ಎಲ್ಲಾ ಮತದಾರರಿಗೆ ವಿಶಿಷ್ಟವಾದ ರಾಷ್ಟ್ರೀಯ EPIC ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮೂರು ತಿಂಗಳೊಳಗೆ ವಿವಿಧ ರಾಜ್ಯಗಳಲ್ಲಿ ಒಂದೇ ರೀತಿಯ ಮತದಾರರ ಗುರುತಿನ ಸಂಖ್ಯೆಗಳನ್ನು ನೀಡಲಾಗುತ್ತಿರುವ ಸಮಸ್ಯೆಯನ್ನು ಪರಿಹರಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಮತದಾರ ಚೀಟಿ
EPIC ಅಥವಾ ಮತದಾರರ ಫೋಟೋ ಗುರುತಿನ ಚೀಟಿಯನ್ನು ಚುನಾವಣಾ ಆಯೋಗವು ನೀಡುತ್ತದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರು ಚುನಾವಣೆಯಲ್ಲಿ ಮತ ಚಲಾಯಿಸಲು ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. EPIC ಸಂಖ್ಯೆ ಮತದಾರರ ಗುರುತಿನ ಚೀಟಿ ಸಂಖ್ಯೆಯಾಗಿದೆ. ಮತದಾರ ಚೀಟಿ
100 ಕ್ಕೂ ಹೆಚ್ಚು ಮತದಾರರ ಮಾದರಿ ವಿಚಾರಣೆಯಲ್ಲಿ ಒಂದೇ ರೀತಿ EPIC ಸಂಖ್ಯೆಗಳನ್ನು ಹೊಂದಿರುವ ಮತದಾರರು “ನಿಜವಾದ ಮತದಾರ”ರಾಗಿದ್ದು ಅವರು ನಕಲಿ ಮತದಾರರಲ್ಲ ಎಂದು ತಿಳಿದುಬಂದಿದೆ ಎಂದು ಚುನಾವಣಾ ಆಯೋಗ ಹೇಳಿದೆ.
“2000 ನೇ ಇಸವಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ EPIC ಸರಣಿಯನ್ನು ಹಂಚಿಕೆ ಮಾಡಿದಾಗಿನಿಂದ, ಕೆಲವು ERO ಗಳು [ಚುನಾವಣಾ ನೋಂದಣಿ ಅಧಿಕಾರಿಗಳು] ಸರಿಯಾದ ಸರಣಿಯನ್ನು ಬಳಸಲಿಲ್ಲ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
“ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತದಾರರ ಪಟ್ಟಿಯ ಡೇಟಾಬೇಸ್‌ಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿರುವುದರಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತಪ್ಪಾದ ಸರಣಿಗಳಿಂದಾಗಿ ಒಂದೆ ರೀತಿಯ ಸಂಖ್ಯೆಗಳ ಹಂಚಿಕೆಯ ಸಮಸ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.” ಎಂದು ಅದು ಹೇಳಿದೆ.
ಒಂದೇ ರೀತಿಯ ಸಂಖ್ಯೆಯಿದ್ದರೂ ಕೂಡಾ, ಮತದಾರರು ತಮ್ಮ ಮತಗಳನ್ನು ಬೇರೆ ಕ್ಷೇತ್ರಗಳಲ್ಲಿ ಚಲಾಯಿಸಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿಕೊಂಡಿದೆ.
ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಬಿಜೆಪಿಯು ಚುನಾವಣಾ ಆಯೋಗದೊಂದಿಗೆ ಒಪ್ಪಂದ ಮಾಡಿಕೊಂಡು ಮತದಾರರ ಪಟ್ಟಿಗೆ ನಕಲಿ ಮತದಾರರನ್ನು ಸೇರಿಸುತ್ತಿದೆ ಎಂದು ಫೆಬ್ರವರಿ 27 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.
ಬಿಜೆಪಿಯು ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣ ನಿವಾಸಿಗಳನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸೇರಿಸಲು ಅಸೋಸಿಯೇಷನ್ ಆಫ್ ಬಿಲಿಯನ್ ಮೈಂಡ್ಸ್ ಮತ್ತು ಇಂಡಿಯಾ 360 ಎಂಬ ಎರಡು ಸಂಸ್ಥೆಗಳನ್ನು ನೇಮಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. 2026 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ನಡೆಯಲಿದೆ.
ವಿವಿಧ ರಾಜ್ಯಗಳಲ್ಲಿ ನೀಡಲಾದ ಮತದಾರರ ಗುರುತಿನ ಚೀಟಿ ಸಂಖ್ಯೆಗಳು ಒಂದೇ ರೀತಿಯಲ್ಲಿ ಇದ್ದರೆ ಅದರ ಅರ್ಥ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಎಂದಲ್ಲ ಎಂದು ಚುನಾವಣಾ ಆಯೋಗ ಮಾರ್ಚ್ 2 ರಂದು ಹೇಳಿತ್ತು. ರಾಜ್ಯಗಳು ಒಂದೇ ಆಲ್ಫಾನ್ಯೂಮರಿಕ್ ಸರಣಿಯನ್ನು ಬಳಸುವುದರ ಪರಿಣಾಮವಾಗಿದೆ ಒಂದಕ್ಕಿಂತ ಹೆಚ್ಚು ಮತದಾರರಿಗೆ ಒಂದೇ ಸಂಖ್ಯೆಯ ಹಂಚಿಕೆಯಾಗಿದೆ ಎಂದು ಅದು ಹೇಳಿತ್ತು.
“…ಕೆಲವು ಮತದಾರರ EPIC ಸಂಖ್ಯೆಗಳು ಒಂದೇ ಆಗಿರಬಹುದು, ಜನಸಂಖ್ಯಾ ವಿವರಗಳು, ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆ ಸೇರಿದಂತೆ ಇತರ ವಿವರಗಳು ಒಂದೇ EPIC ಸಂಖ್ಯೆಯನ್ನು ಹೊಂದಿರುವ ಮತದಾರರಿಗೆ ವಿಭಿನ್ನವಾಗಿರುತ್ತವೆ.” ಎಂದು ಚುನಾವಣಾ ಆಯೋಗವು ಹೇಳಿತ್ತು. ಮತದಾರರು ತಮ್ಮ EPIC ಸಂಖ್ಯೆಯನ್ನು ಲೆಕ್ಕಿಸದೆ, ತಮ್ಮ ನೋಂದಾಯಿತ ಕ್ಷೇತ್ರಗಳಲ್ಲಿ ಗೊತ್ತುಪಡಿಸಿದ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಬಹುದು ಎಂದು ಅದು ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಎನ್ಇಪಿ, ಕ್ಷೇತ್ರ ಪುನರ್ವಿಂಗಡನೆ, ವಕ್ಫ್ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಭೆ
ಎನ್ಇಪಿ, ಕ್ಷೇತ್ರ ಪುನರ್ವಿಂಗಡನೆ, ವಕ್ಫ್ ಕುರಿತು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಸಭೆ

