Homeಕರ್ನಾಟಕಬೆಂಕಿ ಹಚ್ಚುವ ಕಿಚ್ಚು ರಾಜಕೀಯ ಪ್ರೇರಿತವೇ ಹೊರತು ಜನಪರ ಕಾಳಜಿಯದ್ದಲ್ಲ

ಬೆಂಕಿ ಹಚ್ಚುವ ಕಿಚ್ಚು ರಾಜಕೀಯ ಪ್ರೇರಿತವೇ ಹೊರತು ಜನಪರ ಕಾಳಜಿಯದ್ದಲ್ಲ

- Advertisement -
- Advertisement -

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಒಂದು ಬಸ್ ನಿಂತಿದೆ. ಅದು ಎಲ್ಲಾ ಬಸ್‍ಗಳಿಗಿಂತಲೂ ವಿಭಿನ್ನವಾಗಿದೆ. ಆ ಬಸ್‍ನಲ್ಲಿ ಯಾವ ಪ್ರಯಾಣಿಕರೂ ಪ್ರಯಾಣ ಮಾಡಲಾರರು, ಯಾವ ಚಾಲಕರೂ ಮುಂದೆ ಓಡಿಸಲಾರರು. ಆ ಬಸ್ ನೋಡಿದರೆ ಎಂತವರೂ ವಿಷಾಧ ವ್ಯಕ್ತಪಡಿಸದೇ ಇರಲಾರರು. ಅದು ತನ್ನ ಸುತ್ತ ನಾಲ್ಕಾರು ಬ್ಯಾನರ್‍ಗಳನ್ನು ಹೊತ್ತು ನಿಂತಿದೆ. “ನನ್ನ ಯಾವ ತಪ್ಪಿಗೆ ಈ ಶಿಕ್ಷೆ? ತಪ್ಪೇ ಇಲ್ಲದ ಸೇವೆಗೆ ಕಲ್ಲಿನೇಟು, ಬೆಂಕಿಯ ಸ್ಪರ್ಶ. ಇದು ನ್ಯಾಯವೇ?”, “ಲಕ್ಷಾಂತರ ಜನರಿಗೆ ಸೇವೆ ಒದಗಿಸುತ್ತೇನೆ, ನನ್ನ ಯಾವ ತಪ್ಪಿಗೆ ಈ ಘೋರ ಶಿಕ್ಷೆ” ಎಂಬ ಮೊದಲಾದ ವಾಕ್ಯಗಳು ಆ ಬ್ಯಾನರ್‍ಗಳಲ್ಲಿವೆ. ಅಂದರೆ ಆ ಬಸ್‍ಗೆ ಬೆಂಕಿ ಹಚ್ಚಿ ಸುಟ್ಟು ಕರಕಲು ಮಾಡಲಾಗಿದೆ. ಸುಟ್ಟವರು ಯಾರು?

ಸರ್ಕಾರಿ ಬಸ್‍ಗಳು, ಸರ್ಕಾರದ ಕಟ್ಟಡಗಳಂತ ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಗಳು ಸಾರ್ವಜನಿಕರ ಆಸ್ತಿಗಳಲ್ಲವೇ? ಅವುಗಳನ್ನು ರಕ್ಷಿಸಿ ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಲ್ಲವೇ? ಹೌದು ಇದೆಲ್ಲವೂ ಸತ್ಯ, ಉಳಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾದರೆ ಬಸ್‍ಗಳಿಗೆ ಬೆಂಕಿ ಹಚ್ಚಿದವರಾರು ಎಂಬ ಪ್ರಶ್ನೆಗೆ ತಟ್ ಬರುವ ಉತ್ತರ ಹೋರಾಟಗಾರರು ಎಂಬುದು. ಬೆಂಕಿ ಹಚ್ಚುವ ಆ ಹೋರಾಟಗಾರರು ಯಾರು?

ಜನರ ಪರವಾಗಿ, ಜನರ ಕಷ್ಟ-ನಷ್ಟಗಳ ಜೊತೆನಿಂತು, ದೇಶದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಯಾವ ಹೋರಾಟಗಾರರೂ, ಸಂಘಟನೆಯೂ ಬೆಂಕಿ ಹಚ್ಚಲಾರರು. ಏಕೆಂದರೆ ಅದು ದೇಶದ ಆಸ್ತಿ, ಅದನ್ನು ನಾಶ ಮಾಡುವುದು ನಮ್ಮ ಆಸ್ತಿಯನ್ನು ನಾವೇ ಹಾಳುಮಾಡಿದಂತೆ ಎಂಬುದನ್ನು ಅವರು ಅರಿತಿರುತ್ತಾರೆ. ಕರ್ನಾಟಕದಲ್ಲಿ ಬಸ್‍ಗಳಿಗೆ ಬೆಂಕಿ, ಕಲ್ಲು ತೂರಾಟ ಮುಂದಾದ ಹಾನಿಮಾಡುವ ಪ್ರಕರಣಗಳು ಹೆಚ್ಚಾಗಿ ಸದ್ದು ಮಾಡುವುದು ಕಾವೇರಿ ನೀರು ಹೋರಾಟದ ಸಂದರ್ಭದಲ್ಲಿ, ಆ ಹೋರಾಟದಲ್ಲಿ ಸಾರ್ವಜನಿಕ ಆಸ್ತಿಯನ್ನು ನಾಶಮಾಡುವವರು ಯಾರು. ರೈತರ ಪರ ಸದಾ ಚಳುವಳಿಯನ್ನು ಮುನ್ನಡೆಸುತ್ತಿರುವ ರೈತಸಂಘ, ಮೊದಲಾದ ಸಂಘಟನೆಗಳು ಸಾರ್ವಜನಿಕ ಆಸ್ತಿಯನ್ನು ನಾಶ ಮಾಡುವುದಿಲ್ಲ. ದಿನನಿತ್ಯ ಜನರ ಸಂಕಷ್ಟಗಳ ಪರ ಹೋರಾಟ ಮಾಡುವ ಸಂಘಟನೆಗಳು ಅಂದು ಬೆಂಕಿ ಹಚ್ಚಲು ಬರುವುದಿಲ್ಲ. ಅವು ಶಾಂತ ರೀತಿಯಲ್ಲಿ ಹೋರಾಟ ನಡೆಸುತ್ತಿರುತ್ತವೆ.

ಬೆಂಕಿ ಹಚ್ಚುವ ಹುಚ್ಚು ಉಮೇದಿಗೆ ಒಳಗಾಗುವುದು ಯಾವ ಜೀವಪರ ಕಾಳಜಿಯೂ ಇಲ್ಲದ, ರಾಜಕೀಯ ಪುಡಾರಿತನ ಮಾಡಿಕೊಂಡಿರುವ ಚೇಲಾಗಳಲ್ಲದೆ ಮತ್ತಾರಾಗಿರಲು ಸಾಧ್ಯ. ಏಕೆಂದರೆ ಬೆಂಕಿ ಹಚ್ಚಿದಾಕ್ಷಣ ಸಮಸ್ಯೆಗಳು ಬಗೆಹರಿದುಬಿಡುವುದಿಲ್ಲ.. ಆದೂ ಯಾರು ಯಾರದ್ದೋ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಉದ್ದೆರಶದಿಂದ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ.

ಈ ರೀತಿ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುವುದರಿಂದ ಅದರ ನಷ್ಟ ಅನುಭವಿಸಬೇಕಾದವರೂ ಕೂಡ ನಾವೇ ಅನ್ನುವುದನ್ನು ಮರೆಯಬಾರದು. ಅವೆಲ್ಲವೂ ಪ್ರತಿಯೊಬ್ಬ ಜನಸಾಮಾನ್ಯರ ತೆರಿಗೆ ಹಣದಿಂದ ಕೊಂಡುತಂದ ಆಸ್ತಿಗಳು. ಅವುಗಳನ್ನು ನಾಶ ಮಾಡಿದಷ್ಟೂ ಮತ್ತೆ ನಮ್ಮ ತೆರಿಗೆ ಹಣಕ್ಕೆ ಸರ್ಕಾರ ಕೈ ಹಾಕುತ್ತದೆ ಎಂಬ ಎಚ್ಚರಿಕೆ ಇರಬೇಕು.

ಇನ್ನು ಸರ್ಕಾರಗಳು ಕೂಡ ಇಂತವುಗಳನ್ನು ನಿಗ್ರಹಿಸಲು ಕೇವಲ ಕಾನೂನುಗಳನ್ನು ತಂದರೆ ಸಾಲದು. ಜನರು  ಹಾಗೆ ಮಾಡುವುದರಿಂದ ಸರ್ಕಾರ ಮತ್ತು ಮಾಧ್ಯಮಗಳ ಗಮನಸೆಳೆಯಬಹುದು ಎಂದು ಭಾವಿಸಿದ್ದಾರೆ. ಕೆಲ ಟಿ.ವಿ ಮಾಧ್ಯಮಗಳಂತೂ ಹೋರಾಟ ಪ್ರತಿಭಟನೆ ಎಂದರೆ ಬಸ್‍ಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು ಮಾತ್ರವೇ ಎಂಬಂತೆ ಮತ್ತಷ್ಟು ಜನರನ್ನು ಉದ್ರೇಕಿಸುತ್ತವೆ. ಹಾಗಾಗಿ ಸರ್ಕಾರಗಳು ತಮ್ಮ ನೀತಿ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಜನರನ್ನು ಒಳಗೊಂಡು ಅವರ ಅಭಿಪ್ರಾಯ ತೆಗೆದುಕೊಳ್ಳುವುದು ಮುಖ್ಯ..

ಎಲ್ಲಕ್ಕಿಂತ ಮುಖ್ಯವಾಗಿ ಜನರ ಪ್ರತಿಭಟನೆಗಳನ್ನು, ಅವರ ನೋವುಗಳನ್ನು ಸಾವಧಾನದಿಂದ ಕೇಳಿಸಿಕೊಳ್ಳುವ, ಪ್ರತಿಕ್ರಿಯಿಸುವ ಮನಸ್ಥಿತಿಯನ್ನು ಸರ್ಕಾರಗಳು ಹೊಂದಬೇಕು. ಅದು ಎಷ್ಟೇ ಚಿಕ್ಕ ಪ್ರತಿಭಟನೆಯಾದರೂ ಅದರ ಉದ್ದೇಶವನ್ನು ಸರ್ಕಾರಗಳು ಅರ್ಥಮಾಡಿಕೊಂಡರೆ ಆಗ ಜನರು ಸಹ ಹಿಂಸಾತ್ಮಕ ಪ್ರತಿಭಟನೆಗಳ ಮಾರ್ಗ ತುಳಿಯುವುದಿಲ್ಲ. ಆದರೆ ಸರ್ಕಾರಗಳೇ ಇಂತಹ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವುದರಿಂದ ಇಂತಹ ಕ್ರೌರ್ಯಗಳು ಇನ್ನೂ ಹೆಚ್ಚಾಗುತ್ತಿವೆ.

ಸರ್ಕಾರ ಮತ್ತು ಜನಸಾಮಾನ್ಯರು ಇಬ್ಬರು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಹಾಗೆಯೇ ನಮ್ಮ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿಟ್ಟುಕೊಳ್ಳಬೇಕು. ಆಗ ನಾವು ಮಾದರಿ ರಾಜ್ಯವಾಗಲು ಸಾಧ್ಯ..

ಸುಟ್ಟು ಕರಕಲಾದ ಬಸನ್ನು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮೆಜೆಸ್ಟಿಕ್‍ಗೆ ತಂದು ನಿಲ್ಲಿಸಿ ಅದರ ಮೇಲೆ ಬ್ಯಾನರ್ ಹಾಕಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ. ಇದನ್ನು ನೋಡಿದ ಜನರಿಗೆ ಅರ್ಥವಾಗಲಿ ಎಂದು.. ಈಗಲಾದರೂ ಎಚ್ಚೆತ್ತುಕೊಳ್ಳೋಣವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...