ವಿಜಯಪುರ ನಗರದ ಸಿಂದಗಿ ಪಟ್ಟಣದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಕ್ಯಾಪ್ ಧರಿಸಿ, ಒಂದು ಕೈಯಲ್ಲಿ ಮಚ್ಚಿನಿಂದ ಮತ್ತು ಇನ್ನೊಂದು ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸುತ್ತಿರುವ ಆತಂಕಕಾರಿ ವೀಡಿಯೊ ವೈರಲ್ ಆಗಿದೆ.
ವಿಜಯಪುರದ ಸಿಂದಗಿ ಪಟ್ಟಣದ ಆನಂದ್ ಟಾಕೀಸ್ ಬಳಿ ಈ ಘಟನೆ ವರದಿಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಹಲ್ಲೆ ಈಗ ವ್ಯಾಪಕ ಚರ್ಚೆಯಲ್ಲಿದೆ.
ಆರೋಪಿ ಯಮನಪ್ಪ ಮಾದರ್ (60) ತನ್ನ ಪತ್ನಿ ಅನುಸೂಯಾ ಮಾದರ್ (50) ಮೇಲೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ, ಸೀರೆಯುಟ್ಟಿದ್ದ ಮಹಿಳೆಯನ್ನು ಬೆನ್ನಟ್ಟಿದ ವ್ಯಕ್ತಿ, ಮಚ್ಚಿನಿಂದ ಪದೇ ಪದೇ ಹಲ್ಲೆ ಮಾಡುವುದನ್ನು ಕಾಣಬಹುದು. ಒಂದು ಹಂತದಲ್ಲಿ, ಮಹಿಳೆ ರಸ್ತೆಯ ಮೇಲೆ ರಕ್ತಸಿಕ್ತವಾಗಿ ಕುಸಿದು ಬೀಳುತ್ತಿರುವುದು ವೀಡಿಯೊದಲ್ಲಿ ಸೆಯಾಗಿದೆ. ಸಾರ್ವಜನಿಕರ ಮಧ್ಯಪ್ರವೇಶದ ಹೊರತಾಗಿಯೂ ವ್ಯಕ್ತಿ ಪತ್ನಿಗೆ ಹಲ್ಲೆ ಮುಂದುವರಿಸಿದ್ದಾನೆ.
ಮಹಿಳೆಯನ್ನು ಹೊಡೆದ ನಂತರ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಮತ್ತೊಬ್ಬ ವ್ಯಕ್ತಿ ಮರದ ದಿಮ್ಮಿಯಿಂದ ಆತನಿಗೆ ಹೊಡೆದಾಗ, ದಾಳಿಕೋರ ರಸ್ತೆಯಲ್ಲೇ ಕುಸಿದು ಬೀಳುತ್ತಾನೆ.
ಪತಿ ಮತ್ತು ಪತ್ನಿ ಇಬ್ಬರನ್ನೂ ಚಿಕಿತ್ಸೆಗಾಗಿ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಪಥಸಂಚಲನ ವಿವಾದ: ಅ.28ರಂದು ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ


