ವಕ್ಫ್ (ತಿದ್ದುಪಡಿ) ಕಾಯ್ದೆಯ ಕುರಿತು ಸಂಸತ್ತಿನಲ್ಲಿ ನಡೆದ ಸುದೀರ್ಘ ಚರ್ಚೆಯ ಸಂದರ್ಭದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾತನಾಡದಿದ್ದಕ್ಕಾಗಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಶನಿವಾರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಲಿತರು, ಅಲ್ಪಸಂಖ್ಯಾತರ ವಿಚಾರದಲ್ಲಿ ಸಮಾನವಾಗಿ ವಿಫಲವಾಗಿದೆ ಎಂದು ಹೇಳಿದ್ದಾರೆ. ವಕ್ಫ್ ಕಾಯ್ದೆ
“ರಾಹುಲ್ ಗಾಂಧಿ ಅವರು ವಕ್ಫ್ ವಿಚಾರದಲ್ಲಿ ಮಾತನಾಡದೆ ಇರುವುದರಿಂದ ಮುಸ್ಲಿಮರು ತೀವ್ರಗಾಗಿ ಕೋಪಗೊಳ್ಳುವುದು ಮತ್ತು ಇಂಡಿಯಾ ಮೈತ್ರಿಯ ಪಕ್ಷಗಳು ಈ ವಿಷಯದ ಬಗ್ಗೆ ಆಕ್ರೋಶಗೊಳ್ಳುವುದು ಸಹಜ” ಎಂದು ಮಾಯಾವತಿ ಹೇಳಿದ್ದಾರೆ.
“ವಿರೋಧ ಪಕ್ಷಗಳು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಖಂಡಿಸಿ, ಸಿಎಎಯಂತೆ ಸಂವಿಧಾನವನ್ನು ಉಲ್ಲಂಘಿಸಿದ ಪ್ರಕರಣ ಎಂದು ಕರೆದರೂ, ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ವ್ಯಾಪಕ ಚರ್ಚೆ ನಡೆದಿದ್ದರೂ ಸಹ, ಸದನದಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಮಾತನಾಡದಿರಲು ವಿಪಕ್ಷ ನಾಯಕ ತೆಗೆದುಕೊಂಡ ನಿರ್ಧಾರ ಸಮರ್ಥನೀಯವೇ?” ಎಂದು ಅವರು ಎಕ್ಸ್‌ನಲ್ಲಿ ಕೇಳಿದ್ದಾರೆ.
1. वक्फ संशोधन बिल पर लोकसभा में हुई लम्बी चर्चा में नेता प्रतिपक्ष द्वारा कुछ नहीं बोलना अर्थात सीएए की तरह संविधान उल्लंघन का मामला होने के विपक्ष के आरोप के बावजूद इनका चुप्पी साधे रहना क्या उचित? इसे लेकर मुस्लिम समाज में आक्रोश व इनके इण्डिया गठबंधन में भी बेचैनी स्वाभाविक।
— Mayawati (@Mayawati) April 12, 2025
ಯಾವುದೇ ಸಂದರ್ಭ ಇರಲಿ, ಕಾಂಗ್ರೆಸ್ ಮತ್ತು ಬಿಜೆಪಿ ದಲಿತರ ಕಲ್ಯಾಣ, ಸರ್ಕಾರಿ ಉದ್ಯೋಗಗಳು, ಶಿಕ್ಷಣದಿಂದ ವಾಸ್ತವದಲ್ಲಿ ವಂಚಿತಗೊಳಿಸಿದ್ದಕ್ಕಾಗಿ ಸಮಾನವಾಗಿ ತಪ್ಪಿತಸ್ಥರು ಎಂದು ಮಾಯಾವತಿ ಹೇಳಿದ್ದಾರೆ. “ಈ ಪಕ್ಷಗಳ ವಂಚನೆಯಿಂದ ತಪ್ಪಿಸಿಕೊಳ್ಳುವ ಅಗತ್ಯವನ್ನು ಧಾರ್ಮಿಕ ಅಲ್ಪಸಂಖ್ಯಾತರು ಅರಿತುಕೊಳ್ಳುವುದು ಮುಖ್ಯ” ಎಂದು ಅವರು ಹೇಳಿದ್ದಾರೆ.
ಈ ಪಕ್ಷಗಳ ಇಂತಹ ತಂತ್ರಗಳಿಂದಾಗಿ ಬಹುಜನರು ಎಲ್ಲಾ ವಲಯದಲ್ಲೂ ಕಳಪೆ ಸಾಧನೆ ಮಾಡಿದ್ದಾರೆ ಎಂದು ಮಾಯಾವತಿ ಪ್ರತಿಪಾದಿಸಿದ್ದಾರೆ. “ಅಧಿಕಾರ ಮತ್ತು ಇತರ ಕ್ಷೇತ್ರಗಳಲ್ಲಿ ಖಾಸಗೀಕರಣದ ವಿಷಯವು ಸಹ ಆತಂಕಕಾರಿಯಾಗಿದೆ ಮತ್ತು ಸರ್ಕಾರವು ಜನರ ಕಲ್ಯಾಣದ ಕಡೆಗೆ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು” ಎಂದು ಅವರು ಹೇಳಿದ್ದಾರೆ.
ಹೊಸ ವಕ್ಫ್ ಕಾನೂನಿನಲ್ಲಿರುವ ನಿಬಂಧನೆಗಳನ್ನು ಮರುಪರಿಶೀಲಿಸುವಂತೆ ಮತ್ತು ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಎಸ್‌ಪಿಯ ಮುಖ್ಯಸ್ಥರೂ ಆಗಿರುವ ಮಾಯಾವತಿ ಅವರು ಗುರುವಾರ ಕೇಂದ್ರ ಸರ್ಕಾರವನ್ನು ಕೇಳಿದ್ದರು. ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ ಕಾಯ್ದೆಯಲ್ಲಿ, ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವ ಕಾಯ್ದೆಯ ನಿಬಂಧನೆಯು ಪ್ರಾಥಮಿಕ ನೋಟದಲ್ಲಿ ಉತ್ತಮವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಮಂಗಳವಾರ ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಅನ್ನು ಅಧಿಸೂಚನೆ ಹೊರಡಿಸಿದೆ. ಇದು ಎರಡೂ ಸದನಗಳಲ್ಲಿ ಬಿಸಿ ಚರ್ಚೆಗಳ ನಂತರ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು. ಅದರ ನಂತರ ಏಪ್ರಿಲ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆಯನ್ನು ಪಡೆಯಿತು. ಮಸೂದೆಯನ್ನು ರಾಜ್ಯಸಭೆಯಲ್ಲಿ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರೋಧಿಸಿ ಮತ ಚಲಾಯಿಸುವ ಮೂಲಕ ಅಂಗೀಕರಿಸಲಾಯಿತು. ಲೋಕಸಭೆಯಲ್ಲಿ 288 ಸದಸ್ಯರು ಬೆಂಬಲಿಸಿದರು ಮತ್ತು 232 ಸದಸ್ಯರು ವಿರೋಧಿಸಿ ಮತ ಚಲಾಯಿಸಿದರು. ವಕ್ಫ್ ಕಾಯ್ದೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಛತ್ತೀಸ್‌ಗಢ | ಪ್ರೇಮ ಸಂಬಂಧ ಆರೋಪಿಸಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ
ಛತ್ತೀಸ್‌ಗಢ | ಪ್ರೇಮ ಸಂಬಂಧ ಆರೋಪಿಸಿ ದಲಿತ ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ


Man evolved and then came religion/caste/restrictions etc?
For such evolution man/woman mating relations were necssary and essential?
Persons of different religions mating will result in children, family etc?