ಕಳೆದ ತಿಂಗಳು ನಡೆದ ಸಾರ್ವಜನಿಕ ಸಭೆಯಲ್ಲಿ ನೀಡಿದ್ದ “ಮಿನಿ-ಪಾಕಿಸ್ತಾನ” ಹೇಳಿಕೆಗೆ ಚುನಾವಣಾ ಆಯೋಗವು ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿಗೆ ಮೃದು ಎಚ್ಚರಿಕೆ ನೀಡಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಆಯೋಗವು ನೀತಿ ಸಂಹಿತೆ ಉಲ್ಲಂಘನೆ ಎಂದು 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿತ್ತು.
ಸೋಮವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ, ಚುನಾವಣಾ ಆಯೋಗವು ಸುವೆಂದು ಅಧಿಕಾರಿಯನ್ನು ಲಘುವಾಗಿ ಎಚ್ಚರಿಸಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಸಮಯ ಸಾರ್ವಜನಿಕವಾಗಿ ಮಾತನಾಡುವಾಗ ಅಂತಹ ಹೇಳಿಕೆಯನ್ನು ನೀಡದಂತೆ ಅದು ಹೇಳಿದೆ.
ಇದನ್ನೂ ಓದಿ: ತಬ್ಲಿಗಿ ಮರ್ಕಜ್ ಮತ್ತು ಕುಂಭಮೇಳಕ್ಕೂ ಹೋಲಿಕೆ ಸರಿಯಲ್ಲ: ಉತ್ತರಖಂಡ ಸಿಎಂ
ಸುವೆಂದು ಅಧಿಕಾರಿ, ಮಮತಾ ಅವರನ್ನು “ಬೇಗಂ” ಎಂದು ಭಾಷಣದಲ್ಲಿ ಉಲ್ಲೇಖಿಸಿ, ಅವರಿಗೆ ಮತ ಚಲಾಯಿಸುವುದು “ಮಿನಿ ಪಾಕಿಸ್ತಾನ”ಕ್ಕೆ ಮತ ಹಾಕಿದಂತೆ ಎಂದು ಹೇಳಿದ್ದರು. “ನೀವು ಬೇಗಂಗೆ ಮತ ಹಾಕಿದರೆ ಮಿನಿ ಪಾಕಿಸ್ತಾನ ನಿರ್ಮಾಣವಾಗುತ್ತದೆ. ನಿಮ್ಮ ಪ್ರದೇಶದಲ್ಲಿ ದಾವೂದ್ ಇಬ್ರಾಹಿಂ ಬರುತ್ತಾನೆ” ಎಂದು ಅವರು ಹೇಳಿದ್ದರು.
ಅವರ ಹೇಳಿಕೆಗೆ ನೋಟಿಸ್ ನೀಡಿದ್ದ ಚುನವಣಾ ಆಯೋಗಕ್ಕೆ ಉತ್ತರಿಸಿದ್ದ ಅವರು, ತನಗೆ ಯಾರನ್ನೂ ವೈಯಕ್ತಿಕವಾಗಿ ಟೀಕಿಸುವ ಅಥವಾ ಅವಹೇಳನ ಮಾಡುವ ಉದ್ದೇಶವಿರಲಿಲ್ಲ. ತಾನು ಚುನಾವಣಾ ಆಯೋಗದ ಯಾವುದೇ ನಿರ್ದೇಶನಕ್ಕೆ ಬದ್ಧರಾಗಿರುತ್ತೇನೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು, ಸುವೆಂದು ನೀತಿ ಸಂಹಿತೆಯ ಹಲವು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ನೀಡದಂತೆ ಸಲಹೆ ನೀಡಿತ್ತು.
ಇದನ್ನೂ ಓದಿ: ಇಫ್ತಾರ್ ಕೂಟ ನಡೆಸುವಂತಿಲ್ಲ, ರಂಜಾನ್‌ಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ


