Homeಸಿನಿಮಾಕ್ರೀಡೆVIVO IPL 2020 ಹಾಗೂ ದೇಶಭಕ್ತಿ; ಸಾಮಾಜಿಕ ಜಾಲತಾಣದಲ್ಲಿ ’ಜಸ್ಟ್ ಆಸ್ಕಿಂಗ್’

VIVO IPL 2020 ಹಾಗೂ ದೇಶಭಕ್ತಿ; ಸಾಮಾಜಿಕ ಜಾಲತಾಣದಲ್ಲಿ ’ಜಸ್ಟ್ ಆಸ್ಕಿಂಗ್’

ಈಗ ಬಿಜೆಪಿ ಹಾಗೂ ಮೋದಿ ಬೆಂಬಲಿಗರು ಬಿಸಿಸಿಐ ಪದಾಧಿಕಾರಿಗಳನ್ನು, ಆಟದಲ್ಲಿ ಭಾಗವಹಿಸುತ್ತಿರುವ ಆಟಗಾರರನ್ನು, ಮೌನವಾಗಿ ಕೂತಿರುವ ಕೇಂದ್ರ ಸರ್ಕಾರವನ್ನು ದೇಶದ್ರೋಹಿಗಳೆಂದು ಘೋಷಿಸುತ್ತಾರೆಯೇ ಅಥವಾ ಚೀನಾ ಪ್ರಾಯೋಜಿತ ಐಪಿಎಲ್ ಪಂದ್ಯಗಳ್ನನು ವೀಕ್ಷಿಸುವುದನ್ನು ಬಹಿಷ್ಕರಿಸುತ್ತಾರೆಯೆ?

- Advertisement -
- Advertisement -

ಎಲ್ಲಾ ಒತ್ತಡಗಳ ನಡೆವೆಯು ಈ ವರ್ಷದ ಐಪಿಎಲ್‌ ಕ್ರಿಕೆಟ್ ಟೂರ್ನಿ ನಡೆಸುವುದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅನುಮತಿ ನೀಡಿದೆ. ಈ ವರ್ಷದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19 ರಿಂದ ನವೆಂಬರ್‌ 10 ರವರೆಗೆ ಯುಎಇ ಯಲ್ಲಿ ನಡೆಯಲಿದೆ.

ಕೊರೊನಾ ಆತಂಕದ ನಡುವೆ ನಡೆಯುತ್ತಿರುವ ಈ ಪಂದ್ಯಕ್ಕೆ ಹಲವಾರು ವಿರೋಧಗಳು ಕೇಳಿ ಬರುತ್ತಿವೆ. ಹಲವಾರು ಸಾಮಾಜಿಕ ಕಾರ್ಯಕರ್ತರು ಸಾಂಕ್ರಾಮಿಕದ ನಡುವೆ ಟೂರ್ನಿ ಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.

ಒಂದೆಡೆ ಚೀನಾದ ಗಡಿ ತಂಟೆಗೆ ಚೀನಾ ಆಪ್‌ಗಳನ್ನು ನಿಷೇಧಿಸಿದ್ದು ಬಹಳ ದೊಡ್ಡ ಸಾಧನೆಯೆಂದು ಬೀಗುತ್ತಿರುವ ಕೇಂದ್ರ ಸರ್ಕಾರ, ಚೀನಾ ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಐಪಿಎಲ್ ನಡೆಸಲು ಅವಕಾಶ ಕೊಟ್ಟಿದ್ದು ದ್ವಂದ್ವವಲ್ಲವೇ? BCCI ನಲ್ಲಿ ಬಿಜೆಪಿ ಮುಖಂಡರ ಮಕ್ಕಳೇ ಇದ್ದರೂ ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಚಿಂತಕರಾದ ಶಿವಸುಂದರ್‌, ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ”ಜಸ್ಟ್‌ ಆಸ್ಕಿಂಗ್‌” ಎಂಬ ಶಿರ್ಷೀಕೆಯ ಲೇಖನದಲ್ಲಿ ಬಿಜೆಪಿಯ ನಾಯಕರು ಹಾಗೂ ಅವರ ಬೆಂಬಲಿಗರಿಗೆ ಪ್ರಶ್ನೆಗಳ ಸರಮಾಲೆಯನ್ನೇ ಎಸೆದಿದ್ದಾರೆ.

ಅವರು ತಮ್ಮ ಬರಹದಲ್ಲಿ , ಈ “ಭಾರತೀಯ” ಪಂದ್ಯವನ್ನು ಹಲವಾರು “ಚೀನಿ ಕಂಪನಿಗಳು” ಪ್ರಾಯೋಜಕತ್ವ ಮಾಡುತ್ತಿವೆ, ಅಲ್ಲದೆ ಈ ಬಾರಿಯ ಪಂದ್ಯಾಟದ ಹೆಸರು ಕೂಡಾ “VIVO IPL 2020” ಎಂದಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

“ಚೀನಾದ ದೈತ್ಯ ಮೊಬೈಲ್ ಕಂಪನಿ VIVO ಐಪಿಎಲ್ ನ ಟೈಟಲ್ ಪ್ರಾಯೋಜನೆ ಮಾಡುತ್ತಿದೆ. ಚೀನಾದ ಅಲಿಬಾಬಾ ಕಂಪನಿಯ ಹೂಡಿಕೆ ಹೊಂದಿರುವ Pay TM “ಅಂಪೈರ್ ಪಾರ್ಟ್ನರ್” ಆಗಿದೆ. ಚೀನಾದ ಹೂಡಿಕೆಯನ್ನು ಹೊಂದಿರುವ Swiggy ಮತ್ತು Dream 11 ಕಂಪನಿಗಳು ಸಹ- ಪ್ರಯೋಜಕರಾಗಿವೆ.” ಇದಕ್ಕೆ ಭಾರತ ಸರ್ಕಾರವೇ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಐಪಿಎಲ್ ಪಂದ್ಯಗಳಿಗೆ ಅನುಮತಿ ಕೊಟ್ಟಿರುವ BCCI ನ ಪದಾಧಿಕಾರಿಗಳಲ್ಲಿ ಭಾರತದ ಗೃಹಮಂತ್ರಿ ಅಮಿತ್ ಷಾ ಅವರ ಮಗ ಜೇ ಶಾ BCCI ನ ಪ್ರಧಾನ ಕಾರ್ಯದರ್ಶಿ ಆಗದ್ದಾರೆ. ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಅವರ ತಮ್ಮ ಅರುಣ್ ಧೋಮಲ್ BCCI ನ ಖಜಾಂಚಿ ಆಗಿದ್ದಾರೆ ಎಂದು ಬಿಜೆಪಿ ಮತ್ತು ಬಿಸಿಸಿಐನ ಸಂಬಂಧವನ್ನು ಉಲ್ಲೇಖಿಸಿದ್ದಾರೆ.

“ಪಾಕಿಸ್ತಾನದೊಂದಿಗೆ ಘರ್ಷಣೆ ನಡೆದಾಗಲೆಲ್ಲಾ ಅದರ ಜೊತೆ ಕ್ರೀಡಾ ಸಂಬಂಧಗಳನ್ನು ಕಡಿದುಕೊಳ್ಳಲು ಬಿಜೆಪಿ ಪಕ್ಷ ಆಗ್ರಹಿಸುತ್ತಿತ್ತು. ಪಾಕಿಸ್ತಾನ ಜನರೊಂದಿಗೆ ಸ್ನೇಹ ಸಂಬಂಧ ಇಟ್ಟುಕೊಳ್ಳಬೇಕೆನ್ನುವವರನ್ನು ದೇಶದ್ರೋಹಿಗಳೆಂದು ಘೋಷಿಸುತ್ತಿತ್ತು. ಈಗ ಬಿಜೆಪಿಯ ಗೌರವಾನ್ವಿತ ಸದಸ್ಯರೇ ಚೀನಾ ಕಂಪನಿಗಳ ಪ್ರಾಯೋಜನೆಯ ಐಪಿಎಲ್‌ಗೆ ಅನುಮತಿ ನೀಡಿದ್ದು ಹೇಗೆ” ಎಂದು ಶಿವಸುಂದರ್‌ ಪ್ರಶ್ನಿಸಿದ್ದಾರೆ.

ಈಗ ಬಿಜೆಪಿ ಹಾಗೂ ಮೋದಿ ಬೆಂಬಲಿಗರು ಬಿಸಿಸಿಐ ಪದಾಧಿಕಾರಿಗಳನ್ನು, ಆಟದಲ್ಲಿ ಭಾಗವಹಿಸುತ್ತಿರುವ ಆಟಗಾರರನ್ನು, ಮೌನವಾಗಿ ಕೂತಿರುವ ಕೇಂದ್ರ ಸರ್ಕಾರವನ್ನು ದೇಶದ್ರೋಹಿಗಳೆಂದು ಘೋಷಿಸುತ್ತಾರೆಯೇ ಅಥವಾ ಚೀನಾ ಪ್ರಾಯೋಜಿತ ಐಪಿಎಲ್ ಪಂದ್ಯಗಳ್ನನು ವೀಕ್ಷಿಸುವುದನ್ನು ಬಹಿಷ್ಕರಿಸುತ್ತಾರೆಯೆ ಎಂದು ಅವರು ಪ್ರಶ್ನಿಸಿದ್ದಾರೆ.

“ಜನರಿಗೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಯ್ಕಾಟ್ ಚೀನಾ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ ಚೀನಾ ಪ್ರಾಯೋಜಿತ ಐಪಿಎಲ್ ನಡೆಯುತ್ತಿದೆ. ಚೀನಾದ ಹಣ, ಹೂಡಿಕೆ, ಪ್ರಾಯೋಜಕತ್ವ, ಜಾಹಿರಾತನ್ನು ಹೇಗೆ ನಿರ್ವಹಿಸಬೇಕು ಎಂದು ಸರ್ಕಾರಕ್ಕೆ ತೀವ್ರ ಗೊಂದಲಗಳಿರುವಾಗ ಚೀನಾ ನಮ್ಮ ವಿಷಯಗಳಲ್ಲಿ ಮೂಗುತೂರಿಸುವುದರಲ್ಲಿ ಯಾವುದೇ ಆಶ್ಚರ್ಯವಿ‌ಲ್ಲ” ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಚೀನಾದ ದೊಡ್ಡ ಕಂಪನಿಗಳು ಬಿಸಿಸಿಐನ ಐಪಿಎಲ್‌ಗೆ ಜಾಹೀರಾತು ನೀಡಲು ಒಪ್ಪಿಗೆ ನೀಡಲಾಗಿದೆ. ಬಾಲ್ಕನಿಯಿಂದ ಟಿವಿ ಎಸೆದು ಚೀನಾದ ವಿರುದ್ಧ ಶೌರ್ಯ ತೋರಿದ್ದ ಈಡಿಯಟ್‌ಗಳನ್ನು ನೋಡಿ ಬೇಸರವಾಗುತ್ತಿದೆ ಎಂದು ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ.

ಅರವಿಂದ್ ಜಾ ಎಂಬವರು, ಅಮಿತ್ ಶಾ ಅವರ ಮಗ ಬಿಸಿಸಿಐನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರು ಎಂಬುದನ್ನು ಎಂದಿಗೂ ಮರೆಯಬಾರದು. ಐಪಿಎಲ್ ಚೀನಾದ ಪ್ರಾಯೋಜಕತ್ವದೊಂದಿಗೆ ಮುಂದುವರಿಯುತ್ತಿದ್ದರೆ, ಅದು ಬಿಜೆಪಿಯ ಉನ್ನತ ನಾಯಕತ್ವದ ಅನುಮೋದನೆಯೊಂದಿಗೆ ನಡೆಯುತ್ತಿದೆ. ಅಪ್ಲಿಕೇಶನ್ ನಿಷೇಧವು ನಮ್ಮ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ ಎಂದು ಹೇಳಿದ್ದಾರೆ.

 

ಲಡಾಖ್‌ನಲ್ಲಿ ಭಾರತೀಯ ಸೈನಿಕರ ಮಾರಣ ಹೋಮ ನಡೆದಾಗ ಐಪಿಎಲ್‌ ಮಾಡಿದ್ದ ಟ್ವೀಟ್ ಒಂದರ ಫೋಟೋವನ್ನು ಹೆಕ್ಕಿರುವ ಪ್ರಾಧ್ಯಾಪಕ ಕಾಂಚನ್ ಗುಪ್ತಾ, “ಪೂರ್ವ ಲಡಾಕ್‌ನಲ್ಲಿ LAC ಉದ್ದಕ್ಕೂ ಚೀನಾದೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಪ್ರಾಯೋಜಕತ್ವದ ಒಪ್ಪಂದಗಳನ್ನು ಪರಿಶೀಲಿಸುವುದಾಗಿ ಐಪಿಎಲ್ ಹೇಳಿತ್ತು. ಆದರೆ ಈಗ ಚೀನೀ ಪ್ರಾಯೋಜಕತ್ವವನ್ನು ಸ್ವೀಕರಿಸಲು ಅದು ನಿರ್ಧರಿಸಿದೆ. ಸಾಮಾನ್ಯ ವ್ಯಕ್ತಿಗಳನ್ನು ‘ರಾಷ್ಟ್ರ ವಿರೋಧಿ’ ಎಂದು ನಾವು ಸುಲಭವಾಗಿ ಆರೋಪಿಸುತ್ತೇವೆ. ಹಾಗಾದರೆ ಐಪಿಎಲ್ ಏನು?” ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದ ಶಾಸಕ ಝೀಶಾನ್ ಸಿದ್ದೇಕಿ, ಚೀನಾ ನಿರ್ಮಿತ ಟಿವಿಯನ್ನು ಒಡೆದುಹಾಕಿದ ವ್ಯಕ್ತಿಗೆ ಸಂತಾಪಗಳು ಎಂದು ವ್ಯಂಗ್ಯವಾಡಿದ್ದಾರೆ.

 


ಓದಿ: ವಿಶ್ವಕಪ್ ಬೇಡ, ಐಪಿಎಲ್ ಬೇಕು.. ಬದಲಾಗ್ತಿದೆ ಕ್ರಿಕೆಟಿಗರ ಮೈಂಡ್‍ಸೆಟ್!


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...