ್ಕಳ ಬಗ್ಗೆ ಮರುಗಿ ಇಡೀ ವಿಶ್ವವೆ ಅವರ ಸ್ವಾತಂತ್ಯ್ರದ ಬಗ್ಗೆ ಆತಂಕ  ವ್ಯಕ್ತಪಡಿಸಿದ್ದವು. ಇಪ್ಪತ್ತು ವರ್ಷಗಳ ಹಿಂದೆ ತಾಲಿಬಾನ್ ನಡೆಸಿದ್ದ ಅಮಾನವೀಯ ಕೃತ್ಯಗಳ ಬಗ್ಗೆ ಹಲವಾರು ಚಿತ್ರಗಳು, ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿನ್ನಲೆಯಲ್ಲಿ, ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಸಂಕೋಲೆಗಳಿಂದ ಕಟ್ಟಿ ಹಾಕಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರದ ಜೊತೆಗೆ ‘ತಾಲಿಬಾನ್ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ತಳ್ಳಿ ಮಾರಾಟ ಮಾಡುತ್ತಿದೆ’ ಎಂಬ ಸಂದೇಶ ಕೂಡಾ ಹರಿದಾಡುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ

ಹಲವಾರು ಫೇಸ್‌ಬುಕ್ ಬಳಕೆದಾರರು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರನ್ನು ಹರಾಜು ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಬಲಪಂಥೀಯ ಬೆಂಬಲಿಗರಾದ ಶೆಫಾಲಿ ವೈದ್ಯ ಅವರು ಕೂಡಾ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇವರು ಈ ಹಿಂದೆ ಕೂಡಾ ಹಲವಾರು ಬಾರಿ ತಪ್ಪು ಮಾಹಿತಿಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಉದಾಹರಣೆಗಳಿಗೆ. ಅವರ ಟ್ವೀಟ್‌ನ ಆರ್ಕೈವ್‌ ಅನ್ನು ಇಲ್ಲಿ ನೋಡಬಹುದು. ಇನ್ನೂ ಹಲವಾರು ಜನರು ಇದನ್ನು ಹಂಚಿಕೊಂಡಿದ್ದು ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌‌ಚೆಕ್‌

ಈ ಚಿತ್ರವು 2014 ರ ಸಮಯದ್ದಾಗಿದ್ದು, ‘ಕಂಪೇಷನ್‌ 4 ಕುರ್ದಿಸ್ತಾನ್’ ಎಂಬ ಗುಂಪು ಲಂಡನ್‌ನಲ್ಲಿ ‘ಇಸ್ಲಾಮಿಕ್ ಸ್ಟೇಟ್ ಸೆಕ್ಸ್ ಸ್ಲೇವ್ ಮಾರ್ಕೆಟ್’ ಎಂಬ ಬೀದಿ ನಾಟಕವನ್ನು ಐಸಿಸ್‌‌ ಭಯೋತ್ಪಾದಕರ ವಿರುದ್ದ ಜಾಗೃತಿಗಾಗಿ ಪ್ರದರ್ಶಿಸಿತು. ಆಗ ಈ ಚಿತ್ರವನ್ನು ಕ್ಲಿಕ್ಕಿಸಲಾಗಿತ್ತು ಎಂದು ದಿ ಕ್ವಿಂಟ್‌ ಫ್ಯಾಕ್ಟ್‌ಚೆಕ್ ಮಾಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಸಿಗುವುದು ನಿಜವಲ್ಲ

ಯಾಂಡೆಕ್ಸ್ ಎಂಬ ಸರ್ಚ್ ಇಂಜಿನ್ ಬಳಸಿ, ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಈ ಚಿತ್ರವು ಟೆಲಿಗ್ರಾಫ್ ಎಂಬ ವೆಬ್‌ಸೈಟ್‌ನಲ್ಲಿ ಬಳಸಿರುವುದನ್ನು ದಿ ಕ್ವಿಂಟ್‌‌‌ ಪತ್ತೆ ಹಚ್ಚಿದೆ. ಟರ್ಕಿಶ್‌ ಬಾಷೆಯಲ್ಲಿ ‘ಲಂಡನ್‌ನಲ್ಲಿ ಐಸಿಸ್ ಗ್ಯಾಂಗ್‌ಗಳ ವಿರುದ್ಧ ಅರ್ಥಪೂರ್ಣ ಕ್ರಮ’ ಎಂಬ ಶಿರ್ಷಿಕೆಯ ಅಡಿಯಲ್ಲಿ ಈ ಚಿತ್ರವಿರುವ ಲೇಖನವನ್ನು ಬರೆಯಲಾಗಿದೆ.

ಟೆಲಿಗ್ರಾಫ್‌ ಈ ವರದಿಯನ್ನು 2014 ರ ಅಕ್ಟೋಬರ್ 17 ರಂದು ಪ್ರಕಟಿಸಿದ್ದು, ಫೋಟೊ ಕೃಪೆಯನ್ನು ‘ಅರಿ ಮುರಾದ್’ ಎಂಬವರಿಗೆ ನೀಡಿದೆ.

ಅರಿ ಮುರಾದ್’ ಅವರ ಅಧೀಕೃತ ಫೇಸ್‌ಬುಕ್ ಖಾತೆಯಲ್ಲೂ ಇದೇ ದೃಶ್ಯಗಳನ್ನು ತೋರಿಸುವ ವಿಡಿಯೊ 2016 ರ ಮಾರ್ಚ್ 1 ರಂದು ಪ್ರಕಟಿಸಲಾಗಿದೆ. ವೀಡಿಯೊದಲ್ಲಿ, “ಐಸಿಸ್ ಮತ್ತು ಅವರ ಕ್ರೌರ್ಯವನ್ನು ತೋರಿಸುವ ಬೆಚ್ಚಿಬೀಳಿಸುವ ಪ್ರದರ್ಶನ” ಎಂದು ಉಲ್ಲೇಖಿಸಲಾಗಿದೆ.

ಈ ಬೀದಿ ನಾಟಕವನ್ನು ಕುರ್ದಿಶ್ ವಲಸೆಗಾರರ ​​ಗುಂಪಾದ ‘ಕಂಪೇಷನ್‌ 4 ಕುರ್ದಿಸ್ತಾನ್’ ಎಂಬ ಗುಂಪು ಲಂಡನ್‌ನಲ್ಲಿ ನಡೆಸಿತ್ತು. ಇರಾಕ್‌ನಲ್ಲಿ ಐಸಿಸ್‌ನ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.

ಈ ಮೊದಲು ಕೂಡಾ ಈ ಬೀದಿ ನಾಟಕದ ದೃಶ್ಯವನ್ನು ಅಫ್ಘಾನಿಸ್ತಾನದ ಬೀದಿಯಲ್ಲಿ ಮಹಿಳೆಯರನ್ನು ಹರಾಜು ಹಾಕಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ವೈರಲ್‌ ಮಾಡಲಾಗಿತ್ತು.

ಆದಾಗ್ಯೂ, ಅಫ್ಘಾನಿಸ್ತಾನ ಮತ್ತೆ ತಾಲಿಬಾನ್ ವಶಕ್ಕೆ ಹೋಗಿರುವುದರಿಂದ ಮಹಿಳೆಯರು ತಮ್ಮ ಹಕ್ಕುಗಳು, ಸುರಕ್ಷತೆ, ಜೀವನ ಮತ್ತು ಭವಿಷ್ಯದ ಬಗ್ಗೆ ಭಯಪಡುತ್ತಿದ್ದಾರೆ ಎಂಬುವುದು ವರದಿಯಾಗಿದೆ. ಈ ಹಿಂದೆ ಕೂಡಾ ತಾಲಿಬಾನ್‌ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನಕಾರಿ ನೀತಿಗಳನ್ನು ಪ್ರತಿಪಾದಿಸುತ್ತಲೆ ಬಂದಿದೆ. ಹಾಗಾಗಿ ಇಡಿ ವಿಶ್ವ ಅದೇ ಭಯದಿಂದ ಅಫ್ಘಾನಿಸ್ತಾನವನ್ನು ನೋಡುತ್ತಿದೆ.

ಆದರೆ ಪ್ರಸ್ತುತ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಚಿತ್ರವು ಅಫ್ಘಾನಿಸ್ತಾದ ದೃಶ್ಯವಲ್ಲ.

ಕೃಪೆ: ದಿ ಕ್ವಿಂಟ್‌

ಇದನ್ನೂ ಓದಿ: Fact check: ಪೊಲೀಸ್ ವಿರುದ್ಧ ತಿರುಗಿಬಿದ್ದ ಪೂಜಾರಿ: ಹಿಗ್ಗಾಮುಗ್ಗಾ ಹೊಡೆದಿದ್ದು ನಿಜವಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...