ವಕ್ಫ್ (ತಿದ್ದುಪಡಿ) ಮಸೂದೆ – 2024 ರ ಜಂಟಿ ಸಮಿತಿಯ ವರದಿಯನ್ನು ಫೆಬ್ರವರಿ 3 ರ ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಈ ಮಧ್ಯೆ, ಪ್ರತಿಪಕ್ಷದ ಸದಸ್ಯರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಭಿನ್ನಾಭಿಪ್ರಾಯದ ಟಿಪ್ಪಣಿಯ ಭಾಗಗಳನ್ನು ಅದರಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ವಕ್ಫ್ ಮಸೂದೆ ವರದಿ
ಸದನದ ವ್ಯವಹಾರಗಳ ಪಟ್ಟಿಯ ಪ್ರಕಾರ, ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್, ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಅವರೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ವರದಿಯನ್ನು ಮಂಡಿಸಲಿದ್ದಾರೆ. ಅವರು ಸಮಿತಿಯ ಮುಂದೆ ನೀಡಲಾದ ಪುರಾವೆಗಳನ್ನು ಸಹ ದಾಖಲಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜನವರಿ 30 ರಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ವರದಿಯನ್ನು ಸಲ್ಲಿಸಲಾಯಿತು. ಅದೇ ದಿನ, ಜಗದಾಂಬಿಕಾ ಪಾಲ್ ಅವರು ಅಂತಿಮ ವರದಿಯನ್ನು ಹಸ್ತಾಂತರಿಸಲು ಸಂಸತ್ತಿನಲ್ಲಿ ಸ್ಪೀಕರ್ ಅವರನ್ನು ಭೇಟಿಯಾಗಿದ್ದರು. ಜನವರಿ 29 ರ ಬುಧವಾರ ಜೆಪಿಸಿ ಕರಡು ವರದಿ ಮತ್ತು ತಿದ್ದುಪಡಿ ಮಾಡಿದ ಮಸೂದೆಯನ್ನು ಅಂಗೀಕರಿಸಿತು. ಈ ವೇಳೆ ಪ್ರತಿಪಕ್ಷದ ನಾಯಕರು ವರದಿಯ ಬಗ್ಗೆ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸಲ್ಲಿಸಿದ್ದರು. ವಕ್ಫ್ ಮಸೂದೆ ವರದಿ
ಏತನ್ಮಧ್ಯೆ, ವಿರೋಧ ಪಕ್ಷದ ಸದಸ್ಯ ಮತ್ತು ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್ ಅವರು ಮಸೂದೆಯ ಮೇಲಿನ ತಮ್ಮ ಭಿನ್ನಾಭಿಪ್ರಾಯದ ಟಿಪ್ಪಣಿಯ ಭಾಗಗಳನ್ನು ತಮಗೆ ತಿಳಿಯದೆಯೇ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ವಿರೋಧ ಪಕ್ಷದ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಅವರು ವಿವರಿಸಿದ್ದು, ಇದರ ವಿರೋಧಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಹುಸೇನ್, “ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಜಂಟಿ ಸಮಿತಿಯ ಸದಸ್ಯನಾಗಿ, ಮಸೂದೆಯನ್ನು ವಿರೋಧಿಸುವ ವಿವರವಾದ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ನಾನು ಸಲ್ಲಿಸಿದ್ದೆ. ಆಘಾತಕಾರಿ ವಿಚಾರ ಏನೆಂದರೆ, ನನ್ನ ಭಿನ್ನಾಭಿಪ್ರಾಯದ ಟಿಪ್ಪಣಿಯ ಕೆಲವು ಭಾಗಗಳನ್ನು ನನ್ನ ಅರಿವಿಲ್ಲದೆಯೇ ತಿದ್ದುಪಡಿ ಮಾಡಲಾಗಿದೆ!” ಎಂದು ಆರೋಪಿಸಿದ್ದಾರೆ.
As a Member of the Joint Committee on the Waqf (Amendment) Bill, 2024, I had submitted a detailed dissent note opposing the Bill. Shockingly, parts of my dissent note have been redacted without my knowledge!
The Joint Committee on Waqf (Amendment) Bill, 2024 was already… pic.twitter.com/FNLm4w78Nt
— Dr Syed Naseer Hussain,MP Rajya Sabha (@NasirHussainINC) February 1, 2025
“ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಜಂಟಿ ಸಮಿತಿಯನ್ನು ಈಗಾಗಲೇ ಪ್ರಹಸನಕ್ಕೆ ಇಳಿಸಲಾಗಿದೆ. ಆದರೆ, ವಿರೋಧ ಪಕ್ಷದ ಸಂಸದರ ಭಿನ್ನಾಭಿಪ್ರಾಯದ ಧ್ವನಿಗಳನ್ನು ಸೆನ್ಸಾರ್ ಮಾಡುವ ಮೂಲಕ ಅವರು ಈಗ ಇನ್ನೂ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅವರು ಯಾವುದಕ್ಕೆ ಹೆದರುತ್ತಿದ್ದಾರೆ? ನಮ್ಮನ್ನು ಮೌನಗೊಳಿಸಲು ಈ ಪ್ರಯತ್ನವನ್ನು ಅವರು ಯಾಕೆ ಮಾಡುತ್ತಿದ್ದಾರೆ?” ಎಂದು ಅವರು ಕೇಳಿದ್ದಾರೆ.
ಸಮಿತಿಯು ಈ ಹಿಂದೆ 1995 ರ ವಕ್ಫ್ ಮಸೂದೆಯನ್ನು 14 ಷರತ್ತುಗಳು ಮತ್ತು ವಿಭಾಗಗಳಲ್ಲಿ 25 ತಿದ್ದುಪಡಿಗಳೊಂದಿಗೆ ತೆರವುಗೊಳಿಸಿತ್ತು.
“ನಾವು ವರದಿ ಮತ್ತು ತಿದ್ದುಪಡಿ ಮಾಡಿದ ಪರಿಷ್ಕೃತ ಮಸೂದೆಯನ್ನು ಅಂಗೀಕರಿಸಿದ್ದೇವೆ. ಮೊದಲ ಬಾರಿಗೆ, ವಕ್ಫ್‌ನ ಪ್ರಯೋಜನಗಳು ತಳಮಟ್ಟದಲ್ಲಿರುವ, ಬಡವರು, ಮಹಿಳೆಯರು ಮತ್ತು ಅನಾಥರಿಗೆ ಹೋಗಬೇಕು ಎಂದು ಹೇಳುವ ವಿಭಾಗವನ್ನು ನಾವು ಸೇರಿಸಿದ್ದೇವೆ. ನಾಳೆ, ನಾವು ಈ ವರದಿಯನ್ನು ಸ್ಪೀಕರ್‌ಗೆ ಮಂಡಿಸುತ್ತೇವೆ” ಎಂದು ಸಂಸದ ಜಗದಾಂಬಿಕಾ ಪಾಲ್ ಹೇಳಿದ್ದಾರೆ.
“ನಮ್ಮ ಮುಂದೆ 44 ಷರತ್ತುಗಳಿದ್ದವು, ಅವುಗಳಲ್ಲಿ 14 ಷರತ್ತುಗಳಲ್ಲಿ ಸದಸ್ಯರು ತಿದ್ದುಪಡಿಗಳನ್ನು ಪ್ರಸ್ತಾಪಿಸಿದರು. ನಾವು ಬಹುಮತದ ಮತವನ್ನು ಚಲಾಯಿಸಿದ ನಂತರ ಈ ತಿದ್ದುಪಡಿಗಳನ್ನು ಅಂಗೀಕರಿಸಲಾಯಿತು” ಎಂದು ಅವರು ಹೇಳಿದ್ದಾರೆ.
ಜನವರಿ 31 ರಂದು ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನವು ಏಪ್ರಿಲ್ 4 ರವರೆಗೆ ಮುಂದುವರಿಯುತ್ತದೆ.
ಇದನ್ನೂಓದಿ: ಬಿಹಾರದ ಬಗ್ಗೆ ವಿಪಕ್ಷಗಳಿಗೆ ನಂಜು – ಬಜೆಟ್ ಸಮರ್ಥಿಸಿದ ಕೇಂದ್ರ ಸಚಿವ ಪಿಯೂಷ್
ಬಿಹಾರದ ಬಗ್ಗೆ ವಿಪಕ್ಷಗಳಿಗೆ ನಂಜು – ಬಜೆಟ್ ಸಮರ್ಥಿಸಿದ ಕೇಂದ್ರ ಸಚಿವ ಪಿಯೂಷ್


