ತೂಕದ ಕಾರಣದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾದ ಕುಸ್ತಿಪಟು ವಿನೇಶ್ ಫೋಗಟ್ ಅವರು ಹರಿಯಾಣ ಸರ್ಕಾರವು ಬೆಳ್ಳಿ ಪದಕಕ್ಕೆ ಸರಿಸಮಾನವಾಗಿ ನೀಡಲು ಮುಂದಾದ ಪುರಸ್ಕಾರಗಳಲ್ಲಿ 4 ಕೋಟಿ ರೂಪಾಯಿ ನಗದು ಬಹುಮಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್-2024ರ 50 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್ ಫೈನಲ್ ಪಂದ್ಯಕ್ಕೆ ಗಂಟೆಗಳು ಬಾಕಿ ಇರುವಾಗ ತೂಕ ಹೆಚ್ಚಾದ ಕಾರಣ ಸ್ಪರ್ಧೆಯಿಂದಲೇ ಹೊರಬಿದ್ದಿದ್ದರು. ಇದು ಇಡೀ ದೇಶವಾಸಿಗಳ ಬೇಸರಕ್ಕೆ ಕಾರಣವಾಗಿತ್ತು.
ಬಳಿಕ ಹರಿಯಾಣ ವಿಧಾನಸಭೆ ಚುನಾವಣೆಗೆ ಜುಲಾನ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನೇಶ್ ಫೋಗಟ್, ಚುನಾವಣೆಯಲ್ಲಿ ಗೆದ್ದು ಪ್ರಸ್ತುತ ಶಾಸಕಿಯಾಗಿದ್ದಾರೆ.
ಹರಿಯಾಣ ಸರ್ಕಾರ ಬೆಳ್ಳಿ ಪದಕಕ್ಕೆ ಸರಿಸಮಾನವಾಗಿ ತನ್ನ ಕ್ರೀಡಾ ನೀತಿಯಡಿಯಲ್ಲಿ ವಿನೇಶ್ ಫೋಗಟ್‌ಗೆ ಮೂರು ಆಯ್ಕೆಗಳನ್ನು ನೀಡಿತ್ತು. ರೂ. 4 ಕೋಟಿ ನಗದು ಬಹುಮಾನ, ಗ್ರೂಪ್ ‘ಎ’ ಅಡಿಯಲ್ಲಿ ಅತ್ಯುತ್ತಮ ಕ್ರೀಡಾಪಟು (ಒಎಸ್‌ಪಿ) ಹುದ್ದೆ ಮತ್ತು ಹರಿಯಾಣ ಶೆಹ್ರಿ ವಿಕಾಸ್ ಪ್ರಾಧಿಕಾರ್ (ಹೆಚ್‌ಎಸ್‌ವಿಪಿ) ಅಡಿ ನಿವೇಶನ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿತ್ತು.
ವಿನೇಶ್ ಫೋಗಟ್ 4 ಕೋಟಿ ರೂಪಾಯಿ ನಗದು ಪುರಸ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತನ್ನ ನಿರ್ಧಾರವನ್ನು ಅವರು ಪತ್ರದ ಮೂಲಕ ರಾಜ್ಯ ಕ್ರೀಡಾ ಇಲಾಖೆಗೆ ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಕಳೆದ ಮಾರ್ಚ್‌ನಲ್ಲಿ ಹರಿಯಾಣ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ್ದ ವಿನೇಶ್ ಫೋಗಟ್, ತನ್ನನ್ನು ಪದಕ ವಿಜೇತರಂತೆ ಗೌರವಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮಾತನ್ನು ನೆನಪಿದ್ದರು.
“ಇದು ಹಣದ ವಿಚಾರವಲ್ಲ, ಗೌರವದ ವಿಚಾರ. ರಾಜ್ಯದ ಜನರು ನನಗೆ ನಗದು ಪುರಸ್ಕಾರ ಸಿಗಬೇಕು ಎಂಬುವುದಾಗಿ ಹೇಳುತ್ತಿದ್ದಾರೆ” ಎಂದು ವಿನೇಶ್ ಹೇಳಿದ್ದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸಿಎಂ ಸೈನಿ, “ವಿನೇಶ್ ಫೋಗಟ್ ನಮ್ಮ ಹೆಮ್ಮೆ. ಆಕೆಯ ಗೌರವ ಕಡಿಮೆಯಾಗಲು ಬಿಡುವುದಿಲ್ಲ” ಎಂದಿದ್ದರು.
ಏಪ್ರಿಲ್ 16 ರಂದು ಮತಾಂತರ ವಿರೋಧಿ ಕಾಯ್ದೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್


