ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಐದು ಮೈತ್ರಿ ಪಕ್ಷದ ಸಂಸದರೊಂದಿಗೆ ಹಿಂಸಾಚಾರ ಪೀಡಿತ ಸಂಭಾಲ್ ಜಿಲ್ಲೆಗೆ ಬುಧವಾರ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ವಯನಾಡ್‌ನ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಸಂಭಾಲ್‌ಗೆ ಭೇಟಿ ನೀಡಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ನಿಯೋಗದಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಉಸ್ತುವಾರಿ ಅವಿನಾಶ್ ಪಾಂಡೆ ಕೂಡ ಇರುತ್ತಾರೆ ಎಂದು ಪಕ್ಷವು ಪಿಟಿಐಗೆ ತಿಳಿಸಿದೆ. ಸೋಮವಾರದಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರ ನಿಯೋಗ ಜಿಲ್ಲೆಗೆ ಭೇಟಿ ನೀಡುವುದನ್ನು ತಡೆಯಲಾಗಿತ್ತು. ಡಿಸೆಂಬರ್ 10ರವರೆಗೆ ಈ ಪ್ರದೇಶಕ್ಕೆ ಹೊರಗಿನವರು ಮತ್ತು ಸಾರ್ವಜನಿಕ ಪ್ರತಿನಿಧಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಹಿಂಸಾಚಾರ ಪೀಡಿತ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂಭಾಲ್‌ನ ಸುಮಾರು 500 ವರ್ಷಗಳ ಹಳೆಯ ಮಸೀದಿಯಿರುವ ಸ್ಥಳದಲ್ಲಿ ಹರಿಹರ ದೇವಾಲಯ ಇತ್ತು ಪ್ರತಿಪಾದಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾದ ನಂತರ ನವೆಂಬರ್ 19 ರಿಂದ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯ ಸಮೀಕ್ಷೆ ನಡೆಸುವ ವೇಳೆ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ನವೆಂಬರ್ 24 ರಂದು ನಡೆದ ಎರಡನೇ ಸಮೀಕ್ಷೆಯ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಶಾಹಿ ಜಾಮಾ ಮಸೀದಿ ಬಳಿ ಜಮಾಯಿಸಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದಾರೆ. ಉಂಟಾದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಈ ನಡುವೆ, ಹಿಂಸಾಚಾರದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಆಗ್ರಹಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಸಂಪೂರ್ಣ ಪ್ರತಿಪಕ್ಷಗಳು ಮಂಗಳವಾರ ಸದನದಿಂದ ಸಂಕ್ಷಿಪ್ತವಾಗಿ ಹೊರನಡೆದಿವೆ. ಸದನವು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಸಭೆ ಸೇರಿದ ತಕ್ಷಣ, ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಎದ್ದುನಿಂತು ವಿಷಯ ಪ್ರಸ್ತಾಪಿಸಿ, ವಿಷಯದ ಬಗ್ಗೆ ಮಾತನಾಡಲು ಸ್ಪೀಕರ್ ಓಂ ಬಿರ್ಲಾ ಅವರ ಅನುಮತಿ ಕೋರಿದ್ದರು.
“ಇದು ತುಂಬಾ ಗಂಭೀರವಾದ ವಿಷಯ. ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಅಖಿಲೇಶ್ ಯಾದವ್ ಹೇಳಿದರು. ಆದರೆ, ಇದಕ್ಕೆ ಅನುಮತಿ ನೀಡದ ಸ್ಪೀಕರ್, ಶೂನ್ಯವೇಳೆಯಲ್ಲಿ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಹೇಳಿದರು. ಇದನ್ನು ಪ್ರತಿಭಟಿಸಿದ ಅಖಿಲೇಶ್ ಯಾದವ್ ಮತ್ತು ಅವರ ಪಕ್ಷದ ಸಹೋದ್ಯೋಗಿಗಳು ಸದನದಿಂದ ಹೊರನಡೆಯಲು ಪ್ರಾರಂಭಿಸಿದರು.
ಇದನ್ನೂ ಓದಿ: ಪ್ರಚೋದನಕಾರಿ ಸುದ್ದಿ | ಭಾರತೀಯ ಟಿವಿ ಚಾನೆಲ್‌ಗಳನ್ನು ನಿಷೇಧಿಸುವಂತೆ ಬಾಂಗ್ಲಾದೇಶ ಹೈಕೋರ್ಟ್‌ಗೆ ಅರ್ಜಿ
ಪ್ರಚೋದನಕಾರಿ ಸುದ್ದಿ | ಭಾರತೀಯ ಟಿವಿ ಚಾನೆಲ್‌ಗಳನ್ನು ನಿಷೇಧಿಸುವಂತೆ ಬಾಂಗ್ಲಾದೇಶ ಹೈಕೋರ್ಟ್‌ಗೆ ಅರ್ಜಿ


