ನಾಲ್ಕು ದಿನಗಳ ವಿರಾಮದ ನಂತರ ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾಗುತ್ತಿದ್ದಂತೆ, ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್ ಅವರು ನಕಲಿ ಮತದಾರರ ಗುರುತಿನ ಚೀಟಿಗಳ ವಿಷಯದ ಕುರಿತು ಪ್ರತಿಪಕ್ಷಗಳು ಚರ್ಚೆಯನ್ನು ಬಯಸುತ್ತಿದ್ದು, ಸರ್ಕಾರ ಅದಕ್ಕೆ ಸಿದ್ಧವಾಗಿದೆಯೇ ಎಂದು ಕೇಳಿದ್ದಾರೆ. ಸೋಮವಾರ ಬೆಳಿಗ್ಗೆ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಈ ವಿಚಾರವು “ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ” ಎಂದು ಹೇಳಿದ್ದಾರೆ. ಮತದಾರರ ಗುರುತಿನ ಚೀಟಿ
ಡೆರೆಕ್ ಅವರು ಮಾರ್ಚ್ 12 ರ ಪೋಸ್ಟ್ ಅನ್ನು ಸಹ ಟ್ಯಾಗ್ ಮಾಡಿದ್ದು, ಅದರಲ್ಲಿ ಅವರು ಈ ವಿಷಯದ ಕುರಿತು “ಮುಂದಿನ ವಾರ (ನಿಯಮ 176 ರ ಅಡಿಯಲ್ಲಿ) ಮುಕ್ತ ಚರ್ಚೆ”ಯನ್ನು ಕೋರಿದ್ದಾರೆ. “ನಾಲ್ಕು ದಿನಗಳ ವಿರಾಮದ ನಂತರ ಸಂಸತ್ತು ಮತ್ತೆ ಸೇರುತ್ತಿದೆ. ರಚನಾತ್ಮಕ ವಿರೋಧ ಪಕ್ಷವು ಪ್ರಜಾಪ್ರಭುತ್ವದ ತಿರುಳಿನ ವಿಚಾರದ ಕುರಿತು ಚರ್ಚಿಸಲು ಬಯಸುತ್ತದೆ. ಸರ್ಕಾರ ಸಿದ್ಧವಾಗಿದೆಯೇ?” ಡೆರೆಕ್ ಅವರು ಕೇಳಿದ್ದಾರೆ.
ಸಂಸತ್ತಿನಲ್ಲಿ ಹಲವಾರು ವಿರೋಧ ಪಕ್ಷಗಳು ಒಂದೇ ರೀತಿಯ EPIC ಸಂಖ್ಯೆಯ ವಿವಾದದ ಕುರಿತು ಚರ್ಚೆಯನ್ನು ಒತ್ತಾಯಿಸುತ್ತಿವೆ. ಜೊತೆಗೆ ದಕ್ಷಿಣ ಭಾರತದ ಪಕ್ಷಗಳು ಕೂಡಾ ಡಿಲಿಮಿಟೇಶನ್ ವಿಷಯದ ಕುರಿತು ಚರ್ಚೆಯನ್ನು ಬಯಸುತ್ತಿವೆ. ಮತದಾರರ ಗುರುತಿನ ಚೀಟಿ
ವಿರೋಧ ಪಕ್ಷಗಳು ಚರ್ಚೆ ನಡೆಸಬೇಕಾದ ನಿಯಮಕ್ಕೆ ಹೊಂದಿಕೊಳ್ಳುವುದಾಗಿ ಹೇಳಿದ್ದು, ಅದಾಗ್ಯೂ, ಸಂಸತ್ತು ಈ ವಿಷಯವನ್ನು ಚರ್ಚಿಸಬೇಕು ಎಂದು ಒತ್ತಿ ಹೇಳಿವೆ ಎಂದು ಮೂಲಗಳು ಉಲ್ಲೇಖಿಸಿವೆ.
ದೇಶದ ಹಲವು ರಾಜ್ಯಗಳಲ್ಲಿ ಒಂದೇ ರೀತಿಯ ಸಂಖ್ಯೆಗಳನ್ನು ಹೊಂದಿರುವ ಮತದಾರರ ಗುರುತಿನ ಚೀಟಿಗಳ ವಿಷಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಫೆಬ್ರವರಿ 27 ರಂದು ಮುನ್ನಲೆಗೆ ತಂದಿದ್ದರು.
Parliament gets back to work after a four day break. A constructive Opposition wants to debate an issue that is at the core of democracy.
Is the Government ready ? https://t.co/5eNN6wOisA— Derek O'Brien | ডেরেক ও'ব্রায়েন (@derekobrienmp) March 17, 2025
ಕಳೆದ ವಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಜ್ಞಾಪಕ ಪತ್ರದಲ್ಲಿ, “ಆಧಾರ್ ಕಾರ್ಡ್‌ಗಳನ್ನು ಕ್ಲೋನ್ ಮಾಡಲಾಗುತ್ತಿದೆ ಮತ್ತು ನಕಲಿ ಮತದಾರರ ನೋಂದಣಿಗೆ ಅನುಕೂಲವಾಗುವಂತೆ ಈ ಕ್ಲೋನ್ ಮಾಡಿದ ಆಧಾರ್ ಕಾರ್ಡ್‌ಗಳನ್ನು ಬಳಸಲಾಗುತ್ತಿದೆ ಎಂಬ ವಿಶ್ವಾಸಾರ್ಹ ಆರೋಪಗಳಿವೆ” ಎಂದು ಟಿಎಂಸಿ ಹೇಳಿದೆ.
ಮತದಾರರ ಗುರುತಿನ ಚೀಟಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ವಿಷಯದ ಕುರಿತು ಚರ್ಚಿಸಲು ಮುಖ್ಯ ಚುನಾವಣಾ ಆಯುಕ್ತರು ಮಾರ್ಚ್ 18 ರಂದು ಕೇಂದ್ರ ಗೃಹ ಕಾರ್ಯದರ್ಶಿ, ಶಾಸಕಾಂಗ ಕಾರ್ಯದರ್ಶಿ ಮತ್ತು ಯುಐಡಿಎಐ ಸಿಇಒ ಅವರೊಂದಿಗೆ ಸಭೆ ಕರೆದಿದ್ದಾರೆ.
ಮಾರ್ಚ್ 2 ರಂದು ಚುನಾವಣಾ ಆಯೋಗವು ಹೇಳಿಕೆ ನೀಡಿ, ಎಲ್ಲಾ ರಾಜ್ಯಗಳ ಮತದಾರರ ಪಟ್ಟಿಯ ಡೇಟಾಬೇಸ್ ಅನ್ನು ERONET (ಚುನಾವಣಾ ಪಟ್ಟಿ ನಿರ್ವಹಣೆ) ವೇದಿಕೆಗೆ ವರ್ಗಾಯಿಸುವ ಮೊದಲು “ವಿಕೇಂದ್ರೀಕೃತ ಮತ್ತು ಹಸ್ತಚಾಲಿತ ಕಾರ್ಯವಿಧಾನ” ದಿಂದಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೆಲವು ಮತದಾರರಿಗೆ ಒಂದೇ ರೀತಿಯ EPIC ಸಂಖ್ಯೆಗಳು ಅಥವಾ ಸರಣಿಗಳನ್ನು ನೀಡಲಾಗಿದೆ ಎಂದು ಹೇಳಿದೆ.
ಕೆಲವು ಮತದಾರರ EPIC ಸಂಖ್ಯೆಗಳು “ಒಂದೇ ಆಗಿರಬಹುದು” ಎಂದು ಆಯೋಗವು ಹೇಳಿದ್ದು, ಆದೆರೆ ಅದು ನಕಲಿ ಮತದಾರರ ಚೀಟಿ ಅಲ್ಲ ಎಂದು ಪ್ರತಿಪಾದಿಸಿದೆ. ಈ ರೀತಿಯಲ್ಲಿ ಒಂದೇ EPIC ಸಂಖ್ಯೆ ಹೊಂದಿರುವ ಮತದಾರರ ಚೀಟಿಗಳ ಜನಸಂಖ್ಯಾ ವಿವರಗಳು, ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಸೇರಿದಂತೆ ಇತರ ವಿವರಗಳು ವಿಭಿನ್ನವಾಗಿವೆ ಎಂದು ಅದು ಹೇಳಿದೆ.
ಈ ಬಗ್ಗೆ ಮತ್ತೊಂದು ಹೇಳಿಕೆ ನೀಡಿರುವ ಆಯೋಗ, 2000 ಇಸವಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ EPIC ಸರಣಿಯನ್ನು ಹಂಚಿಕೆ ಮಾಡಿದಾಗಿನಿಂದ, ಕೆಲವು ಚುನಾವಣಾ ನೋಂದಣಿ ಅಧಿಕಾರಿಗಳು ಸರಿಯಾದ ಸರಣಿಯನ್ನು ಬಳಸಿಲ್ಲ ಎಂದು ಹೇಳಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವತಂತ್ರವಾಗಿ ಮತದಾರರ ಪಟ್ಟಿಗಳ ದೇಟಾ ಬೇಸ್‌ಗಳನ್ನು ನಿರ್ವಹಿಸುತ್ತಿರುವುದರಿಂದ ತಪ್ಪಾದ ಸರಣಿಗಳಿಂದಾಗಿ ಒಂದೇ ರೀತಿಯ ಸಂಖ್ಯೆಗಳ ಹಂಚಿಕೆಯನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉನ್ನಾವೊ: ಹೋಳಿಯ ಬಣ್ಣ ಬಳಿಯುವುದನ್ನು ವಿರೋಧಿಸಿದಕ್ಕಾಗಿ ಮುಸ್ಲಿಂ ವ್ಯಕ್ತಿಯ ಹತ್ಯೆ
ಉನ್ನಾವೊ: ಹೋಳಿಯ ಬಣ್ಣ ಬಳಿಯುವುದನ್ನು ವಿರೋಧಿಸಿದಕ್ಕಾಗಿ ಮುಸ್ಲಿಂ ವ್ಯಕ್ತಿಯ ಹತ್ಯೆ

