ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ಆರಂಭವಾಗಿದ್ದು, ಮತದಾನ ಮತ್ತು ಇವಿಎಂಗಳ ಅಸಮರ್ಪಕ ಕಾರ್ಯಗಳಲ್ಲಿ ವ್ಯತ್ಯಾಸ ಕಂಡುಬಂದಿದೆಯೆಂದು ಆಡಳಿತರೂಢ TMC ಆರೋಪಿಸಿದೆ. ಈ ಕುರಿತು ಪಕ್ಷದ ರಾಜ್ಯಸಭಾ ಸದಸ್ಯ ಡೆರೆಕ್ ಒ’ಬ್ರಿಯೆನ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. “ಪೂರ್ವ ಮದಿನಿಪುರ ಜಿಲ್ಲೆಯ ಮತದಾನದ ಅಂಕಿಅಂಶಗಳನ್ನು ಹಂಚಿಕೊಂಡು, ಕೇವಲ 5 ನಿಮಿಷಗಳ ಅಂತರದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೇಗೆ ಅರ್ಧಕ್ಕೆ ಇಳಿಸಲಾಗಿದೆ ಎಂಬುದನ್ನು ನೀವು ವಿವರಿಸಬಹುದೇ?! ಆಘಾತಕಾರಿ! ಚುನಾವಣಾ ಆಯೋಗ ದಯವಿಟ್ಟು ಇದನ್ನು ತುರ್ತಾಗಿ ನೋಡಿ!” ಎಂದು ಟ್ವೀಟ್ ಮಾಡಿದೆ.
What is happening @ECISVEEP?!
Could you explain how voting percentage drastically reduced to half within a gap of just 5 minutes?!
Shocking!@CEOWestBengal, please look into this urgently! pic.twitter.com/LK1lSvKa8q
— All India Trinamool Congress (@AITCofficial) March 27, 2021
ತೃಣಮೂಲ ಕಾಂಗ್ರೆಸ್‌ಗೆ ಜನರು ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಟಿಎಂಸಿ ಆರೋಪಿಸಿದೆ. “ಕಾಂತಿ ದಕ್ಷಿಣದ ವಿಧಾನಸಭಾ ಸ್ಥಾನದ ಅನೇಕ ಮತದಾರರು ತಾವು ಟಿಎಂಸಿಗೆ ಮತ ಹಾಕಿದ್ದೇವೆ ಅದರೆ ವಿವಿ ಪ್ಯಾಟ್ ಸ್ಲಿಪ್‌ನಲ್ಲಿ ಬಿಜೆಪಿ ಚಿಹ್ನೆ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಗಂಭೀರವಾಗಿದೆ! ಇದು ಅಸಮರ್ಥನೀಯ, ಕೂಡಲೇ ಗಮನ ಹರಿಸಿ” ಎಂದು ಟಿಎಂಸಿ ಟ್ವೀಟ್ ಮಾಡಿದೆ.
Shocking claim by voters which must be immediately looked into by @ECISVEEP and @CEOWestBengal.
Many voters in Kanthi Dakshin assembly seat allege that they voted for TMC but VVPAT showed them the BJP symbol. THIS IS SERIOUS! THIS IS UNPARDONABLE! pic.twitter.com/E0Bjjbc89y
— All India Trinamool Congress (@AITCofficial) March 27, 2021
ಅಧಿಕೃತ ಅಂಕಿಅಂಶಗಳ ಪ್ರಕಾರ, 2016 ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 85.4 ರಷ್ಟು ಮತದಾನದ ಪ್ರಮಾಣವನ್ನು ದಾಖಲಿಸಿದ ಬಂಗಾಳದಲ್ಲಿ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಶೇಕಡಾ 36 ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಹಳೆಯ ವರಸೆ; ಹೊಸ ಪಾತ್ರಧಾರಿಗಳು



ಆ ಸಿಡಿ ಲೇಡಿ ಅವನ ಹತ್ತಿರ ಹೋಗಿ ದ್ಯಾಕೆ?