ಜಾರ್ಖಂಡ್‌ನಲ್ಲಿ ಸೋಮವಾರ ಸುರಿದ ಭಾರೀ ಮಳೆಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ಕಾರು ಕೆಸರಿನ ಗುಂಡಿಯಲ್ಲಿ ಸಿಲುಕಿಕೊಂಡು ಪರದಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಚಿವ ಚೌಹಾಣ್ ಅವರು ಬಹರಗೋರಾದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗುಂಡಿಗೆ ಸಿಲುಕಿದ ಕಾರಣ ಸಚಿವರು ತಮ್ಮ ವಾಹನದಿಂದ ಹೊರಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರಿಗೆ ಸಹಾಯ ಮಾಡಲು ಧಾವಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಅದೃಷ್ಟವಶಾತ್ ಚೌಹಾಣ್ ಅವರು ಯಾವುದೇ ಅಪಾಯದಿಂದ ಪಾರಾಗಿದ್ದಾರೆ. ಅದಾಗ್ಯೂ ಅವರು ಮಳೆಯ ನಡುವೆಯೂ ಪಟ್ಟಣದಲ್ಲಿ ಪಕ್ಷದ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂಓದಿ: FACT CHECK : ಮುಸ್ಲಿಮರು ರೈಲು ಹಳಿ ತಪ್ಪಿಸುವ ಪ್ರಯತ್ನ ಮಾಡಿದ್ರಾ? ವೈರಲ್ ಫೋಟೋದ ನಿಜಾಂಶ ಏನು?
ಭಾರೀ ಮಳೆಯ ನಡುವೆ ನೀರು ತುಂಬಿರುವ ರಸ್ತೆಯಲ್ಲಿನ ಹೊಂಡಗಳ ಆಳ ತಿಳಿಯಲು ಚಾಲಕನಿಗೆ ಅಸಾಧ್ಯವಾಗದ ಕಾರಣ ಕಾರು ಸಿಲುಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಸಿಕ್ಕಿಹಾಕಿಕೊಂಡ ನಂತರ, ಚೌಹಾಣ್ ಛತ್ರಿಯೊಂದಿಗೆ ಕೆಳಗಿಳಿದು ಸ್ಥಳೀಯರೊಂದಿಗೆ ಮಾತನಾಡಿದ್ದಾರೆ. ಇದರ ನಂತರ ಅವರು ಸುರಕ್ಷಿತವಾಗಿ ಹೆಲಿಪ್ಯಾಡ್‌ಗೆ ಹೋಗಿ ಹೆಲಿಕಾಪ್ಟರ್‌ನಲ್ಲಿ ರಾಂಚಿಗೆ ಮರಳಿದರು ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅಜಿತ್ ಕುಮಾರ್ ಕುಜೂರ್ ತಿಳಿಸಿದ್ದಾರೆ.
#WATCH | Jharkhand | Union Minister Shivraj Singh Chouhan's car today got stuck in a muddy pothole amid rains today in Baharagora where he was for a public rally pic.twitter.com/ZYrZanee9K
— ANI (@ANI) September 23, 2024
ಹಿಂದಿನ ದಿನ ಜಾರ್ಖಂಡ್ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಸರ್ಕಾರವನ್ನು ಟೀಕಿಸಿದ್ದರು. ಆಡಳಿತರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಜೆಎಂಎಂ ಅನ್ನು ಅವರು “ಜುರ್ಮ್, ಮರ್ಡರ್ ಮತ್ತು ಮಾಫಿಯಾ” ಸರ್ಕಾರ ಎಂದು ಕರೆದಿದ್ದಾರೆ.
ಬಹರಗೋರಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಿವರಾಜ್ ಚೌಹಾಣ್, ಜಾರ್ಖಂಡ್‌ನಲ್ಲಿ ಆವರಿಸಿರುವ ಕತ್ತಲೆ ಶೀಘ್ರದಲ್ಲೇ ಮಾಯವಾಗಲಿದೆ ಮತ್ತು ಬದಲಾವಣೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, ಜಾರ್ಖಂಡ್‌ನ ಮಹಿಳೆಯರು ತಮ್ಮ ಭೂಮಿ, ಹೆಣ್ಣುಮಕ್ಕಳು ಮತ್ತು ಉದ್ಯೋಗಗಳನ್ನು ರಕ್ಷಿಸಲು ಸಹಾಯವನ್ನು ಕೇಳುತ್ತಿದ್ದಾರೆ; ಒಳನುಸುಳುವಿಕೆಯನ್ನು ನಿಲ್ಲಿಸಿ ಸುರಕ್ಷತೆ ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಬಿಜೆಪಿ ಭರವಸೆ ನೀಡುತ್ತದೆ ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಮಾಮರದ ತಂಪಿಗೆ ಕೂತಿರುವ ಗಿಳಿಗಳೆ ಹಾಡು mamarada tampige kootiruva giligale


