Homeಮುಖಪುಟ4 ವರ್ಷದ ಹುಡುಗಿಯ ಕ್ಯಾನ್ಸರ್ ಔಷಧಿಗಾಗಿ ವ್ಯಕ್ತಿಯೊಬ್ಬ 150 ಕಿ.ಮೀ ಪ್ರಯಾಣಿಸಿದ ಕಥೆ.

4 ವರ್ಷದ ಹುಡುಗಿಯ ಕ್ಯಾನ್ಸರ್ ಔಷಧಿಗಾಗಿ ವ್ಯಕ್ತಿಯೊಬ್ಬ 150 ಕಿ.ಮೀ ಪ್ರಯಾಣಿಸಿದ ಕಥೆ.

- Advertisement -
- Advertisement -

21 ದಿನಗಳ ಲಾಕ್‌ಡೌನ್ ನಮ್ಮಲ್ಲಿ ಹಲವರ ಮೇಲೆ ಕಠಿಣ ಪರಿಣಾಮ ಬೀರಿರಬಹುದು. ಏಕೆಂದರೆ ಒಂದು ದಿನ ಹೊರಗಡೆ ಹೋಗದೆ ಬದುಕುವುದು ಹೇಗೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಆದರೆ ಕೆಲವು ಕಾಯಿಲೆಗಳಿಂದಾಗಿ ಅಕ್ಷರಶಃ ಇನ್ನೊಂದು ಹೆಚ್ಚು ದಿನ ಬದುಕಲು ಹೋರಾಡುತ್ತಿರುವವರಿಗೆ ಈ ಲಾಕ್‌ಡೌನ್‌ ವಿಶೇಷವಾಗಿ ಕ್ರೂರವಾಗಬಹುದು. ರಕ್ತದ ಕ್ಯಾನ್ಸರ್ ಹೊಂದಿರುವ ನಾಲ್ಕು ವರ್ಷದ ನೂರ್ (ಹೆಸರು ಬದಲಾಯಿಸಲಾಗಿದೆ) ಆ ಎರಡನೇ ವಿಭಾಗದಲ್ಲಿ ಸೇರುತ್ತಾಳೆ. ಈ ಕುರಿತು ದಿ ನ್ಯೂಸ್‌ ಮಿನಿಟ್‌ ಪ್ರಕಟಿಸಿದ ಬರಹದ ಕನ್ನಡ ಅನುವಾದ ಇಲ್ಲಿದೆ.

ಪ್ರತಿ ತಿಂಗಳು ನೂರ್‌ಳನ್ನು ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಕ್ಕೆ, ತನ್ನ ಊರಾದ ಆಲಪ್ಪುಳದಿಂದ ಕೀಮೋಥೆರಪಿ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಲಾಗಿದ್ದರಿಂದ ಆಸ್ಪತ್ರೆಯು ನೂರ್‌ಳ ಚಿಕಿತ್ಸೆಯನ್ನು ರದ್ದುಗೊಳಿಸಿದ್ದಲ್ಲದೆ, ಅವರ ಕುಟುಂಬವು ಔಷಧಿಗಳನ್ನು ಖರೀದಿಸಲು ದೂರದ ತಿರುವನಂತಪುರಂಗೆ ಪ್ರಯಾಣಿಸಲಾಗದೆ ಚಿಂತಿತರಾಗಿತ್ತು.

ಇಂತಹ ಕಷ್ಟಕರ ಸಮಯದಲ್ಲಿ ಅವರ ನೆರೆಮನೆಯಲ್ಲಿದ್ದ ವ್ಯಕ್ತಿ ಮತ್ತು ಪೊಲೀಸ್‌ ಅಧಿಕಾರಿಯೊಬ್ಬ ಮಾನವೀಯತೆಯ ರೂಪದಲ್ಲಿ ಒದಗಿಬಂದಿದ್ದಾರೆ. ಆ ಮಗುವಿನೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲದಿದ್ದರೂ, ಆಕೆಯ ಜೀವ ಉಳಿಸುವ ಸಲುವಾಗಿ ಮಾರ್ಚ್ 31 ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಸಾರ್ಜೆಂಟ್ ಆಗಿರುವ ಕೆ.ಪಿ.ವಿಷ್ಣು ಅವರು ತಮ್ಮ ಬೈಕ್‌ನಲ್ಲಿ 150 ಕಿ.ಮೀ ಪ್ರಯಾಣಿಸಿ ತಮ್ಮ ಕೈಯಿಂದ ಹಣ ಹಾಕಿ ಔಷಧಿ ಖರೀದಿಸಿ ಆ ಕುಟುಂಬಕ್ಕೆ ನೀಡಿದ್ದಾರೆ. ಔಷಧಿ ಕೈಸೇರುವವರೆಗೂ ವಿಷ್ಣುವಿನ ಈ ಸಾಹಸ ನೂರ್‌ಳ ಕುಟುಂಬಕ್ಕೆ ತಿಳಿದಿರಲಿಲ್ಲ.

ಆಲಪ್ಪುಳಾ ನಾರ್ತ್ ಸ್ಟೇಷನ್‌ನ ನಾಗರಿಕ ಪೊಲೀಸ್ ಅಧಿಕಾರಿ ಮತ್ತು ವಿಷ್ಣುವಿನ ನೆರೆಹೊರೆಯ ಆಂಟನಿ ರತೀಶ್, “ನಾನು ನೂರ್‌ನ ಕುಟುಂಬವನ್ನು ಕೆಲವು ತಿಂಗಳುಗಳಿಂದ ತಿಳಿದಿದ್ದೇನೆ. ಮಾರ್ಚ್ 30 ರಂದು, ಆಕೆಯ ತಾಯಿ ನನಗೆ ಕರೆ ಮಾಡಿ, ತನ್ನ ಮಗಳ ಕೀಮೋಥೆರಪಿಯನ್ನು ರದ್ದುಪಡಿಸಲಾಗಿದೆ ಮತ್ತು ವೈದ್ಯರು ಔಷಧಿ ತೆಗೆದುಕೊಳ್ಳುವುದನ್ನು ಮುಂದುವರೆಸಬೇಕೆಂದು ಕೇಳಿಕೊಂಡಿದ್ದಾರೆ. ಆದರೆ ಅವರ ಮನೆಯಲ್ಲಿ ಔಷಧಿ ಖಾಲಿಯಾಗಿತ್ತಲ್ಲದೇ ಆಲಪ್ಪುಳದಲ್ಲಿ ಎಲ್ಲಿಯೂ ಔಷಧಿಯನ್ನು ಸಿಗಲಿಲ್ಲ. ಅವರು ಲಾಕ್‌ಡೌನ್‌ ಸಮಯದಲ್ಲಿ ಔಷಧಿ ತರಲು ತಿರುವನಂತಪುರಂಗೆ ಕ್ಯಾಬ್ ತೆಗೆದುಕೊಳ್ಳುವಷ್ಟು ಹಣ ಹೊಂದಿಲ್ಲ” ಎಂದು ತಿಳಿಸಿದ್ದರು.

ಆ ನಂತರ ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ಆಶ್ಚರ್ಯಪಟ್ಟ ರತೀಶ್, ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ನೆರೆಹೊರೆಯ ವಿಷ್ಣುವನ್ನು ಸಂಪರ್ಕಿಸಿದರು. ಆದರೆ ವಿಷ್ಣು ಆ ರಾತ್ರಿ ತಾನೇ ತಿರುವನಂತಪುರಕ್ಕೆ ತೆರಳಿದ್ದರು ಮತ್ತು ಅವರು ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವವರೆಗೆ ಒಂದು ವಾರ ಅಲ್ಲಿಯೇ ಇರಲು ಯೋಜಿಸಿದ್ದರು.

“ನಾನು ಅವರಿಗೆ ಕರೆ ಮಾಡಿದಾಗ ಅವರು ತಿರುವನಂತಪುರಂ ತಲುಪಿದ್ದರು. ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಿಂದ ಔಷಧಿಯನ್ನು ಖರೀದಿಸಿ ಕೊಲ್ಲಂ ಜಿಲ್ಲೆಯವರೆಗೆ ಮಾತ್ರ ತಲುಪಿಸಬಹುದು ಎಂದು ಹೇಳಿದರು. ಆದರೆ ಮರುದಿನ ಬೆಳಿಗ್ಗೆ ಅವರು ಮನಸ್ಸು ಬದಲಿಸಿ 150 ಕಿಲೋಮೀಟರ್ ಸವಾರಿ ಮಾಡಿ, ನೂರ್‌ನ ಮನೆ ಬಾಗಿಲಿಗೆ ಹೋಗಿ ಔಷಧಿಗಳನ್ನು ತಲುಪಿಸಿದನು. ಆ ರಾತ್ರಿ ಅವನು ಮಲಗಿದ್ದನೆಂದು ನಾನು ಭಾವಿಸುವುದಿಲ್ಲ” ಎಂದು ರತೀಶ್ ಹೇಳುತ್ತಾರೆ.

ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ 32 ವರ್ಷದ ಸಾರ್ಜೆಂಟ್ ವಿಷ್ಣು, ಔಷಧಿಗಳನ್ನು ವಿತರಿಸಿದ ನಂತರ ಆಲಪ್ಪುಳದಲ್ಲಿ ಒಂದು ದಿನ ಇದ್ದು ನಂತರ ತಿರುವನಂತಪುರಂಗೆ ಹಿಂತಿರುಗಿದ್ದಾರೆ.

ಲಾಕ್‌ಡೌನ್ ಹೊರತಾಗಿಯೂ ನೂರ್‌ಗೆ ಈಗ ಅಗತ್ಯ ಔಷಧಿಗಳು ಲಭ್ಯವಾದ್ದರಿಂದ, ಅವರ ಕುಟುಂಬವು ಸಂತೋಷದಲ್ಲಿದೆ. ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಸಹಾಯ ಒದಗಿದ್ದಕ್ಕೆ ಅವರು ಕೃತಜ್ಞರಾಗಿದ್ದಾರೆ.

“ನಾನು ಪ್ರತಿ ಬಾರಿ ನನ್ನ ನಮಾಜ್ ಮಾಡುವಾಗ ಈ ಇಬ್ಬರು ಪುರುಷರ ಬಗ್ಗೆ ಯೋಚಿಸುತ್ತೇನೆ. ಅಲ್ಲಾಹನು ಯಾವಾಗಲೂ ಅವರನ್ನು ಆಶೀರ್ವದಿಸುವನು ”ಎಂದು ನೂರ್ ತಾಯಿ ಮಲಯಾಳಂ ಪತ್ರಿಕೆಗೆ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...