ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸದೀಯ ಸಮಿತಿಯಿಂದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಬಿಜೆಪಿಯ ಅಭಿಜಿತ್ ಗಂಗೋಪಾಧ್ಯಾಯ ಅವರೊಂದಿಗೆ ನಡೆದ ವಾಕ್ಸಮರ ನಡೆಸಿದ್ದರು. ಈ ವೇಳೆ ಅವರು ಗಾಜಿನ ನೀರಿನ ಬಾಟಲಿಯನ್ನು ಒಡೆದು ಕುರ್ಚಿಯತ್ತ ಎಸೆದಿದ್ದರು. ಹಾಗಾಗಿ ಅವರ ಬೆರಳುಗಳಿಗೆ ಗಾಯವಾಗಿತ್ತು.
ಸಮಿತಿಯ ಅಧ್ಯಕ್ಷ ಮತ್ತು ಹಿರಿಯ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರು ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ನಡವಳಿಕೆಯನ್ನು ಖಂಡಿಸಿದ್ದಾರೆ. ಅಂತಹ ಕ್ರಮಗಳು “ಗಂಭೀರವಾಗಿದ್ದು” ಎಲ್ಲಾ ಮಿತಿಗಳನ್ನು ದಾಟಿವೆ ಎಂದು ಅವರು ಹೇಳಿದ್ದಾರೆ. “ಸಂಸದರಾಗಿ ಎಲ್ಲರೂ ಸವಲತ್ತುಗಳನ್ನು ಅನುಭವಿಸುತ್ತಾರೆ, ನಾಳೆ ಯಾರಾದರೂ ರಿವಾಲ್ವರ್‌ನೊಂದಿಗೆ ಕಾಣಿಸಿಕೊಂಡರೆ ಏನರ್ಥ?, ನಾನು ಸ್ವಲ್ಪದರಲ್ಲೇ ಪಾರಾಗಿದೆ” ಎಂದು ಜಗದಾಂಬಿಕ ಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಮಿತಿಯ ಸಭೆಯಲ್ಲಿ, ಕಲ್ಯಾಣ್ ಬ್ಯಾನರ್ಜಿ ಅವರು ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ ಅವರೊಂದಿಗೆ ವಾಕ್ಸಮರ ನಡೆಸಿದ್ದು, ಇಬ್ಬರೂ ಬಂಗಾಳಿ ಭಾಷೆಯಲ್ಲಿ ಪರಸ್ಪರ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ವಿರೋಧ ಪಕ್ಷದ ಸದಸ್ಯರು ಘಟನೆಗೆ ಅಭಿಜಿತ್ ಅವರನ್ನು ಗುರಿಯಾಗಿಸಿದ್ದಾರೆ.
ಘರ್ಷಣೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ಅವರ ಹೆಬ್ಬೆರಳು ಮತ್ತು ತೋರುಬೆರಳಿಗೆ ಗಾಯವಾಗಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಅವರನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಸಭೆಯ ಕೋಣೆಗೆ ಮರಳಿ ಕರೆದೊಯ್ದರು.
ಘಟನೆಯ ಕಾರಣಕ್ಕೆ ಅವರ ವಿರುದ್ಧ ಕ್ರಮಕೈಗೊಳ್ಳಲು, ಮುಂದಿನ ಸಭೆ ನಡೆಯುವಾಗ ಕಲ್ಯಾಣ್ ಬ್ಯಾನರ್ಜಿ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸುವಂತೆ ಬಿಜೆಪಿ ಸದಸ್ಯರೊಬ್ಬರು ಸೂಚಿಸಿದ್ದಾರೆ. ಇದಕ್ಕೆ ಆಡಳಿತಾರೂಢ ಮೈತ್ರಿಕೂಟ ಮತ್ತು ವಿರೋಧ ಪಕ್ಷದ ಸದಸ್ಯರು ಪಕ್ಷಾತೀತವಾಗಿ ಮತ ಚಲಾಯಿಸಿದ್ದು 10-8 ಮತಗಳು ಚಲಾವಣೆಯಾಗಿವೆ.
ಓದಿ: ಕಳೆದ 24 ಗಂಟೆಗಳಲ್ಲಿ 79 ವಿಮಾನಗಳಿಗೆ ಬಾಂಬ್ ಬೆದರಿಕೆ; ಕಳೆದ ವಾರದಿಂದ 160 ಬೆದರಿಕೆ ಕರೆಗಳು
ಈ ನಡುವೆ ಕಲ್ಯಾಣ್ ಬ್ಯಾನರ್ಜಿ ಅವರು ಬಾಟಲಿ ಒಡೆದಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದು, ತಾನು ಅದನ್ನು ಜಗದಾಂಬಿಕ ಪಾಲ್ ಕಡೆಗೆ ಎಸೆಯಲು ಎಂದಿಗೂ ಉದ್ದೇಶಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು “ಪಕ್ಷಪಾತ” ವರ್ತನೆ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಲ್ಯಾಣ್ ಬ್ಯಾನರ್ಜಿ ಅವರಿಗೆ ಕೇವಲ ಒಂದು ದಿನದ ಅಮಾನತು ಶಿಕ್ಷೆಯನ್ನು ನೀಡಿದ್ದನ್ನು ಅಭಿಜಿತ್ ಗಂಗೋಪಾಧ್ಯಾಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಕಲ್ಯಾಣ್ ಬ್ಯಾನರ್ಜಿ ಅವರು ತನ್ನ ಮೇಲೆ ನಡೆಸಿದ ಮೌಖಿಕ ದಾಳಿಯ ಬಗ್ಗೆ ಯಾವುದೆ ಪ್ರಸ್ತಾಪ ಮಾಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಈ ಪ್ರಕಣವನ್ನು ಉನ್ನತ ಮಟ್ಟದಲ್ಲಿ ವ್ಯವಹರಿಸುವ ಆಗ್ರಹಿಸುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ.
ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸದೀಯ ಸಮಿತಿಯ ಸಭೆಯಲ್ಲಿ ಆಗಾಗ್ಗೆ ವಿರೋಧ ಪಕ್ಷದ ಸದಸ್ಯರೊಂದಿಗೆ ವಾಕ್ಸಮರ ನಡೆಯುತ್ತಲೆ ಇವೆ. ಸಮಿತಿಯ ಅಧ್ಯಕ್ಷರು, ವಕ್ಫ್ ಸಮಸ್ಯೆಗಳಲ್ಲಿ ಯಾವುದೇ ಪಾಲು ಇಲ್ಲದ ಹಿಂದೂಗಳ ಪರವಾಗಿ ಕೆಲಸ ಮಾಡುವವರು ಸೇರಿದಂತೆ ವಿವಿಧ ಸಂಘಟನೆಗಳನ್ನು ಸಭೆಗೆ ಆಹ್ವಾನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಓದಿ: ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ‘ವಾಸದ ಪರವಾನಗಿ’ ನವೀಕರಿಸಿದ ಕೇಂದ್ರ ಸರ್ಕಾರ?
ಮಂಗಳವಾರ ಸಮಿತಿಯು ಒಡಿಶಾ ಮೂಲದ ಎರಡು ಸಂಸ್ಥೆಗಳಾದ ಜಸ್ಟೀಸ್ ಇನ್ ರಿಯಾಲಿಟಿ ಮತ್ತು ಪಂಚಸಖ ಬನಿ ಪ್ರಚಾರ್ ಅವರ ಅಭಿಪ್ರಾಯಗಳನ್ನು ಆಲಿಸುತ್ತಿತ್ತು. ಇವೆರಡೂ ಸಂಘಟನೆಗಳು ನಿವೃತ್ತ ನ್ಯಾಯಾಧೀಶರು ಮತ್ತು ವಕೀಲರನ್ನು ಒಳಗೊಂಡಿವೆ. ಈ ಎರಡೂ ಸಂಸ್ಥೆಗಳು ತಿದ್ದುಪಡಿಗಳನ್ನು ಬೆಂಬಲಿಸಿದ್ದು, ಹೆಚ್ಚಿನ ಸಲಹೆಗಳನ್ನು ನೀಡಿವೆ.
ಮುಂಗಾರು ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಕೂಡಲೇ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲನೆಗಾಗಿ ಸದನಗಳ ಜಂಟಿ ಸಮಿತಿಗೆ ನೀಡಲಾಗಿತ್ತು.
ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನನ್ನು ಈ ಮಸೂದೆ ತಿದ್ದುಪಡಿ ಮಾಡುತ್ತಿದೆ. ವಕ್ಪ್ ಆಡಳಿತದಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು | ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಸಾವು; 17 ಕಾರ್ಮಿಕರು ಅಪಾಯದಲ್ಲಿ
ಬೆಂಗಳೂರು | ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ಸಾವು; 17 ಕಾರ್ಮಿಕರು ಅಪಾಯದಲ್ಲಿ


